Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ನಿರುದ್ಯೋಗಿ ಎಂದು ಪತ್ನಿಗೆ ಜೀವನಾಂಶ ನೀಡಲು ನಿರಾಕರಿಸುವಂತಿಲ್ಲ : ಹೈಕೋರ್ಟ್

Advertisement

ಬೆಂಗಳೂರು: ದುಡಿಯುವ ಸಾಮರ್ಥ್ಯವಿರುವ ಪತಿ, ತಾನು ನಿರುದ್ಯೋಗಿ ಎಂಬ ಕಾರಣ ನೀಡಿ ಪತ್ನಿಗೆ ಜೀವನಾಂಶ ನೀಡುವುದರಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.

 

ಪತ್ನಿಯು ಉದ್ಯೋಗದಲ್ಲಿದ್ದರೂ ಸಹ, ಮದುವೆಯ ನಂತರ ಪತಿಯ ಮನೆಯಲ್ಲಿ ಅನುಭವಿಸುತ್ತಿದ್ದ ಜೀವನಮಟ್ಟವನ್ನು ಕಾಪಾಡಿಕೊಳ್ಳಲು ಪತಿಯಿಂದ ಜೀವನಾಂಶ ಪಡೆಯಲು ಅರ್ಹಳಾಗಿರುತ್ತಾಳೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

 

ಈ ಹಿಂದೆ ದಂಪತಿಗಳು ಬೇರೆ ಬೇರೆಯಾಗಿದ್ದು, 2021ರಲ್ಲಿ ವಿವಾಹವಾಗಿದ್ದರು. ಆದರೆ ವೈವಾಹಿಕ ಜೀವನದಲ್ಲಿ ಭಿನ್ನಾಭಿಪ್ರಾಯ ಮೂಡಿದ ಹಿನ್ನೆಲೆಯಲ್ಲಿ 2022ರಲ್ಲಿ ಪತ್ನಿ ಜೀವನಾಂಶ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು. ಕೌಟುಂಬಿಕ ನ್ಯಾಯಾಲಯವು ಪತ್ನಿಗೆ ಮಾಸಿಕ 20 ಸಾವಿರ ರೂ. ಜೀವನಾಂಶ ನೀಡುವಂತೆ ಮಧ್ಯಂತರ ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ಪತಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

 

2023ರಲ್ಲಿ ಕೆಲಸ ಕಳೆದುಕೊಂಡಿದ್ದು, ಪ್ರಸ್ತುತ ನಿರುದ್ಯೋಗಿಯಾಗಿದ್ದೇನೆ. ತಂದೆ-ತಾಯಿಯ ಪಿಂಚಣಿ ಮತ್ತು ಉಳಿತಾಯದ ಹಣದಲ್ಲಿ ಜೀವನ ನಡೆಸುತ್ತಿದ್ದೇನೆ. ಪತ್ನಿಯು ಪದವೀಧರೆಯಾಗಿದ್ದು, ಸ್ವಂತ ಆದಾಯ ಹೊಂದಿರುವುದರಿಂದ ಆಕೆಗೆ ಜೀವನಾಂಶದ ಅಗತ್ಯವಿಲ್ಲ.ನ್ಯಾಯಮೂರ್ತಿ ಡಾ. ಕೆ. ಮನ್ಮಥ ರಾವ್ ಅವರಿದ್ದ ಏಕಸದಸ್ಯ ಪೀಠವು ಪತಿಯ ಅರ್ಜಿಯನ್ನು ವಜಾಗೊಳಿಸಿದ್ದು, ಪತ್ನಿಯು ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಾ ತಿಂಗಳಿಗೆ 40 ಸಾವಿರ ರೂ. ಗಿಂತ ಹೆಚ್ಚು ವೇತನ ಪಡೆಯುತ್ತಿರುವುದು ನಿಜ. ಆದರೆ, ಪತಿಯು ಹಿಂದೆ ಕೆಲಸ ಮಾಡುತ್ತಿದ್ದಾಗ ತಿಂಗಳಿಗೆ ಸುಮಾರು 4.50 ಲಕ್ಷ ರೂ. ಸಂಬಳ ಪಡೆಯುತ್ತಿದ್ದನು. ಆತನ ವಾರ್ಷಿಕ ಆದಾಯ 66 ಲಕ್ಷ ರೂ.ಗೂ ಅಧಿಕವಾಗಿತ್ತು.

 

ಪತಿಯ ಐಷಾರಾಮಿ ಜೀವನಮಟ್ಟಕ್ಕೆ ಹೋಲಿಸಿದರೆ ಪತ್ನಿಯ ವೇತನ ಅತ್ಯಲ್ಪವಾಗಿದೆ. ಈ ಜೀವನಮಟ್ಟದ ಅಂತರವನ್ನು ಸರಿದೂಗಿಸಲು ಜೀವನಾಂಶ ಅತ್ಯಗತ್ಯ. ಆರೋಗ್ಯವಂತ ಪತಿಯು ಕೆಲಸವಿಲ್ಲ ಎಂಬ ನೆಪ ಹೇಳಿ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವಂತಿಲ್ಲ ಎಂದು ಸುಪ್ರೀಂಕೋರ್ಟ್ ನೀಡಿದ್ದ ತೀರ್ಪನ್ನು ಹೈಕೋರ್ಟ್ ಇಲ್ಲಿ ನೆನಪಿಸಿದೆ.

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇನ್ಮುಂದೆ 'ವಂದೇ ಮಾತರಂ' ಗೀತೆಗೆ ಅವಮಾನ ಮಾಡಿದ್ದರೇ ಜೈಲೂಟ ಫಿಕ್ಸ್ : ಕಾಯ್ದೆಗೆ ಅನುಮೋದನೆ ಪಶ್ಚಿಮ ಬಂಗಾಳ ಸಂಭಾವ್ಯ ಸಿಎಂ ಸುವೇಂದು ಅಧಿಕಾರಿ ಆಪ್ತ ಸಹಾಯಕನ ಗುಂಡಿಟ್ಟು ಹತ್ಯೆ ನಿರುದ್ಯೋಗಿ ಎಂದು ಪತ್ನಿಗೆ ಜೀವನಾಂಶ ನೀಡಲು ನಿರಾಕರಿಸುವಂತಿಲ್ಲ : ಹೈಕೋರ್ಟ್ ಸಚಿವೆ ಸೀತಾರಾಮನ್ ಹೆಸರನ್ನಲ್ಲಿ 'ಡೀಪ್‌ಫೇಕ್' ವಿಡಿಯೋ ಬಳಸಿ ಬೆಳಗಾವಿ ವೃದ್ಧನಿಗೆ 7.9 ಲಕ್ಷ ರೂ. ವಂಚನೆ ಅಹ್ಮದಾಬಾದ್‌ನಲ್ಲಿ ಮೇ. ೩೧ ರಂದು ಐಪಿಎಲ್ ಫೈನಲ್ ಪಂದ್ಯಪಂಜಾಬ್ ಕಿಂಗ್ಸ್ಗೆ ೨೩೬ ರನ್‌ಗಳ ಗೆಲುವಿನ ಗುರಿಎಸ್‌ಆರ್‌ಎಚ್ ಬಿರುಸಿನ ಆರಂಭ 75 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದಾಗಲೇ ಲೋಕಾಯುಕ್ತ ಬಲೆಗೆ ಬಿದ್ದ ಗ್ರಾಪಂ ಸಿಬ್ಬಂದಿ ವಿಜಯಪುರದಲ್ಲಿ ಮೂರು ವರ್ಷದ ಮಗುವಿನ ಮೇಲೆ ಬೀದಿ ನಾಯಿಗಳ ಭೀಕರ ದಾಳಿಒಳ ಮೀಸಲಾತಿ ಐತಿಹಾಸಿಕ ನಿರ್ಧಾರ, ಸಮಾಜಿಕ ನ್ಯಾಯಕ್ಕೆ ನಮ್ಮ ಸರ್ಕಾರ ಬದ್ಧ : ಸಿದ್ದರಾಮಯ್ಯ