LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಶಿಕ್ಷಣ ಸಾಮಗ್ರಿ ವಿತರಿಸುವ ಮೂಲಕ ಅರ್ಥಪೂರ್ಣವಾಗಿ ಸಂವಿಧಾನ ದಿನ ಆಚರಣೆ

Advertisement

ಬೈಲಹೊಂಗಲ : ಶಿಕ್ಷಣಕ್ಕೆ ಸಹಕಾರ, ಸಮಾನತೆಯಿಂದ ಸಹಬಾಳ್ವೆ ಹಾಗೂ ಅಸ್ಪೃಶ್ಯತೆ ನಿವಾರಣೆಯ ಆಶಯಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಸ್ಮರಿಸುತ್ತಾ ಪಟ್ಟಣದ ಅಂಬೇಡ್ಕರ್ ಉದ್ಯಾನವನದಲ್ಲಿ ಸಂವಿಧಾನ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ದಲಿತ ಸಂಘರ್ಷ ಸಮಿತಿ (ರಿ.), ಬೆಂಗಳೂರು ತಾಲೂಕು ಸಮಿತಿ ಬೈಲಹೊಂಗಲ ಘಟಕದ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು. ಬಳಿಕ ಸಂವಿಧಾನ ಪೀಠವನ್ನು ಸ್ಮರಿಸಿ ಸಂವಿಧಾನದ ಆಶಯಗಳನ್ನು ಗೌರವಿಸಲಾಯಿತು.

ಸಂವಿಧಾನ ದಿನದ ಅಂಗವಾಗಿ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವ ಉದ್ದೇಶದಿಂದ ಶಾಲಾ ಮಕ್ಕಳಿಗೆ ನೋಟ್‌ಬುಕ್, ಪೆನ್ ಹಾಗೂ ಪೆನ್ಸಿಲ್ ಬಾಕ್ಸ್‌ಗಳನ್ನು ವಿತರಿಸಲಾಯಿತು. ಶಿಕ್ಷಣದ ಮೂಲಕವೇ ಸಮಾಜದಲ್ಲಿ ಸಮಾನತೆ, ಜಾಗೃತಿ ಮತ್ತು ಬದಲಾವಣೆ ತರಲು ಸಾಧ್ಯ ಎಂಬ ಅಂಬೇಡ್ಕರ್ ಅವರ ಆಶಯದಂತೆ ಮಕ್ಕಳಿಗೆ ಶೈಕ್ಷಣಿಕ ಸಾಮಗ್ರಿಗಳನ್ನು ವಿತರಿಸಿ ಸಂವಿಧಾನ ದಿನವನ್ನು ವಿಶೇಷವಾಗಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ದಲಿತ ಸಂಘಟನೆಯ ತಾಲೂಕು ಸಂಚಾಲಕ ಮಹೇಶ ಮಾದರ, ಸಂಘಟನಾ ಸಂಚಾಲಕರಾದ ಶಿವಾನಂದ ಭರಮಣ್ಣವರ, ವಸಂತ ಹೊಸಮನಿ, ರಾಘವೇಂದ್ರ ಭರಮಣ್ಣವರ, ಪ್ರವೀಣ ಹೊಂಗಲ, ಮಲ್ಲೇಶ ಹುಲ್ಲೆಣ್ಣವರ, ಅಜ್ಜಪ್ಪ ಹುಲ್ಲೆಣ್ಣವರ, ಅಭಿಷೇಕ ಮೇಗೇರಿ, ರಾಘವೇಂದ್ರ ಕಾಳೆ, ಉದಯ ಭರಮಣ್ಣವರ, ಸಾಗರ ನಡುವಿನಮನಿ, ವಿಜಯ ಹೊಸಮನಿ, ಪ್ರಕಾಶ ಭರಮಣ್ಣವರ, ಅಭಿಷೇಕ ದೊಡಮನಿ, ಅಪ್ಪೂಜೆ ಭರಮಣ್ಣವರ, ಆಕಾಶ ಮಲಮೇತ್ರಿ, ಪ್ರಥಮ ಭರಮಣ್ಣವರ, ಪ್ರೀತಮ್ ಹುಲ್ಲೆಣ್ಣವರ, ಸಚಿನ್ ಭರಮಣ್ಣವರ, ಪ್ರದೀಪ ವಗ್ಗರ, ಪ್ರಥಮ ಪಟ್ಟಿಹಾಳ, ಪ್ರದೀಪ ಮಾದರ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವರದಿ : ಸಮೀರ್ ಮುಲ್ಲಾನವರ

Advertisement

Author
bharathvaibhavx
📰 BV News 5 | Kannada | English
Voice of the People
📲 Breaking News,
📡 Latest Updates,
🎥 Exclusive Stories,
🌍 Stay informed, stay ahead.
✅ Follow us here 👇🏻
@bv_news_5
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮುಂಬೈ ಇಂಡಿಯನ್ಸ ಉಪನಾಯಕನ ಆಫರ್ ನಿರಾಕರಿಸಿದ ಬುಮ್ರಾ ಕ್ಷೇತ್ರ ಪುನರ್ವಿಂಗಡಣೆಯು ಮತ ಕದಿಯಲು ಹೊಸ ಆಲೋಚನೆ: ರಾಹುಲ್ ಗಾಂಧಿ ವಾಗ್ದಾಳಿ ಸಿಎಂ ಆಶ್ವಾಸನೆಗೆ ಒಪ್ಪಿದ ಆಶಾ ಕಾರ್ಯಕರ್ತೆಯರು : ಸಂಧಾನ ಸಭೆ ಸಕ್ಸಸ್ಅಧಿವೇಶನ ಮುಕ್ತಾಯದ ಒಳಗೆ ಬರ ಪರಿಹಾರ ಸಿಗದಿದ್ರೆ ದೆಹಲಿ ಚಲೋ : ಸಿಎಂ ಎಚ್ಚರಿಕೆ13,000 ವರ್ಷಗಳಷ್ಟು ಹಳೆಯದಾದ ಪುರಾತನ ಮಾನವನ ಅಸ್ಥಿಪಂಜರ ಪತ್ತೆಪ್ರತ್ಯೇಕ ಧರ್ಮ ಬೇಡ ಎಂದ ವಿಜಯೇಂದ್ರ : ಭುಗಿಲೆದ್ದ ಆಕ್ರೋಶ, ಗೋ ಬ್ಯಾಕ್​ ಘೋಷಣೆ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಗೆ ಸೌರಭ ಕಾನ್ವೆಂಟಿನ ಮೊಹಮದ್ ಮಾಜ್ ಆಯ್ಕೆಶಿಕ್ಷಣ ಸಾಮಗ್ರಿ ವಿತರಿಸುವ ಮೂಲಕ ಅರ್ಥಪೂರ್ಣವಾಗಿ ಸಂವಿಧಾನ ದಿನ ಆಚರಣೆಮುಖ್ಯಮಂತ್ರಿಗಳೇ ಖಜಾನೆ ಬರಿದಾಗಿದೆಯೇ? “ಆಶಾ” ಬಗ್ಗೆ ನಿರ್ಲಕ್ಷ್ಯವೇ? ಸ್ಪಷ್ಪಪಡಿಸಿ ಜೋಶಿ ಅವರು ಬಡವರ ಅಭಿವೃದ್ಧಿಯ ಹರಿಕಾರ: ನಾಗರಾಜ ಛಬ್ಬಿ