ಬೆಂಗಳೂರು : ಮೈಕ್ರೋಫೈನಾನ್ಸ್ ಕಂಪನಿಗಳು ಜನಸಾಮಾನ್ಯರಿಗೆ ನೀಡುತ್ತಿದ್ದ ಸಾಲಶೂಲಕ್ಕೆ ಕೊನೆಗೂ ಮುಕ್ತಿ ದೊರೆತಿದೆ. ಮೈಕ್ರೋಫೈನಾನ್ಸ್ ವಿಧೇಯಕವನ್ನು ಸೋಮವಾರ ಸದನದಲ್ಲಿ ಅಂಗೀಕಾರಗೊಳಿಸಲಾಗಿದ್ದು, ಇನ್ನು ಮುಂದೆ ಮೈಕ್ರೋಫೈನಾನ್ಸ್ ಸಿಬ್ಬಂದಿ ಕಿರುಕುಳ ಕೊನೆಯಾಗಲಿದೆ.
ಸಚಿವ ಪ್ರಿಯಾಂಕ್ ಖರ್ಗೆ ಸದನವನ್ನು ಮಂಡಿಸಿದ ಬಳಿಕ ಸಭಾಪತಿಗಳಾದ ಯು.ಟಿ ಖಾದರ್ ವಿಧೇಯಕವನ್ನು ಅಂಗೀಕರಿಸಿದರು.
ಇತ್ತೀಚಿನ ದಿನಗಳಲ್ಲಿ ಮೈಕ್ರೋಫೈನಾನ್ಸ್ ಕಂಪನಿಗಳ ಕಿರುಕುಳ ತಾಳಲಾರದೇ ಜನರು ಆತ್ಮಹತ್ಯೆಗೆ ಶರಣಾಗುವ ಘಟನೆಗಳು ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ಮೈಕ್ರೋಫೈನಾನ್ಸ್ ಕಂಪನಿಗಳ ವಿರುದ್ದ ವಿಧೇಯಕ ರಚಿಸಿತ್ತು.