ನವದೆಹಲಿ : ಇತ್ತೀಚೆಗಷ್ಟೇ, ಟಿಕೆಟ್ ಇಲ್ಲದೆ ರೈಲುಗಳಲ್ಲಿ ಪ್ರವೇಶಿಸುವವರಿಗೆ ದುಪ್ಪಟ್ಟು ದಂಡ (500 ರೂ.) ವಿಧಿಸುವಂತೆ ಸಂಬಂಧಪಟ್ಟ ನಿಯಮಗಳಿಗೆ ತಿದ್ದುಪಡಿ ತಂದಿರುವ ರೈಲ್ವೆ ಇಲಾಖೆ, ಇದೀಗ ಮತ್ತಷ್ಟು ಕ್ರಮ ಜಾರಿಗೊಳಿಸಿದೆ.
ಸ್ತ್ರೀಯರಿಗೆ ಮೀಸಲಿಟ್ಟ ಬೋಗಿ ಅಥವಾ ಸೀಟುಗಳಲ್ಲಿ ಪ್ರಯಾಣಿ ಸುವ ಪುರುಷರಿಗೆ 2,500ರೂ.
ದಂಡ ವಿಧಿಸಲು(ಈ ಹಿಂದೆ 500 ರೂ. ಇತ್ತು) ಮತ್ತು ತಕ್ಷಣವೇ ರೈಲಿನಿಂದ ಕೆಳಗಿಳಿ ಸಲು ನಿರ್ಧರಿಸಲಾಗಿದೆ. ರೈಲುಗಳಲ್ಲಿ,ರೈಲ್ವೆ ಆವರಣದಲ್ಲಿ ಧೂಮಪಾನ ಮಾಡಿದರೆ ಸ್ಥಳದಲ್ಲೇ 2,000 ರೂ. ದಂಡ(ಈವ ರೆಗೆ 100 ರೂ. ಇತ್ತು), ದಂಡ ಕಟ್ಟದಿದ್ದರೆ ನ್ಯಾಯಾಲಯದ ಮೂಲಕ 5,000 ರೂ.ವರೆಗೆ ದಂಡ ಅಥವಾ ಟಿಕೆಟ್ ಮುಟ್ಟು ಗೋಲಿಗೆ ಅವಕಾಶವಿದೆ.
ರೈಲು, ಪ್ಲಾಟ್‌ಫಾರ್ಮ್ಗಳಲ್ಲಿ ಪರವಾನಗಿ ಇಲ್ಲದೆ ಅನಧಿಕೃತ ವ್ಯಾಪಾರ ಮತ್ತು ಭಿಕ್ಷಾಟನೆ ನಿಷೇಧಿಸ ಲಾ ಗಿದ್ದು, ಉಲ್ಲಂ ಸಿದರೆ 2,000 ರೂ. ದಂಡ ವಿಧಿಸಲಾಗುತ್ತದೆ.
ದಂಡ ನಿರಾ ಕರಿ ಸಿದರೆ ಗರಿಷ್ಠ 3 ತಿಂಗಳ ಜೈಲು ಅಥವಾ 5,000 ರೂ.ವರೆಗೆ ದಂಡ ವಿಧಿಸಬಹುದಾಗಿದೆ. ರೈಲಿನಲ್ಲಿ ಸಹ-ಪ್ರಯಾಣಿಕರೊಂದಿಗೆ ಅನುಚಿತ ವರ್ತನೆ, ನಿಂದನಾತ್ಮಕ ಭಾಷೆ ಬಳಕೆ, ಮದ್ಯಸೇವಿಸಿ ಗಲಾಟೆ ಮಾಡಿದರೆ 1,000 ರೂ.ವರೆಗೆ ದಂಡ ವಿಧಿಸಿ, ಕೆಳಗಿಳಿಸಲಾಗುತ್ತದೆ.


