LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಹೃದಯಾಘಾತಕ್ಕೆ ಬಿಜೆಪಿ ಶಾಸಕರ ಆಪ್ತ ಸಹಾಯಕ ಬಲಿ 

Advertisement
ಕೊಪ್ಪಳ : ರಾಜ್ಯದಲ್ಲಿ ಹೃದಯಾಘಾತದಿಂದ ಸಾವು ಸಂಭವಿಸಿವ ಸರಣಿ ಮುಂದುವರೆದಿದ್ದು,ದಿನೇ ದಿನೇ ಈ ಪ್ರಕಾರಮಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ.

ಇದೀಗ ಆ ಸಾಲಿಗೆ ಮತ್ತೊಂದು ಸೇರ್ಪಡೆಯಾಗಿದ್ದು,ಬಿಜೆಪಿ ಶಾಸಕ ದೊಡ್ಡನಗೌಡ ಪಾಟೀಲ್ ಅವರ ಆಪ್ತ ಸಹಾಯಕ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಬಿಜೆಪಿ ಶಾಸಕ ದೊಡ್ಡನಗೌಡ ಪಾಟೀಲ್ ಅವರ ಆಪ್ತ ಸಹಾಯಕ 46 ವರ್ಷದ ಚಂದ್ರು ವಡಗೇರಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಚಂದ್ರು ಮೂಲತಃ ಕೊಪ್ಪಳದ ಕುಷ್ಟಗಿ ಪಟ್ಟಣದ ನಿವಾಸಿ.ಚಂದ್ರು ವಡಗೇರಿ ರಾಜಕೀಯದಲ್ಲಿ ಸಕ್ರಿಯವಾಗಿದ್ದರು ಮತ್ತು ಈ ಹಿಂದೆ ಪುರಸಭೆಯ ಸದಸ್ಯರಾಗಿದ್ದು ಕೂಡ.ಆದ್ರೆ ಇಂದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಚಂದ್ರು ಅವರಿಗೆ ಕಳೆದ ತಿಂಗಳು ಸರ್ಜರಿಯಾಗಿತ್ತು. ಸಣ್ಣ ಕರಳಿನ ಸಮಸ್ಯೆಯಿದ್ದ ಕಾರಣ ಅಪೋಲೋ ಆಸ್ಪತ್ರೆಯಲ್ಲಿ ಸರ್ಜರಿಗೆ ಒಳಗಾಗಿದ್ದರು.ಆ ಬಳಿಕ ಚಂದ್ರು ಸಂಪೂರ್ಣವಾಗಿ ಗುಣಮುಖರಾಗಿದ್ದರು.ಆದ್ರೆ ಇದೀಗ ಇದ್ದಕ್ಕಿದ್ದಂತೆ ಹೃದಯಾಘಾತ ಸಂಭವಿಸಿ ಮೃತಪಟ್ಟಿದ್ದಾರೆ.
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST