ಬೆಂಗಳೂರು : ರಾಜ್ಯದಲ್ಲಿ ತುರ್ತು ವೈದ್ಯಕೀಯ ಸೇವೆ (Emergency Medical Services) ಒದಗಿಸುವ ಆಯಂಬುಲೆನ್ಸ್‌ಗಳು (Ambulance) ನಿಗದಿತ ಸಮಯಕ್ಕೆ ತಲುಪದೇ ವಿಳಂಬ ಮಾಡಿದರೆ, ಅಂತಹ ಜವಾಬ್ದಾರಿ ಹೊತ್ತಿರುವ ನಿರ್ವಹಣಾ ಸಂಸ್ಥೆ ಅಥವಾ ಸಿಬ್ಬಂದಿಗೆ ₹3,000 ದಂಡ ವಿಧಿಸಲಾಗುವುದು ಎಂದು ಸಚಿವ ಯು.ಟಿ.ಖಾದರ್ (UT Khader) ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,. ಹಳ್ಳಿಗಳಿಂದ ಹೊರಡುವ ಆಯಂಬುಲೆನ್ಸ್‌ಗಳು ಕೇವಲ 20 ರಿಂದ 25 ನಿಮಿಷಗಳ ಒಳಗೆ ಸಂಬಂಧಪಟ್ಟ ತಾಲೂಕು ಕೇಂದ್ರಗಳನ್ನು ತಲುಪಬೇಕು ಎಂಬ ಸ್ಪಷ್ಟ ಗಡುವನ್ನು ವಿಧಿಸಲಾಗಿದ್ದು, ಈ ಸಮಯ ಪಾಲನೆಯಲ್ಲಿ ಯಾವುದೇ ಲೋಪ ಕಂಡುಬಂದಲ್ಲಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದಾರೆ.
ಆರೋಗ್ಯ ಸೇವೆ ಬಲಪಡಿಸಲು 350 ಹೊಸ ಆಯಂಬುಲೆನ್ಸ್ ಖರೀದಿ
ರಾಜ್ಯದ ಪ್ರತಿಯೊಂದು ಪ್ರಾಥಮಿಕ ಆರೋಗ್ಯ ಕೇಂದ್ರ (PHC) ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲೂ (CHC) ಆಯಂಬುಲೆನ್ಸ್ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಸರ್ಕಾರದಿಂದ ಹೊಸದಾಗಿ 350 ಆಯಂಬುಲೆನ್ಸ್‌ಗಳನ್ನು ಖರೀದಿಸಲಾಗುತ್ತಿದೆ. ಸದ್ಯ ರಾಜ್ಯದಲ್ಲಿ 450 ಆಯಂಬುಲೆನ್ಸ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಹೊಸ ವಾಹನಗಳ ಸೇರ್ಪಡೆಯಿಂದ ಗ್ರಾಮೀಣ ಹಾಗೂ ತಾಲೂಕು ಮಟ್ಟದಲ್ಲಿ ರೋಗಿಗಳಿಗೆ ತ್ವರಿತ ಸೇವೆ ಸಿಗುವಂತಾಗಲಿದೆ.


