Ad imageAd image

ಮುಸ್ಲಿಂರಿಲ್ಲದ ಮುಷ್ಠಗಟ್ಟೆ ಗ್ರಾಮದಲ್ಲಿ ಮೊಹರಂ ಸಂಭ್ರಮ

Bharath Vaibhav
ಮುಸ್ಲಿಂರಿಲ್ಲದ ಮುಷ್ಠಗಟ್ಟೆ ಗ್ರಾಮದಲ್ಲಿ ಮೊಹರಂ ಸಂಭ್ರಮ
WhatsApp Group Join Now
Telegram Group Join Now

——————————————————————–ಭಾವೈಕ್ಯತೆಯ ಸಂಕೇತ ಮೊಹರಂ ಹಬ್ಬದ ವಿಶೇಷ 
ಕುರುಗೋಡು: ಮುಸ್ಲಿಂ ಬಂಧುಗಳೇ ಇಲ್ಲದ ತಾಲೂಕಿನ ಮುಷ್ಠಗಟ್ಟೆ ಗ್ರಾಮದಲ್ಲಿ ಹಿಂದೂಗಳೇ ನೂರಾರು ವರ್ಷಗಳಿಂದ ಊರ ಹಬ್ಬದಂತೆ ಮೊಹರಂ ಆಚರಿಸುತ್ತಾ ಬರುವ ಮೂಲಕ ಭಾವೈಕ್ಯ ಮೆರೆಯುತ್ತಿದ್ದಾರೆ.

ಹುಡುಕಿದರೂ ಒಂದೇ ಒಂದು ಮುಸ್ಲಿಂ ಕುಟುಂಬವೂ ಇಲ್ಲ. ಅದರೂ ಅದ್ದೂರಿ ಆಚರಣೆ ತಪ್ಪಿಲ್ಲ

ಗ್ರಾಮದಲ್ಲಿ ಹಿಂದೂಗಳನ್ನು ಬಿಟ್ಟರೆ ಬೇರೆ ಯಾವ ಧರ್ಮದವರೂ ಇಲ್ಲಿ ವಾಸವಿಲ್ಲ. ಆದರೂ ಅಲ್ಲಿ ಮೊಹರಂ ಹಬ್ಬದ ಆಚರಣೆ ಪ್ರತಿ ವರ್ಷ ಚಾಚು ತಪ್ಪದೇ ನಡೆದುಕೊಂಡು ಬಂದಿದೆ. ಸುಮಾರು 1000 ಮನೆ,2000
ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ ಹುಡುಕಿದರೂ ಒಂದೇ ಒಂದೂ ಮುಸ್ಲಿಂ ಮನೆತನಗಳಿಲ್ಲ. ಹಿಂದೂಗಳೇ ಮುಂದು ನಿಂತು ಮೊಹರಂ ಆಚರಣೆ ನಡೆಸುತ್ತಿರುವುದು ಗ್ರಾಮಸ್ಥರ ಸೌಹಾರ್ಯದತೆಗೆ ಸಾಕ್ಷಿ ಆಗಿದೆ.

ಭಕ್ತರ ಇಷ್ಟಾರ್ಥ ಪೂರೈಸುವ ಪೀರಾಲ ದೇವರು: ಗ್ರಾಮಸ್ಥರು ದೇವರಿಗೆ ಬಂದು ಶ್ರದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸುವುದು ಹಿಂದಿನಿಂದಲೂ ಬಂದ ಪರಂಪರೆ. ಇಲ್ಲಿನ ಮೂರುಗೇರೆ ದೇವರು ಕಂಪ್ಲಿ ದೇವರು ಮೌಲಾಲಿ ದೇವರುಗಳು ಭಕ್ತರ ಇಷ್ಟಾರ್ಥ ಪೂರೈಸುವ ದೇವರೆಂದೇ ಖ್ಯಾತಿ ಗಳಿಸಿದೆ. ಸುತ್ತಮುತ್ತಲಿನ ಗ್ರಾಮಸ್ಥರು ಮೊಹರಂ ಸಂದರ್ಭದಲ್ಲಿ ಭೇಟಿ ದೇವರಿಗೆ ಸಕ್ಕರೆ ಅರ್ಪಿಸುತ್ತಾರೆ. ನೆಂಟಸ್ಥರು ಹಬ್ಬಕ್ಕೆ ಬಂದು ಗ್ರಾಮದ ಸಂಭ್ರಮದಲ್ಲಿ ಭಾಗಿಯಾಗುತ್ತಾರೆ.

ದೇವರ ಆಚರಣೆಯಲ್ಲಿ ಲೋಪ ಆಗಬಾರದು ಎಂದು ಬೇರೆ ಊರಿನ ಮುಸ್ಲಿಂ ಸಮುದಾಯದ ಅವರಿಂದ ಪೂಜೆ‘ಮೊಹರಂ ಸಂದರ್ಭದಲ್ಲಿ ಬೇರೆ ಊರಿನಿಂದ ಪೂಜೆ ಸಲ್ಲಿಸಲು ಪಕ್ಕದ ಎಚ್ ವೀರಾಪುರ ಗ್ರಾಮದ ಮು‌ಸ್ಲಿಂ ಖಾಸಿಂ ಇಮಾಮ್ ಸಾಬ್ ಹಾಗೂ ಹುಸೇನ್ ಸಾಬ್ ಕುಟುಂಬದವರು ಪ್ರತಿ ವರ್ಷ ಹಬ್ಬದಲ್ಲಿ ಪಾಲ್ಗೊಂಡು ಧಾರ್ಮಿಕ ವಿಧಿ ವಿಧಾನಗಳನ್ನು ಅನುಸರಿಸಿ ಅವರು ಹಬ್ಬ ಮುಗಿಯುವವರೆಗೂ ಗ್ರಾಮದ ಮಸಿದಿಯಲ್ಲಿ ಇದ್ದು ನಂತರ ಗ್ರಾಮದವರು ವರ್ಷ ಒಬ್ಬರಂತೆ ಹಬ್ಬದ ಆಚರಣೆಗೆ ಆಗಮಿಸಿ ಕೊನೆಯಲ್ಲಿ ನೀಡಿದ ದವಸ ಧಾನ್ಯ ಕಾಣಿಕೆ ಗೌರವ ಸ್ವಿಕರಿಸಿ ತೃಪ್ತಿಯಿಂದ ತೆರಳುತ್ತಾರೆ ನಾವು ನಮ್ಮ ತಲತಲಂತರದಿಂದ ಹಿರಿಯರು ಮೊಹರಂ ಆಚರಣೆಯನ್ನು ಶ್ರದ್ಧೆ ಭಕ್ತಿಯಿಂದ ಆಚರಣೆ ಮಾಡುತ್ತ ಬಂದಿದ್ದಾರೆ ಹರಕೆ ಹೊತ್ತು ಬೇಡಿಕೆಗಳನ್ನು ಬೇಗ ಈಡೇರಿಸುವ ಮೌಲಾಲಿ ತಾತಾ ನಮ್ಮ ಗ್ರಾಮಕ್ಕೆ ಮಳೆ ಬೆಳೆಯಾಗಿ ಸಮೃದ್ಧ ಫಸಲು ಆ ನೀಡಿದ್ದಾನೆ ಎಂದು ಗ್ರಾಮದ ಹಿರಿಯರಾದ ಹುಲುಗಪ್ಪ ಮಾತನಾಡಿದರು.

WhatsApp Group Join Now
Telegram Group Join Now
Share This Article
error: Content is protected !!