ಬೆಂಗಳೂರು: "ನಾವೆಲ್ಲ ಹಿಂದೂಗಳು ಅಲ್ಲವಾ, ಅವರದೆಲ್ಲ ಬರೀ ನಾಟಕ" ಎಂದು ರಾಜ್ಯದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಬಿಜೆಪಿ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನಗರದ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು, "ಶ್ರೀರಾಮನ ಹೆಸರಿನಲ್ಲಿ ಬಂದ ದುಡ್ಡನ್ನೇ ಹೊಡೆದು ತಿಂದಿದ್ದಾರೆ.
ನಿಮ್ಮ ಬೆವರು ಉಪ್ಪು, ನನ್ನ ಬೆವರೂ ಉಪ್ಪು, ಬಿಜೆಪಿ ನಾಯಕರ ರಕ್ತವೇನಾದರೂ ಪ್ರತ್ಯೇಕವಾಗಿದೆಯಾ? ಎಲ್ಲ ಜಾತಿಗಳನ್ನು ತನ್ನೊಳಗೆ ಒಳಗೊಂಡಿರುವುದೇ ನಮ್ಮ ಧರ್ಮ" ಎಂದು ಕಿಡಿಕಾರಿದರು.
ವಿಪಕ್ಷದಲ್ಲಿ ಅಧಿಕಾರದ ಕಾಂಪಿಟೇಷನ್: ಅಶೋಕ್, ವಿಜಯೇಂದ್ರ ವಿರುದ್ಧ ಲೇವಡಿ ರಾಜ್ಯ ಬಿಜೆಪಿಯಲ್ಲಿ ಆಂತರಿಕ ಕಿತ್ತಾಟ ಜೋರಾಗಿದೆ ಎಂದ ಡಿಕೆ ಶಿವಕುಮಾರ್, "ಈಗ ಬಿಜೆಪಿಯಲ್ಲಿ ದೊಡ್ಡ ಮಟ್ಟದ ಕಾಂಪಿಟೇಷನ್ ನಡೆಯುತ್ತಿದೆ.
ಆರ್‌ಎಸ್‌ಎಸ್ ಅಥವಾ ಬಿಜೆಪಿ ನಾಯಕರು ಆರ್. ಅಶೋಕ ಅವರನ್ನು ಇಳಿಸಬೇಕಾ, ಬಿ.ವೈ. ವಿಜಯೇಂದ್ರ ಅವರನ್ನು ಇಳಿಸಬೇಕಾ ಎಂಬ ಬಗ್ಗೆ ಯೋಚಿಸುತ್ತಿದ್ದಾರೆ.
ಇಲ್ಲವೇ ದೆಹಲಿಯಿಂದ ಯಾರಾದರೂ ಬಂದು ಇಲ್ಲಿ ಅಧ್ಯಕ್ಷ ಸ್ಥಾನದಲ್ಲಿ ಕೂರಬೇಕಾ ಎಂಬ ಸ್ಪರ್ಧೆ ಅವರಲ್ಲಿ ನಡೆಯುತ್ತಿದೆ" ಎಂದು ಲೇವಡಿ ಮಾಡಿದರು.


