ತ್ರಿಶೂರ್: ಕೇರಳದ ತ್ರಿಶೂರ್ ಜಿಲ್ಲೆಯ ಮನೆಯೊಂದರ ಆವರಣದಲ್ಲಿ ಬರೋಬ್ಬರಿ 18 ಹೆಬ್ಬಾವಿನ ಮರಿಗಳು ಪತ್ತೆಯಾಗಿರುವ ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ.
ಪೂಂಕುನ್ನಂನ ಎಂ.ಜಿ ನಗರದ ಕಾರ್ತಿಕ್ ಎಂಬುವವರ ಮನೆಯಲ್ಲಿ ಕೇವಲ 24 ಗಂಟೆಗಳ ಅವಧಿಯಲ್ಲಿ 18 ಹೆಬ್ಬಾವಿನ ಮರಿಗಳು ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಮನೆಯ ಮಾಲೀಕ ಕಾರ್ತಿಕ್ ಅವರ ಸಹೋದರ ಮನೆಯ ಪಕ್ಕದಲ್ಲಿರುವ ಕಾಲುವೆಯ ಬಳಿ ಮೊದಲು ಎರಡು ಸಣ್ಣ ಹಾವಿನ ಮರಿಗಳನ್ನು ಗಮನಿಸಿದ್ದರು.
ತಕ್ಷಣವೇ ಹುಡುಕಾಟ ನಡೆಸಿದಾಗ ಮನೆಯ ಸುತ್ತಮುತ್ತ ಹಾಗೂ ಆವರಣದಲ್ಲಿ ಮತ್ತಷ್ಟು ಮರಿಗಳು ಇರುವುದು ಕಂಡುಬಂದಿದೆ.
ಮೊದಲ ದಿನವೇ ಸುಮಾರು 8 ಮರಿಗಳನ್ನು ರಕ್ಷಿಸಲಾಗಿತ್ತು, ಆದರೆ ಎರಡು ಮರಿಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದವು.


