Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಧಾರವಾಡದಲ್ಲಿ ನೇರಗುತ್ತಿಗೆ ಆಧಾರದ ಮೇಲೆ ಖಾಲಿರುವ ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನ

Advertisement

ಧಾರವಾಡ: ಆತ್ಮ ಯೋಜನೆಯಡಿ ನೇರಗುತ್ತಿಗೆ ಆಧಾರದ ಮೇಲೆ ಖಾಲಿ ಇರುವ ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

2026-27 ನೇ ಸಾಲಿನಲ್ಲಿ ಆತ್ಮ ಯೋಜನೆಯಡಿ ಜಂಟಿ ಕೃಷಿ ನಿರ್ದೇಶಕರು, ಧಾರವಾಡ ಕೃಷಿ ಇಲಾಖೆ ಕಚೇರಿಯ ಅಧೀನ ಕಚೇರಿಗಳಾದ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಧಾರವಾಡ, ಹುಬ್ಬಳ್ಳಿ, ಕಲಘಟಗಿ ಹಾಗೂ ಧಾರವಾಡ ಜಿಲ್ಲಾ ಕೃಷಿ ತರಬೇತಿ ಕೇಂದ್ರ ಕಚೇರಿಗಳಲ್ಲಿ ಖಾಲಿ ಇರುವ ನೇರಗುತ್ತಿಗೆ ಆಧಾರದಡಿ ಮಾಸಿಕ ಗೌರವಧನ ರೂ.25,000 ಗಳಿಗೆ ಸಹಾಯಕ ತಾಂತ್ರಿಕ ವ್ಯವಸ್ಥಾಪಕರು(ATM) ನಾಲ್ಕು (4) ಹುದ್ದೆಗೆ ಕೃಷಿ ಮತ್ತು ಕೃಷಿ ಸಂಬಂಧಿತ ವಿಜ್ಞಾನಗಳಲ್ಲಿ ಪದವಿ, ಸ್ನಾತಕೊತ್ತರ ಪದವಿ ಪಡೆದವರು ಹಾಗೂ ಕನಿಷ್ಠ 1 ವರ್ಷ ಕೃಷಿ ಸಂಬಂಧಿತ ಕ್ಷೇತ್ರಗಳಲ್ಲಿ ಅನುಭವ ಹೊಂದಿದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಅಭ್ಯರ್ಥಿ ಆಯ್ಕೆಯು ಜಿಲ್ಲಾ ಮಟ್ಟದ ನೇಮಕಾತಿ ಸಮಿತಿ ಮೂಲಕ ಮಾಡಲಾಗುವುದು. ಅನುಬಂಧ 1 (A) ರಲ್ಲಿ ಅರ್ಜಿ ನಮೂನೆಯನ್ನು ಕಚೇರಿಯಿಂದ ಪಡೆದು, ಅಭ್ಯರ್ಥಿಗಳು ಛಾಯಾಚಿತ್ರದೊಂದಿಗೆ ಮಾಹಿತಿ ಭರ್ತಿ ಮಾಡಿ, ಜನ್ಮ ದಿನಾಂಕ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ (ಜಾತಿ ಪ್ರಮಾಣ ಪತ್ರ), ವಿದ್ಯಾರ್ಹತೆ, ಕೆಲಸದ ಅನುಭವ, ಹಿಂದಿನ ಹುದ್ದೆಯ ಅಂತಿಮ ವೇತನ ಪ್ರಮಾಣ ಪತ್ರ, ನಡತೆ ಪ್ರಮಾಣ ಪತ್ರ, ವೈದ್ಯಕೀಯ ಪ್ರಮಾಣ ಪತ್ರ ಹಾಗೂ ಕಂಪ್ಯೂಟರ್ ಜ್ಞಾನ ಹೊಂದಿದ ಪ್ರಮಾಣ ಪತ್ರಗಳ ದಾಖಲಾತಿಗಳನ್ನು ದೃಢೀಕರಣದೊಂದಿಗೆ ಜುಲೈ 20, 2026 ರೊಳಗಾಗಿ ಧಾರವಾಡ ಜಂಟಿ ಕೃಷಿ ನಿರ್ದೇಶಕರ ಕಚೇರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕಚೇರಿಯ ಆತ್ಮ ವಿಭಾಗಕ್ಕೆ ಸಂಪರ್ಕಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಂಬೋಲಿ ಘಾಟ್‌ನಲ್ಲಿ ಭೂಕುಸಿತ :ರಸ್ತೆಗೆ ಬಿದ್ದ  ದೊಡ್ಡ ಬಂಡೆಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಕೃಷ್ಣಾ, ವೇದಗಂಗಾ ನದಿ : 30ಕ್ಕೂ ಹೆಚ್ಚು ಪರ್ಯಾಯ ಮಾರ್ಗದಲ್ಲಿ ಸಂಚಾರಮೂರನೇ ಚುಟುಕು ಪಂದ್ಯದಲ್ಲಿ ಇಂಗ್ಲೆAಡ್‌ಗೆ ಗೆಲುವುಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಭಾರಿ ಶಾಕ್ : ರಾಜ್ಯದ ಹಲವೆಡೆ ಏಕಕಾಲಕ್ಕೆ ದಾಳಿ ಶಿವಲಿಂಗದ ಮುಂದೆ ಉರಿಯುತ್ತಿದ್ದ ಪವಿತ್ರ ದೀಪದಿಂದ ಸಿಗರೇಟ್ ಹಚ್ಚಿಕೊಂಡ ಕಿರಾತಕ ಧಾರವಾಡದಲ್ಲಿ ನೇರಗುತ್ತಿಗೆ ಆಧಾರದ ಮೇಲೆ ಖಾಲಿರುವ ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನಕಾಂಗರೂ ವನಿತೆಯರಿಗೆ ವಿಶ್ವಕಪ್ ಕಿರೀಟವೀರಶೈವ ಲಿಂಗಾಯತ ಧರ್ಮವು ಮೂಲತಃ ಜಾತಿರಹಿತವಾದ ಧರ್ಮ : ಎಂ.ಬಿ ಪಾಟೀಲ 11 ವಯಸ್ಸಿನಲ್ಲೇ 25 ಕೋಟಿ ರೂ. ಮೌಲ್ಯದ ಸ್ಟಾರ್ಟ್‌ಅಪ್ ಆರಂಭಿಸಿದ ಬಾಲಕಡ್ರಾ ದತ್ತ ಸಾಗಿದ ವಿಂಡೀಸ್- ಲಂಕಾ ಪಂದ್ಯ