ಪಾವಗಡ : ರಾಜ್ಯದ ಸುಮಾರು ನಾಲ್ಕು ಲಕ್ಷ ಛಾಯಾಗ್ರಾಹಕರಿಗೆ ಆಸರೆಯಾಗುವ ನಿಟ್ಟಿನಲ್ಲಿ 'ಕರ್ನಾಟಕ ರಾಜ್ಯ ಛಾಯಾಗ್ರಾಹಕರ ಹಾಗೂ ವಿಡಿಯೋಗ್ರಾಫರ್‌ಗಳ ಸಂಘ' ಜಾರಿಗೆ ತಂದಿರುವ ‘ಆಸರೆ ಯೋಜನೆ’ ಅತ್ಯಂತ ಸೌಲಭ್ಯದಾಯಕವಾಗಿದ್ದು, ತಾಲೂಕಿನ ಎಲ್ಲಾ ಛಾಯಾಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಂಘದ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಕರೆ ನೀಡಿದರು.
ಪಾವಗಡ ಪಟ್ಟಣದಲ್ಲಿ ಇರುವ ಪ್ರವಾಸಿ ಮಂದಿರದಲ್ಲಿ ಗುರುವಾರ ಜಿಲ್ಲಾ ಹಾಗೂ ತಾಲ್ಲೂಕು ಛಾಯಾಚಿತ್ರ ಗ್ರಾಹಕರ ಸಂಘದ ಸಹಯೋಗದೊಂದಿಗೆ ಏರ್ಪಡಿಸಲಾಗಿದ್ದ '
ಆಸರೆ ಯೋಜನೆ'ಯ ಸದಸ್ಯತ್ವ ನೋಂದಣಿ ಅರ್ಜಿ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕುಟುಂಬದ ನೆರವಿಗೆ ರೂ. ಒಂದು ಲಕ್ಷ ಪರಿಹಾರ:
"ಛಾಯಾಗ್ರಾಹಕರು ನಿರಂತರ ಕೆಲಸದ ಒತ್ತಡ, ಅನಾರೋಗ್ಯ ಅಥವಾ ಆಕಸ್ಮಿಕವಾಗಿ ಸಾವಿಗೀಡಾದರೆ, ಅವರ ಕುಟುಂಬಕ್ಕೆ ಆರ್ಥಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಒಂದು ಲಕ್ಷ ರೂಪಾಯಿ ಪರಿಹಾರ ನೀಡಲು ಈ ಯೋಜನೆ ರೂಪಿಸಲಾಗಿದೆ. ಕೇವಲ ನೂರ ಹತ್ತು ರೂಪಾಯಿ ರೂಪಾಯಿ ವೆಚ್ಚದಲ್ಲಿ ನೋಂದಾಯಿಸಿಕೊಳ್ಳುವ ಮೂಲಕ, ಆಪತ್ತು ಬಂದಾಗ ಕುಟುಂಬಕ್ಕೆ ದೊಡ್ಡ ಮಟ್ಟದ ಆಸರೆ ಸಿಗಲಿದೆ" ಎಂದು ಅವರು ವಿವರಿಸಿದರು.
ಇದೇ ವೇಳೆ, ತಂತ್ರಜ್ಞಾನದ ಯುಗದಲ್ಲಿ ಛಾಯಾಗ್ರಾಹಕರು ಎದುರಿಸುತ್ತಿರುವ ದೈನಂದಿನ ಸವಾಲುಗಳು ಹಾಗೂ ಸಂಘದ ವಿವಿಧ ಕಲ್ಯಾಣ ಯೋಜನೆಗಳ ಕುರಿತು ಅವರು ಸಮಗ್ರ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಸಂಘದ ಕಾರ್ಯದರ್ಶಿ ರಮೇಶ್, ಕೆಪಿಎ ನಿರ್ದೇಶಕ ನವೀನ್, ಜಿಲ್ಲಾ ಉಪಾಧ್ಯಕ್ಷ ಸಿದ್ದೇಶ್, ನಿರ್ದೇಶಕ ವೀರಭದ್ರಯ್ಯ, ತಾಲೂಕು ಅಧ್ಯಕ್ಷ ಎಚ್. ತಿಮ್ಮರಾಜು, ಉಪಾಧ್ಯಕ್ಷ ರಾಯುಡು, ಕಾರ್ಯದರ್ಶಿ ಚಂದ್ರಶೇಖರ್, ವೆಂಕಟೇಶ್, ಸ್ಟುಡಿಯೋ ಅಮರ್, ಹರಿ, ಪರಮೇಶ್, ನಾಗರಾಜು, ತಿರುಮಲೇಶ್, ರಂಗನಾಥ್, ಲಕ್ಷ್ಮಣ್, ಪ್ರಕಾಶ್ ಕೃಷ್ಣ, ನಾಗೇಶ್ ಸೇರಿದಂತೆ ತಾಲೂಕಿನ ಹಲವಾರು ಛಾಯಾಗ್ರಾಹಕರು ಉಪಸ್ಥಿತರಿದ್ದರು.
ವರದಿ: ಶಿವಾನಂದ


