ಮಾನ್ವಿ: ಪಟ್ಟಣದ ತಹಶೀಲ್ದಾರ್ ಕಚೇರಿಗೆ ಚೀಕಲಪರ್ವಿ ಗ್ರಾಮದ ಶ್ರೀ ರುದ್ರಮುನೀಶ್ವರ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಆಡಳಿತ ವ್ಯವಸ್ಥೆ ಪರಿಚಯ ಕಾರ್ಯಕ್ರಮದಡಿಯಲ್ಲಿ ಭೇಟಿ ನೀಡಿ ಕಂದಾಯ ಇಲಾಖೆಯ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ತಹಶೀಲ್ದಾರ್ ಭೀಮರಾಯ ಬಿ.ರಾಮಸಮುದ್ರ ರವರು ಶಾಲ ಮಕ್ಕಳಿಗೆ ಕಂದಾಯ ಇಲಾಖೆಯ ಮುಖ್ಯ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿ ರೈತರಿಗೆ ಅಗತ್ಯವಿರುವ ಕೃಷಿ ಭೂಮಿಗಳ ದಾಖಲೆಗಳ ನಿರ್ವಹಣೆ, ವಿವಿಧ ಸಮಾಜಿಕ ಮಾಶಸನಗಳ ವಿತರಣೆ ಸೇರಿದಂತೆ ಅಗತ್ಯ ಮಾಹಿತಿ ನೀಡಿದರು. ಪಟ್ಟಣದ ಪೊಲೀಸ್ ಠಾಣೆಗೆ ವಿದ್ಯಾರ್ಥಿಗಳು ಭೇಟಿ ನೀಡಿ ಪೊಲೀಸ್ ಠಾಣೆಯಲ್ಲಿನ ಕಾರ್ಯವಿಧನಗಳ ಬಗ್ಗೆ ಮಾಹಿತಿ ಪಡೆದರು ಶಾಲೆಯ ವಿದ್ಯಾರ್ಥಿಗಳಿಗೆ ಎ.ಎಸ್.ಐ. ಮಲ್ಲ ರೆಡ್ಡಪ್ಪರವರು ವಿದ್ಯಾರ್ಥಿಗಳಿಗೆ ಇಲಾಖೆಯ ಕಾರ್ಯ ಚಟುವಟಿಕೆಗಳ ಕುರಿತು ಮಾಹಿತಿ ನೀಡಿ ಪೊಲೀಸ್ ಇಲಾಖೆಯಲ್ಲಿ ಬಳಸುವ ಅಯುಧಗಳ ಬಗ್ಗೆ ಹಾಗೂ ವಾಕಿಟಾಕಿ ಬಳಕೆ ಮಕ್ಕಳ ಹಕ್ಕುಗಳ ಬಗ್ಗೆ ಹಾಗೂ ಪೊಲೀಸ್ ಠಾಣೆಯಲ್ಲಿನ ಮಕ್ಕಳ ವಿಭಾಗದ ಕಾರ್ಯವಿಧಾನಗಳ ಬಗ್ಗೆ ಮಾಹಿತಿ ನೀಡಿದರು.
ಪಟ್ಟಣದ ಅಗ್ನಿಶಾಮಕ ಇಲಾಖೆಯಲ್ಲಿ ಅಗ್ನಿ ಅವಘಡಗಳ ನಿಯಂತ್ರಣ ವಿಧಾನಗಳ ಬಗ್ಗೆ ತಾಲೂಕ ಅಗ್ನಿಶಾಮಕ ಅಧಿಕಾರಿ ರಂಗಪ್ಪ ಹಾಗೂ ರಾಘವೇಂದ್ರ ರವರು ಮಾಹಿತಿ ನೀಡಿದರು. ಶಾಲೆಯ ಮುಖ್ಯೋಪಾಧ್ಯಾಯರಾದ ರಕ್ಷೀತಾ ಗೀರಿಧರ ಪೂಜಾರ್, ಶಿಕ್ಷಕರಾದ ಶ್ರಾವಣಿ, ಶಾಂಭವಿ, ಶಾಂತಿ,ಸುಮಯ್ಯ, ಪ್ರಭು, ಶಿವರಾಮ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.
ವರದಿ :ಆಂಜನೇಯ ನಸಲಾಪುರ


