LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
International News

ಕಾಸ್ಮೆಟಿಕ್ ಟ್ರೀಟ್‌ಮೆಂಟ್ ಬಳಿಕ ಉದ್ಯಮಿ ದುರ್ಮರಣ :7 ಕೋಟಿ ರೂ. ಚಿನ್ನದ ಶವಪೆಟ್ಟಿಗೆಯಲ್ಲಿ ಅಂತ್ಯಕ್ರಿಯೆ 

Advertisement

ಐಷಾರಾಮಿ ಜೀವನಶೈಲಿ, ದುಬಾರಿ ಮನೆ-ಆಸ್ತಿಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದ ಬ್ರಿಟಿಷ್-ನೈಜೀರಿಯನ್ ಉದ್ಯಮಿ ಮತ್ತು ಸಾಮಾಜಿಕ ಮಾಧ್ಯಮದ ಖ್ಯಾತ ವ್ಯಕ್ತಿ ಇಫೋ ಟೈನ್ ಉಬಿರಿಬೋ ಅವರ ಸಾವು ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.

ಐಷಾರಾಮಿ ಜೀವನ, ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ, ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಅಭಿಮಾನಿಗಳು… ಆದರೆ ಕಾಸ್ಮೆಟಿಕ್ ಟ್ರೀಟ್‌ಮೆಂಟ್ ಬಳಿಕ 43ರ ಹರೆಯದಲ್ಲೇ ಉದ್ಯಮಿಯ ಬದುಕು ದುರಂತ ಅಂತ್ಯ ಕಂಡಿದೆ.

ಅಚ್ಚರಿ ಎಂದರೆ, ಅವರ ಅಂತ್ಯಕ್ರಿಯೆ ಸಾಮಾನ್ಯವಾಗಿರಲಿಲ್ಲ-ಸುಮಾರು ₹7 ಕೋಟಿ ಮೌಲ್ಯದ ಚಿನ್ನದ ಶವಪೆಟ್ಟಿಗೆಯಲ್ಲಿ ಅಂತಿಮ ವಿದಾಯ ನೀಡಲಾಗಿದ್ದು, ಈ ಘಟನೆ ಇದೀಗ ವಿಶ್ವದಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ.

43 ವರ್ಷದ ಉಬಿರಿಬೋ ಅವರು 2026ರ ಮಾರ್ಚ್ 6ರಂದು ಥಾಯ್ಲೆಂಡ್‌ನ ಬ್ಯಾಂಕಾಕ್‌ನಲ್ಲಿ ಮೃತಪಟ್ಟಿದ್ದಾರೆ. ಅವರ ಅಂತ್ಯಕ್ರಿಯೆ ವೇಳೆ ಬಳಸಲಾದ ಚಿನ್ನದ ಶವಪೆಟ್ಟಿಗೆ ಇದೀಗ ಎಲ್ಲರ ಗಮನ ಸೆಳೆದಿದ್ದು, ಅದರ ಮೌಲ್ಯ ಸುಮಾರು ₹7 ಕೋಟಿ ಎಂದು ವರದಿಗಳು ತಿಳಿಸಿವೆ.

ಉಬಿರಿಬೋ ಅವರು ತಮ್ಮ ಪತ್ನಿ ಡಾನಿಯೆಲ್ ಸಿಂಬಾ ಅಲೆನ್ ಅವರೊಂದಿಗೆ ಥಾಯ್ಲೆಂಡ್‌ಗೆ ತೆರಳಿದ್ದರು. ಮಾರ್ಚ್ 5ರಂದು ಬ್ಯಾಂಕಾಕ್‌ನ ಖಾಸಗಿ ಆಸ್ಪತ್ರೆಯೊಂದರಲ್ಲಿ ಜನನಾಂಗದ ಗಾತ್ರ ಹೆಚ್ಚಿಸುವ ಉದ್ದೇಶದ ಕಾಸ್ಮೆಟಿಕ್ ಚಿಕಿತ್ಸೆಗೆ ಒಳಗಾಗಿದ್ದರು. ಈ ಪ್ರಕ್ರಿಯೆಯಲ್ಲಿ ಸುಮಾರು 40 ಮಿಲಿಲೀಟರ್ ಹಯಾಲುರೋನಿಕ್ ಆಸಿಡ್ ಬಳಸಲಾಗಿತ್ತು ಎನ್ನಲಾಗಿದೆ.

ಚಿಕಿತ್ಸೆ ಮುಗಿದ ಬಳಿಕ ದಂಪತಿ ಮಸಾಜ್ ಮಾಡಿಸಿಕೊಳ್ಳಲು ತೆರಳಿದ್ದರು. ಈ ವೇಳೆ ಉಬಿರಿಬೋ ಅವರಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದ್ದು, ಕೆಲವೇ ಸಮಯದಲ್ಲಿ ಅವರು ಮೃತಪಟ್ಟಿದ್ದಾರೆ. ವೈದ್ಯಕೀಯ ಪರಿಶೀಲನೆಯಲ್ಲಿ ಅವರ ಶ್ವಾಸಕೋಶದ ರಕ್ತನಾಳದಲ್ಲಿ ತಡೆ ಉಂಟಾಗಿರುವುದು ಪತ್ತೆಯಾಯಿತು. ಇದರಿಂದ ರಕ್ತದ ಹರಿವಿಗೆ ಅಡ್ಡಿಯುಂಟಾಗಿ ಗಂಭೀರ ಆರೋಗ್ಯ ಸಮಸ್ಯೆ ಎದುರಾಗಿ ಅವರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ 'ಟ್ರೈಸೀ', 'ಡೆನಿಸೀ' ಮತ್ತು 'ಈಗೋ' ಎಂಬ ಹೆಸರುಗಳಿಂದಲೂ ಪರಿಚಿತರಾಗಿದ್ದ ಉಬಿರಿಬೋ ಅವರಿಗೆ ಲಕ್ಷಾಂತರ ಫಾಲೋವರ್ಸ್ ಇದ್ದರು.

ಲಂಡನ್ ಹಾಗೂ ಅಮೆರಿಕದಲ್ಲಿ ಅವರು ದುಬಾರಿ ಆಸ್ತಿಗಳನ್ನು ಹೊಂದಿದ್ದರು ಎನ್ನಲಾಗಿದೆ. ಅವರ ಐಷಾರಾಮಿ ಜೀವನಶೈಲಿಗೆ ತಕ್ಕಂತೆಯೇ ಲಂಡನ್‌ನಲ್ಲಿ ನಡೆದ ಅಂತ್ಯಕ್ರಿಯೆಯಲ್ಲೂ ಭಾರೀ ವೈಭವ ಕಾಣಿಸಿಕೊಂಡಿತು.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರೀಲ್ಸ್ ವಿಚಾರವಾಗಿ ದಂಪತಿ ನಡುವೆ ಗಲಾಟೆ: ಹೆಂಡತಿ ಕೊಲೆಗೈದು ಆತ್ಮಹತ್ಯೆಗೆ ಶರಣಾದ ಗಂಡ ಸತೀಶ್ ಜಾರಕಿಹೊಳಿ ಯಾವುದೇ ತನಿಖೆ ಎದುರಿಸಲು ಸಿದ್ಧರಿದ್ದಾರೆ : ಡಿ.ಕೆ.ಶಿವಕುಮಾರ್2 ವರ್ಷದ ಕಂದಮ್ಮನ ಮೇಲೆ ಹರಿದ ಕಾರು : ತಾಯಿ ಕಣ್ಣೆದುರೇ ದಾರುಣ ಸಾವುಯುಎಸ್ ಓಪನ್ ಟೆನಿಸ್: ಬೆನ್ ಸೇಲ್ಟನ್ ಸೆಮಿ ಪೈನಲ್ ಗೆ ವಿದ್ಯಾವಿಕಾಸ ಯೋಜನೆಯಡಿ ವಿದ್ಯಾರ್ಥಿಗಳಿಗೆ ಉಚಿತ ಶೂ ವಿತರಣಾ ಕಾರ್ಯಕ್ರಮ  ಪಾಕಿಸ್ತಾನ- ಶ್ರೀಲಂಕಾ ಎರಡನೇ ಸೆಮಿಪೈನಲ್ ಸೆ. 11 ರಂದು ಸರ್ವಜನಾಂಗದ ಹಿತಕ್ಕಾಗಿ ಭಗವಂತನೇ ಸೃಷ್ಟಿಸಿದ ಯೋಜನೆ: ಮೃತ್ಯುಂಜಯ ದೇಶೀಕೇಂದ್ರ ಶ್ರೀ ಶ್ಲಾಘನೆಆನ್​​ಲೈನ್​​ನಲ್ಲಿಯೇ ಕಥೆ-ಕಾದಂಬರಿ ಓದಿ ಹಣ ಸಂಪಾದಿಸಿ': ಹಣ ಕಳೆದುಕೊಂಡ ಸಾವಿರಾರು ಮಂದಿ ಪ್ರಿಯಾಂಕಾ, ರಾಹುಲ್ ಜಾರಕಿಹೊಳಿ ಸೇರಿ ಐದು ಕಡೆ ಇಡಿ ದಾಳಿ ನಾಳೆ ಭಾರತ- ಬಾಂಗ್ಲಾದೇಶ ಮೊದಲ ಸೆಮಿಪೈನಲ್