ಬೆಂಗಳೂರು : ಶಿಕ್ಷಣ, ಸಂಘಟನೆ, ಹೋರಾಟ" ಅವರ ಮಂತ್ರವಾಗಿತ್ತು. ದಲಿತರು, ಮಹಿಳೆಯರು ಮತ್ತು ಹಿಂದುಳಿದ ವರ್ಗದವರು ಶಿಕ್ಷಣದ ಮೂಲಕವೇ ಸಬಲರಾಗಲು ಸಾಧ್ಯವೆಂದು ಜಿಬಿಎ ಪ್ರಬಲ ಆಕಾಂಕ್ಷಿ ಹಾಗೂ ಧೀಮಂತ ಮಹಿಳೆ ಆಶಾ ಬೋರೆಗೌಡ ಹೇಳಿದರು.
ಅವರು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಹೆಗ್ಗನಹಳ್ಳಿ ವಾರ್ಡಿನ ಮಾರುತಿ ನಗರದಲ್ಲಿ ಅಹಿಂದ ರಕ್ಷಣೆ ಸಮಿತಿಯ ಸಂಸ್ಥಾಪಕ ರಾಜ್ಯಾಧ್ಯಕ್ಷ ವೈ ಜಿ ನರಸಿಂಹಮೂರ್ತಿ ಹಾಗೂ ಪದಾಧಿಕಾರಿಗಳ ನೇತೃತ್ವದಲ್ಲಿ ಭಾರತ ರತ್ನ ಡಾ. ಬಿ ಆರ್ ಅಂಬೇಡ್ಕರ್, ಹಸಿರು ಕ್ರಾಂತಿ ಡಾ ಬಾಬು ಜಗಜೀವನರಾಂ ಜಯಂತಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿದ ಸಾಧಕರಿಗೆ"ಅಂಬೇಡ್ಕರ್ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಜ್ಯೋತಿ ಬೆಳಗಿಸಿ
ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ದೃಷ್ಟಿ ಅವರು ಬಲವಾಗಿ ನಂಬಿದ್ದರು.ಮಹಿಳಾ ಸಬಲೀಕರಣ ಮಹಿಳೆಯರ ಶಿಕ್ಷಣ ಮತ್ತು ಸಾಮಾಜಿಕ ಸ್ಥಾನಮಾನದ ಬಗ್ಗೆ ಅವರಿಗೆ ವಿಶೇಷ ಕಾಳಜಿ ಇತ್ತು. ಅದಲ್ಲದೆ ಹೆಣ್ಣುಮಕ್ಕಳ ಶಿಕ್ಷಣ ಕಡ್ಡಾಯ ನೀಡಬೇಕು ಎಂದು ಧೀಮಂತ ನಾಯಕಿ ಆಶಾ ಬೋರೆಗೌಡ ಜನರನ್ನು ಉದ್ದೇಶಿಸಿ ಮಾತನಾಡಿದರು.
ಖ್ಯಾತ ಜಾನಪದ ಗಾಯಕ ಕುಣಿಗಲ್ ರಾಮಚಂದ್ರ ಡಾ. ಅಂಬೇಡ್ಕರ್ ಹಾಡುಗಳನ್ನು ಹಾಡುವ ಮೂಲಕ ಅಂಬೇಡ್ಕರ್ ಅವರ ಆದರ್ಶಗಳು ತಿಳಿಸಿ ಕೊಟ್ಟರು.
ಡಾ. ಸಂಗನ ಬಸಪ್ಪ ಬಿರಾದಾರ್ ಮಾತನಾಡಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ಜೀವನ ಚರಿತ್ರೆಯನ್ನು ಪ್ರತಿಯೋಬ್ಬ ಪ್ರಜೆ ಓದಿ ತಿಳಿದು ಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಮಿತಿ ಸಂಸ್ಥಾಪಕ ರಾಜ್ಯಾಧ್ಯಕ್ಷ ವೈ ಜಿ ನರಸಿಂಹಮೂರ್ತಿ ಸರ್ವರಿಗೂ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಾದ ಡಾ ಸಂಗನ ಬಸಪ್ಪ ಬಿರಾದಾರ್, ರಾಜ್ಯ ಸರ್ಕಾರಿ ಅರೆ ಸರ್ಕಾರಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಸುಧಾಕರ್ ಎಸ್ ಜಡಗಿ, ದಿ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ ಹಾಗೂ ಉ.ಪ್ರವ್ಯ ಮಾರಾಟ ಅಧ್ಯಕ್ಷ ತಿಮ್ಮಣ್ಣ ಪಿ, ಮಂಜುಳಾ ಮಲ್ಲೇಶ್, ಚೊಕ್ಕಸಂದ್ರ ವಾರ್ಡಿನ ಕಾಂಗ್ರೆಸ್ ಅಧ್ಯಕ್ಷ ನಾಗರಾಜ್ ಯಾದವ್, ಅರುಣ್ ಬೈಲಪ್ಪ, ವಿ. ನಾಗರಾಜ್, ಸುರೇಶ್ ದೊಡ್ಡಮನಿ, ಶರಣಬಸವೇಶ ಆಲೂರ್, ಲಕ್ಷ್ಮೀ ಸಾಗರ್, ಶಿವಲಿಂಗಯ್ಯ ಸೇರಿದಂತೆ ಅಹಿಂದ ರಕ್ಷಣೆ ಸಮಿತಿಯ ಪದಾಧಿಕಾರಿಗಳು ಸದಸ್ಯರು ಮತ್ತು ಸಮಸ್ತ ನಾಗರಿಕರು ಮಹಿಳೆಯರು ಮುಂತಾದವರು ಇದ್ದರು.
ವರದಿ : ಅಯ್ಯಣ್ಣ ಮಾಸ್ಟರ್

