ಬ್ರೆಜಿಲ್ ಫುಟ್‌ಬಾಲ್ ತಂಡವು ಫೀಪಾ ವಿಶ್ವಕಪ್ ಫುಟ್‌ಬಾಲ್ ಪಂದ್ಯಾವಳಿಯಲ್ಲಿ ಹೈತಿ ವಿರುದ್ಧ ೩-೦ ಗೋಲಿನಿಂದ ಸುಲಭ ಗೆಲುವು ಪಡೆಯಿತು.
ಸಿ ಗುಂಪಿನಲ್ಲಿ ನಡೆದ ಈ ಪಂದ್ಯದಲ್ಲಿ ವಿಜೇತ ಬ್ರೆಜಿಲ್ ಪರವಾಗಿ ಮ್ಯಾಥ್ಯೂಸ್ ಕೂಹಾ ಅವರು ಪಂದ್ಯದ ೨೩ ಹಾಗೂ ೩೬ ನೇ ನಿಮಿಷದಲ್ಲಿ ಗೋಲು ಗಳಿಸಿದರು. ತಂಡದ ಪರವಾಗಿ ಬಂದ ಮೂರನೇ ಗೋಲನ್ನು ವಿನ್ಸಿಯಸ್ ಜ್ಯೂನಿಯರ್ ಪಂದ್ಯದ ೪೫ ನೇ ನಿಮಿಷದಲ್ಲಿ ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸಿದರು.
ಡಿ ಗುಂಪಿನ ಇನ್ನೊಂದು ಪಂದ್ಯದಲ್ಲಿ ಪರುಗ್ವೆ ತಂಡವು ಟರ್ಕಿ ವಿರುದ್ಧ ೧-೦ ಗೋಲಿನ ಜಯಗಳಿಸಿತು.
ಯುಎಸ್‌ಎ ತಂಡವು ಆಸ್ಟೆçÃಲಿಯಾ ವಿರುದ್ಧ ೨-೦ ಹಾಗೂ ಮೊರಾಕ್ಕೋ ತಂಡವು ಸ್ಕಾಟ್ಲೆಂಡ್ ವಿರುದ್ಧ ೧-೦ ಗೋಲಿನ ಜಯ ಗಳಿಸಿತು.


