ಬೆಳಗಾವಿ : ಮೂರು ವರ್ಷ ಸಚಿವರಾಗಿ ಕೆಲಸ ಮಾಡಲು ಅವಕಾಶ ಸಿಕ್ಕಿತ್ತು ಸಚಿವರ ಆಗುವಂತೆ ಮತ್ತೆ ಅವಕಾಶ ಕೊಟ್ಟರೆ ಕೆಲಸ ಮಾಡುತ್ತೇನೆ ಎಂದು ಬೆಳಗಾವಿಯಲ್ಲಿ ಮಾಜಿ ಸಚಿವೆ ರಚನೆಮಾಡ್ಕರ್ ಹೇಳಿಕೆ ನೀಡಿದರು.ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಅವಕಾಶ ಕೊಡದಿದ್ದರೆ ಪಕ್ಷಕ್ಕಾಗಿ ಕೆಲಸವನ್ನು ಮಾಡುತ್ತೇನೆ.
ಸಚಿವ ಸ್ಥಾನ ತಪ್ಪಲು ನನ್ನ ವಿರುದ್ಧ ಯಾರು ಸಹ ಷಡ್ಯಂತರ ಮಾಡಿಲ್ಲ. ಅನಿವಾರ್ಯ ಕಾರಣಗಳಿಂದ ನನಗೆ ಮಂತ್ರಿ ಸ್ಥಾನ ತಪ್ಪಿದೆ. ರಾಜಕಾರಣದಲ್ಲಿ ಯಾವಾಗ ಏನು ಬೇಕಾದರೂ ಆಗಬಹುದು. ಮಹಿಳೆಯರಿಲ್ಲದ ಸಂಪುಟ ನಿಜವಾಗಲೂ ಅದು ಅಪೂರ್ಣ.
ಈಗಾಗಲೇ ಉಮಾಶ್ರಿಗೆ ಉಪ ಸಭಾಪತಿ ಸ್ಥಾನ ನೀಡಿದ್ದಾರೆ ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಮೂವರು ಮಹಿಳೆಯರಿಗೆ ಅವಕಾಶ ನೀಡಲಾಗಿದ್ದು ಕರ್ನಾಟಕದಲ್ಲಿ ಈಗ ಏನು ಹೆಚ್ಚು ಕಡಿಮೆಯಾಗಿದೆ ಮುಖ್ಯಮಂತ್ರಿ ಮಹಿಳೆಯರಿಗೆ ಅವಕಾಶ ಕೊಡುವ ಭರವಸೆ ನೀಡಿದ್ದಾರೆ.
ಸಚಿವ ಸ್ಥಾನ ನೀಡುವಂತೆ ನಾನು ಯಾರಲ್ಲೂ ಕೂಡ ಕೇಳಿಲ್ಲ ಒಳ್ಳೆ ಮುಖ್ಯಮಂತ್ರಿ ಇದ್ದಾರೆ ಕೆಲಸ ಮಾಡೋಣ ಬಿಡಿ ಮುಖ್ಯಮಂತ್ರಿ ಗೆ ಶಕ್ತಿ ತುಂಬುವ ಕೆಲಸ ನಾವು ಮಾಡುತ್ತೇವೆ ಎಂದು ಲಕ್ಷ್ಮಿ ಹೆಬ್ಬಾಳಕರ್ ತಿಳಿಸಿದರು.


