Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

4500 ಕೋಟಿ ರೂ. ವಂಚನೆ ಕೇಸ್ : ಶಿವಾನಂದ ನೀಲಣ್ಣವರ ವಿರುದ್ಧ ಮೊದಲ ದೂರು

Advertisement

ಬೆಳಗಾವಿ: ಬೆಳಗಾವಿಯಲ್ಲಿ ಸದ್ದಿಲ್ಲದೆ ನಡೆದಿದೆ ಎನ್ನಲಾದ ಸುಮಾರು 4500 ಕೋಟಿ ರೂಪಾಯಿಗಳ ಬೃಹತ್ ವಂಚನೆ ಹಗರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಮೊದಲ ಅಧಿಕೃತ ದೂರು ದಾಖಲಾಗಿದೆ. 

ಇಷ್ಟು ದೊಡ್ಡ ಮಟ್ಟದ ಹಗರಣದ ಆರೋಪ ಕೇಳಿಬಂದಿದ್ದರೂ, ಮುಖ್ಯ ಆರೋಪಿ ಶಿವಾನಂದ್ ನೀಲಣ್ಣನವರ್ ವಿರುದ್ಧ ಇದುವರೆಗೆ ಯಾವುದೇ ಸಾರ್ವಜನಿಕರು ಅಥವಾ ಸಂತ್ರಸ್ತರು ಪೊಲೀಸ್ ಠಾಣೆ ಮೆಟ್ಟಿಲೇರದೆ ಇರುವುದು ತೀವ್ರ ಅಚ್ಚರಿ ಮೂಡಿಸಿತ್ತು.ಆದರೆ ಈಗ ಆ ನಿಶ್ಯಬ್ದ ಮುರಿದಿದ್ದು, ಆರೋಪಿಯ ವಿರುದ್ಧ ಮೊದಲ ಎಫ್‌ಐಆರ್ (FIR) ದಾಖಲಾಗಿದೆ.

ಬೆಳಗಾವಿ ಜಿಲ್ಲೆಯ ಕಾಗವಾಡ ಪೊಲೀಸ್ ಠಾಣೆಯಲ್ಲಿ ಶಿವಾನಂದ್ ನೀಲಣ್ಣನವರ್ ವಿರುದ್ಧ ಮೊದಲ ವಂಚನೆ ಪ್ರಕರಣ ದಾಖಲಾಗಿದೆ. ಕಾಗವಾಡ ಮೂಲದ ಠೇವಣಿದಾರರಾದ ಕೃಷ್ಣ ಅಪ್ಪಣ್ಣ ಅಪ್ರಾಜ್ ಎಂಬುವವರು ಆರೋಪಿಯಿಂದ ವಂಚನೆಗೊಳಗಾದ ದುರ್ದೈವಿ. ತಾವು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಅಧಿಕ ಲಾಭದ ಆಸೆಗೆ ಬಿದ್ದು ಕಳೆದುಕೊಂಡಿರುವುದಾಗಿ ಬೇಸರದಿಂದ ಕೃಷ್ಣ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ದೂರುದಾರ ಕೃಷ್ಣ ಅಪ್ರಾಜ್ ಅವರಿಗೆ ಆರೋಪಿ ಶಿವಾನಂದ್ ನೀಲಣ್ಣನವರ್ ವಾರ್ಷಿಕ ಬರೋಬ್ಬರಿ ಶೇ. 36 ರಷ್ಟು ಭಾರಿ ಪ್ರಮಾಣದ ಬಡ್ಡಿ ನೀಡುವುದಾಗಿ ಆಮಿಷ ಒಡ್ಡಿದ್ದ ಎನ್ನಲಾಗಿದೆ. 

ಇಷ್ಟೊಂದು ದೊಡ್ಡ ಮಟ್ಟದ ಲಾಭಾಂಶ ಸಿಗುತ್ತದೆ ಎಂಬ ಮಾತುಗಳನ್ನು ನಂಬಿದ ಕೃಷ್ಣ, ಕಳೆದ ಏಪ್ರಿಲ್ ತಿಂಗಳಿನಲ್ಲಿ ಹಂತ ಹಂತವಾಗಿ ಒಟ್ಟು 5 ಲಕ್ಷ ರೂಪಾಯಿಗಳನ್ನು ಶಿವಾನಂದನ ಬಳಿ ಹೂಡಿಕೆ ಮಾಡಿದ್ದರು.

ಆದರೆ, ಹಣ ಪಡೆದ ನಂತರ ಆರೋಪಿ ಬಡ್ಡಿಯನ್ನೂ ನೀಡದೆ, ಅಸಲನ್ನೂ ಮರಳಿಸದೆ ನಂಬಿಕೆ ದ್ರೋಹ ಎಸಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST