ಕಾಗವಾಡ:ಮಕ್ಕಳ ಸಾಧನೆಯನ್ನು ಮೆಚ್ಚಿದರು. ಅಕ್ಷರ ಲೇಖನದ ಮೂಲಕ ಮಕ್ಕಳಲ್ಲಿ ಶಿಸ್ತು, ಏಕಾಗ್ರತೆ ಮತ್ತು ಕಲಿಕೆಯಲ್ಲಿ ಆಸಕ್ತಿ ಹೆಚ್ಚುತ್ತದೆ ಎಂದು ವಿ ವಿ ಸಮಿತಿಯ ಅಧ್ಯಕ್ಷೆ ವಿಜಯಲಕ್ಷ್ಮಿ ಪಾಟೀಲ ಅಭಿಪ್ರಾಯಪಟ್ಟರು.
ಅವರು ಮಂಗಳವಾರ ಪಟ್ಟಣದ ವಿ.ವಿ. ಸಮಿತಿಯ ನ್ಯೂ ಇಂಗ್ಲಿಷ್ ಮೀಡಿಯಂ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಅಕ್ಷರ ಲೇಖನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ಸುಂದರವಾಗಿ ಅಕ್ಷರಗಳನ್ನು ಬರೆಯುವ ಮೂಲಕ ತಮ್ಮ ಪ್ರತಿಭೆ ಬರವಣಿಗೆಯ ಉತ್ತಮ ಹಸ್ತಾಕ್ಷರ ಅಭ್ಯಾಸದಮಹತ್ವವನ್ನು ತಿಳಿಸಿದರು.
ಇ ಸಂದರ್ಭದಲ್ಲಿ ಮುಖ್ಯೊಪದ್ಯಾಯ ರವಿಶಂಕರ ಹಿರೇಮಠ ಕೆ ಎಸ್ ಹುಳ್ಳೊಳ್ಕರ, ಅನ್ನಪೂರ್ಣ ಪಾಟೀಲ,ವಿಜಯಲಕ್ಷ್ಮಿ ಪಾಟೀಲ, ಸರಸ್ವತಿ ಬಾಡಿಗೆ ಕೋಮಲ ಪಾಟೀಲ ಕಾವೇರಿ ಕುರಿ ಶಿಕ್ಷಕರು, ಶಿಕ್ಷಕ ವೃಂದ ಹಾಗೂ ಪೋಷಕರು ಇತರರು ಇದ್ದರು.
ವರದಿ:ಚಂದ್ರಕಾಂತ ಕಾಂಬಳೆ


