LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ತುರುವೇಕೆರೆ ತಾಲ್ಲೂಕನ್ನು ತೀವ್ರ ಬರಪೀಡಿತ ಪ್ರದೇಶ ಎಂದು ಘೋಷಿಸಿದ ಸರ್ಕಾರ

Advertisement

ತುರುವೇಕೆರೆ: ತುರುವೇಕೆರೆ ತಾಲ್ಲೂಕನ್ನು ರಾಜ್ಯ ಸರ್ಕಾರ ತೀವ್ರ ಬರಗಾಲ ಪೀಡಿತ ಪ್ರದೇಶ ಎಂದು ಘೋಷಿಸಿದೆ.

ರಾಜ್ಯದಲ್ಲಿ ಮುಂಗಾರು ಮಳೆಯ ತೀವ್ರ ಕೊರತೆಯಿಂದಾಗಿ ಎದುರಾಗಿರುವ ಬರ ಪರಿಸ್ಥಿತಿಯನ್ನು ಎದುರಿಸಲು ಸರ್ಕಾರ ಮೊದಲ ಹಂತದಲ್ಲಿ 101 ತಾಲೂಕುಗಳನ್ನು ಬರಪೀಡಿತ ತಾಲೂಕುಗಳು ಎಂದು ಅಧಿಕೃತವಾಗಿ ಘೋಷಿಸಿದೆ. ಇದರಲ್ಲಿ ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕು ಸಹ ಸೇರಿದೆ. ಅಲ್ಲಿಗೆ "ತುರುವೇಕೆರೆ ತಾಲ್ಲೂಕನ್ನು" ಸರ್ಕಾರ ಅಧಿಕೃತವಾಗಿ ತೀವ್ರ ಬರಪೀಡಿತ ಪ್ರದೇಶ ಪಟ್ಟಿಗೆ ಸೇರಿಸಿದೆ. 

ರಾಜ್ಯದ ಒಟ್ಟು 190 ತಾಲೂಕುಗಳಲ್ಲಿ ಮಳೆ ಕೊರತೆ ಉಂಟಾಗಿದ್ದು, ಇದರಲ್ಲಿ 13 ತಾಲೂಕುಗಳಲ್ಲಿ ಅತ್ಯಂತ ಭೀಕರ ಮಳೆ ಕೊರತೆ ದಾಖಲಾಗಿದೆ. ಸದ್ಯ ಮೊದಲ ಹಂತದಲ್ಲಿ ಪರಿಸ್ಥಿತಿ ಗಂಭೀರವಾಗಿರುವ 89 ತಾಲೂಕುಗಳನ್ನು ತೀವ್ರ ಬರಪೀಡಿತ ಹಾಗೂ 12 ತಾಲೂಕುಗಳನ್ನು ಸಾಧಾರಣ ಬರಪೀಡಿತ ಎಂದು ಗುರುತಿಸಿ ಒಟ್ಟು 101 ತಾಲೂಕುಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ.

ಬರ ಪರಿಹಾರ ಮತ್ತು ಮುನ್ನೆಚ್ಚರಿಕಾ ಕ್ರಮಗಳಿಗಾಗಿ ಸರ್ಕಾರ ವಿವಿಧ ಹಂತಗಳಲ್ಲಿ ಒಟ್ಟು ₹635 ಕೋಟಿ ಅನುದಾನ ಒದಗಿಸಿದೆ.
ಕುಡಿಯುವ ನೀರಿನ ಪೂರೈಕೆಗಾಗಿ: ಜಿಲ್ಲಾಧಿಕಾರಿಗಳಿಗೆ ₹117 ಕೋಟಿ ಬಿಡುಗಡೆ,  ಗ್ರಾಮೀಣ ವಿಧಾನಸಭಾ ಕ್ಷೇತ್ರಗಳಿಗೆ: 189 ಕೋಟಿ ಹಂಚಿಕೆ ಮಾಡಿದ್ದು,ಡಿಸಿಗಳ ಪಿಡಿ (PD) ಖಾತೆಯಲ್ಲಿ: 329 ಕೋಟಿ ಅನುದಾನ ಲಭ್ಯವಿದೆ. ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಮೇವು ಕಿಟ್‌ಗಳನ್ನು ವಿತರಿಸಲಾಗುತ್ತಿದೆ.

ತುರುವೇಕೆರೆ ತಾಲ್ಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ತಾಲ್ಲೂಕಿನ ರೈತರಿಗೆ ಬೆಳೆ ನಷ್ಟ ಪರಿಹಾರ, ಸಾಲ‌ ಮರುಪಾವತಿಗೆ ಸಡಿಲಿಕೆ, ಜಾನುವಾರುಗಳಿಗೆ ಗೋಶಾಲೆ, ಕುಡಿಯುವ ನೀರು, ಮೇವಿನ ಸೌಲಭ್ಯದಂತಹ ಪರಿಹಾರ ಕ್ರಮ ದೊರೆಯಬಹುದೆಂದು ನಿರೀಕ್ಷಿಸಲಾಗಿದೆ.

ವರದಿ: ಗಿರೀಶ್ ಕೆ ಭಟ್

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತರಬೇತಿಯಲ್ಲಿದ್ದ ವಿಮಾನ ಪತನ : ಕನ್ನಡಿಗ ಸೇರಿ ಇಬ್ಬರು ಪೈಲಟ್‌ಗಳು ಸಾವು ಧಾರವಾಡದಲ್ಲಿ ಪತ್ನಿಗೆ ಚಾಕು ಇರಿದು ಕೊಂದು ಪತಿ ನೇಣಿಗೆ ಶರಣುಸಿದ್ದರಾಮಯ್ಯ ಭೇಟಿಯಾದ ರಮೇಶ್ ಜಾರಕಿಹೊಳಿ : ಕುತೂಹಲ ಮೂಡಿಸಿದ ಮಾತುಕತೆಮಹಿಳಾ ವಿಶ್ವಕಪ್ ಹಾಕಿ: ಭಾರತ ತಂಡಕ್ಕೆ 5 ನೇ ಸ್ಥಾನ ಲಾಡ್ಸ್ ಟೆಸ್ಟ್ : ಇಂಗ್ಲೆಂಡ್ ವಿರುದ್ಧ ಪಾಕ್ ಉತ್ತಮ ಆರಂಭಬಾಕ್ಸ್ ಆಫೀಸ್‌ನಲ್ಲಿ ಟಾಕ್ಸಿಕ್ ಸುನಾಮಿ : ಮೊದಲ ದಿನದ ಕಲೆಕ್ಷನ್ ಬಗ್ಗೆ​​​ ಅಧಿಕೃತ ಘೋಷಣೆ ಸಾಕ್ಷಿಯಾಗಿದ್ದ ವ್ಯಕ್ತಿಯನ್ನು ಬಂಧಿಸಿದ್ದ ಪೊಲೀಸರು :  3 ಲಕ್ಷ ರೂ. ದಂಡ ವಿಧಿಸಿದ ಹೈಕೋರ್ಟ್7.5% ಮೀಸಲಾತಿಯನ್ನು 9ನೇ ಅನುಸೂಚಿಗೆ ಸೇರಿಸಲು ಒಗ್ಗಟ್ಟಿನ ಹೋರಾಟ ಅಗತ್ಯ: ಶರಣಬಸವ ನಾಯಕ ಜಾನೇಕಲ್ಆಡಳಿತ ವ್ಯವಸ್ಥೆ ಪರಿಚಯ ಕಾರ್ಯಕ್ರಮದಡಿಯಲ್ಲಿ  ಕಂದಾಯ ಇಲಾಖೆಗೆ ಭೇಟಿ ನೀಡಿದ ವಿದ್ಯಾರ್ಥಿಗಳುಕಳ್ಳರ ಕೈಚಳಕ: ದೇವರಿಗೇ ಕನ್ನ ಹಾಕಿದ ಕದೀಮರು