ರಾಯಬಾಗ: ಲೋಕಸಭಾ ಸದಸ್ಯರಾದ ಪ್ರಿಯಾಂಕ ಜಾರಕಿಹೊಳಿಯವರು ಮುಗಳಕೋಡ ಘಟಪ್ರಭಾ ಕಾಲುವೆ ಎಡದಂಡೆ ವೀಕ್ಷಿಸಿ ಪರಿಶೀಲಿಸಿದರು.
ನಿನ್ನೆ ದಿನಾಂಕ 23-05-2025 ರಂದು ಚಿಕ್ಕೋಡಿ ಲೋಕಸಭಾ ಸದಸ್ಯರಾದ ಕು ಪ್ರಿಯಾಂಕಾ ಅಕ್ಕಾ ಜಾರಕಿಹೊಳಿ ಅವರು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಮುಗಳಕೋಡ ಪಟ್ಟಣದಲ್ಲಿ ಘಟಪ್ರಭಾ ಎಡದಂಡೆ ಕಾಲುವೆಯನ್ನು ವೀಕ್ಷಿಸಿ ಪರಿಶೀಲಿಸಿದರು.
ನಂತರ, ಸುಟ್ಟಟ್ಟಿ ಗ್ರಾಮದಲ್ಲಿರುವ ಕೆರೆಯನ್ನು ವೀಕ್ಷಿಸಿದ ಬಳಿಕ, ಶ್ರೀ ಲಕ್ಷ್ಮೀ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿ ಆಶೀರ್ವಾದ ಪಡೆದುಕೊಂಡು, ಗ್ರಾಮ ಪಂಚಾಯಿತಿ ಕಚೇರಿಗೆ ಭೇಟಿ ನೀಡಿ ಸಾರ್ವಜನಿಕರ ಅಹವಾಲು ಆಲಿಸಿ ಸಮಸ್ಯಗಳಿಗೆ ಸ್ಪಂದಿಸಿದರು.
ವರದಿ: ಪರಶುರಾಮ ತೆಳಗಡೆ