ಸಿಂಧನೂರು : ಶ್ರೀ ಚೈತನ್ಯ ವಿವಿಧೋದ್ದೇಶ ಸಹಕಾರ ಸಂಘವು 2025 -26 ನೇ ಸಾಲಿನಲ್ಲಿ 12ನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ನಗರದ ಬಸ್ ನಿಲ್ದಾಣದ ಹತ್ತಿರ ಇರುವ ಸಹಕಾರ ಸಂಘದ ಕಛೇರಿಯಲ್ಲಿ ರವಿವಾರ 20 ಸಪ್ಟಂಬರ್ 2026ರಂದು ಸಸಿಗೆ ನೀರುಣಿಸುವ ಮೂಲಕ ವಾರ್ಷಿಕ ಮಹಾಸಭೆ ಜರಗಿತು.
ಈ ಸಹಕಾರ ಮಹಾಸಭೆಯ ಅಧ್ಯಕ್ಷತೆವಹಿಸಿದ ಸಹಕಾರಿ ಸಂಘದ ಅಧ್ಯಕ್ಷರಾದ ಗುರಪ್ಪ ಎಸ್. ಮುಕ್ಕುಂದಾ ಮಾತನಾಡಿ ನಮ್ಮ ಶ್ರೀ ಚೈತನ್ಯ ವಿವಿಧೋದ್ದೇಶ ಸಹಕಾರ ಸಂಘವು 27 ಜುಲೈ 2014ರಂದು ಪ್ರಾರಂಭಗೊಂಡು 12 ವರ್ಷ ಅವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ, ಲಾಭದಾಯಕ ದೊಂದಿಗೆ ಜನರ ಮನಸ್ಸನ್ನು ಗೆದ್ದು ಒಳ್ಳೆಯ ಸೇವೆಯನ್ನು ನೀಡಿದೆ,12ನೇ ವರ್ಷಕ್ಕೆ ಕಾಲಿಟ್ಟ ಈ ಶುಭ ಸಂದರ್ಭದಲ್ಲಿ ನಮ್ಮ ಸಹಕಾರ ಸಂಘವು ಠೇವಣೆದಾರರಿಗೆ ಆಕರ್ಷಿಕ ಮತ್ತು ವೈಶಿಷ್ಟಗಳನ್ನು ಸಾರ್ವಜನಿಕರಿಗೆ ಈ ಮೂಲಕ ನೀಡುತ್ತದೆ
ಉಳಿತಾಯ ಯೋಜನೆಗಳು :- ಉಳಿತಾಯ ಖಾತೆ. ಚಾಲ್ತಿ ಖಾತೆ. ಮುದ್ದತ್ತು ಠೇವಣಿ ಆವರ್ತಕ ಠೇವಣಿ. ಪಿಗ್ಮಿ ಖಾತೆ.
ಸಾಲ ಸೌಲಭ್ಯಗಳು :- ವೈಯಕ್ತಿಕ ಸಾಲ. ವಾಹನ ಸಾಲ. ವ್ಯಾಪಾರಿ ಸಾಲ. ಆಭರಣ ಸಾಲ.ಠೇವಣಿ ಆಧಾರಿತ ಸಾಲ. ಸ್ವ ಉದ್ಯೋಗ ಸಾಲ. ಸಂಬಳ ಆಧಾರಿತ ಸಾಲ ಸ್ಥಿರಾಸ್ತಿ ಭದ್ರತಾ ಸಾಲ.(ಮಾರ್ಟ್ ಗೇಜ್) ಲೋನ ಸಾಲ ಸೌಲಭ್ಯಗಳು ನಮ್ಮ ಸಹಕಾರಿ ಸಂಘದಿಂದ ನೀಡಲಾಗುತ್ತದೆ, ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ : ಗೌರವಾಧ್ಯಕ್ಷ ದುರುಗೇಶ ಬಾಲಿ. ಉಪಾಧ್ಯಕ್ಷ ಫಕೀರಪ್ಪ ಸತ್ಯವತಿ ಕ್ಯಾಂಪ್. ನಿರ್ದೇಶಕರಾದ ಅಶೋಕ್ ಮೇಗಳಮನಿ ಗೊರೆಬಾಳ. ಜಯಣ್ಣ ಗೊರಬಾಳ. ರತ್ನಮ್ಮ ಮುಕ್ಕುಂದ. ಶೇಖಪ್ಪ ಮುಕ್ಕುಂದ.
ಶ್ರೀಮತಿ ಭಾಗ್ಯಶ್ರೀ ಅರೆಟನೂರು. ಶ್ರೀಮತಿ ಅನ್ನಪೂರ್ಣ ಗೊರೆಬಾಳ. ಶ್ರೀಮತಿ ಮೀನಾಕ್ಷಿ, ಗಂಗಾಧರ ಗೊಳಬಾಳ. ಶಾಖೆಯ ವ್ಯವಸ್ಥಾಪಕ ಗಂಗಾಧರ ಗೊರೆಬಾಳ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು
ವರದಿ : ಬಸವರಾಜ ಬುಕ್ಕನಹಟ್ಟಿ,


