ಬಾಗಲಕೋಟೆ : ಪರಪ್ಪನ ಅಗ್ರಹಾರ ಜೈಲಿನ ಹೆಡ್ ವಾರ್ಡರ್ ನಡೆಸಿದ ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಗದ್ದನಕೇರಿ ಕ್ರಾಸ್ ಬಳಿಯ ಡಾಬಾ ಮಾಲೀಕರೊಬ್ಬರು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ
ಮೆಹಬೂಬಸಾಬ್ ಪಟ್ಟೆವಾಲೆ 58 ಮೃತ ದುರ್ದೈವಿ ರಜೆ ಮೇಲೆ ಊರಿಗೆ ಬಂದಿದ್ದ ಜೈಲು ವಾರ್ಡರ್ ಅಡಿವೆಪ್ಪ ಸೆ 17 ರಂದು ರಾತ್ರಿ ಮೆಹಬೂಬಸಾಬಿನ ಡಾಬಾಗೆ ಬಂದು ಊಟ ಕೇಳಿದ್ದರು ಈ ವೇಳೆ ಊಟ ಖಾಲಿಯಾಗಿದೆ ಎಂದಿದ್ದಕ್ಕೆ ಜಗಳ ತೆಗೆದಿದ್ದ ವಾರ್ಡರ್, ಡಾಬಾ ಮಾಲೀಕರ ಮೇಲೆ ಹಲ್ಲೆ ನಡೆಸಿದ್ದರು.
ಈ ವೇಳೆ ಮೆಹಬೂಬ್ ಸಾಬ್ ನೆಲಕ್ಕೆ ಬಿದ್ದು ತೀವ್ರ ರಕ್ತಸ್ರಾವವಾಗಿತ್ತು ತಕ್ಷಣವೇ ಮೆಹಬೂಬ್ ಅವರನ್ನು ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಆತನು ಸೆ 24 ಕೊನೆಯುಸಿರೆಳೆದಿದ್ದಾರೆ ಈ ಗಲಾಟೆಯಲ್ಲಿ ಹೆಡ್ ವಾರ್ಡರ್ ಅಡಿವೆಪ್ಪ ಆತನಿಗೂ ತಲೆಗೂ ಗಾಯಗಳಾಗಿದ್ದವು ಎಂದು ತಿಳಿದುಬಂದಿದೆ.
ಈ ಸಂಬಂಧ ಕಲಾದಗಿ ಠಾಣೆ ಪೊಲೀಸರು ಆರೋಪಿ ಅಡಿವೆಪ್ಪನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ವರದಿ : ಬಸವರಾಜ ಪೂಜಾರಿ


