LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಮುಖ್ಯಮಂತ್ರಿಗಳೇ ಖಜಾನೆ ಬರಿದಾಗಿದೆಯೇ? “ಆಶಾ” ಬಗ್ಗೆ ನಿರ್ಲಕ್ಷ್ಯವೇ? ಸ್ಪಷ್ಪಪಡಿಸಿ

ಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಸುವಂತೆ ಎಂಡಿಎಲ್ ಒತ್ತಾಯ

Advertisement

ತುರುವೇಕೆರೆ : ಗ್ರಾಮೀಣ ಪ್ರದೇಶದ ಮಹಿಳೆಯರು, ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಲ್ಲಿ ಮಹತ್ತರ ಪಾತ್ರ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ಚಳ ಹಾಗೂ ಇನ್ನಿತರ ಬೇಡಿಕೆಯ ಬಗ್ಗೆ ಮೌನವಹಿಸಿರುವ ಸರ್ಕಾರದ ನಡೆ ಖಂಡನೀಯ. ಕೂಡಲೇ ಸರ್ಕಾರ ಆಶಾ ಕಾರ್ಯಕರ್ತೆಯರ ಬೇಡಿಕೆಯನ್ನು ಈಡೇರಿಡಬೇಕೆಂದು ಬಿಜೆಪಿ ಮುಖಂಡ, ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ್ ಒತ್ತಾಯಿಸಿದರು.  

ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕಳೆದ 11 ದಿನಗಳಿಂದ ಆಶಾ ಕಾರ್ಯಕರ್ತೆಯರು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಹಗಲಿರುಳೆನ್ನದೆ, ಚಳಿ, ಮಳೆ, ಬಿಸಿಲೆನ್ನದೆ ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಬೇಡಿಕೆ ಈಡೇರಿಕೆಗಾಗಿ ಹೋರಾಟ ನಡೆಸುತ್ತಿದ್ದಾರೆ. ಆಶಾ ಕಾರ್ಯಕರ್ತೆಯರ ಪೈಕಿ ಕೆಲವರು ತಮ್ಮ ಪುಟ್ಟ ಮಕ್ಕಳನ್ನು ಜೊತೆಯಲ್ಲಿಟ್ಟುಕೊಂಡು ಹೋರಾಟದಲ್ಲಿ ನಿರತರಾಗಿದ್ದಾರೆ. ಹಲವು ಮಂದಿ ಮಹಿಳೆಯರು, ಮಕ್ಕಳು ಈಗಾಗಲೇ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಆದರೂ ಸರ್ಕಾರ ತನ್ನ ನಿರ್ಲಕ್ಷ್ಯ ಧೋರಣೆ ಮುಂದುವರೆಸಿದೆ. ಆಶಾದವರ ಬೇಡಿಕೆ ಈಡೇರಿಕೆ ಸಂಬಂಧ ಸರ್ಕಾರದ ಮುಖ್ಯಮಂತ್ರಿಗಳಾಗಲೀ, ಸಂಬಂಧಿಸಿದ ಸಚಿವರಾಗಲೀ ಶೀಘ್ರ ನಿರ್ಧಾರ ಕೈಗೊಳ್ಳದಿರುವುದು ಇದೊಂದು ಬೇಜಾವಾಬ್ದಾರಿ ಸರ್ಕಾರ ಎಂಬುದರ ಸಂಕೇತವಾಗಿದೆ ಎಂದು ಕಿಡಿಕಾರಿದರು.

ಆಶಾ ಕಾರ್ಯಕರ್ತೆಯರು ಗ್ರಾಮೀಣ ಪ್ರದೇಶದಲ್ಲಿನ ಗರ್ಭಿಣಿಯರು, ಮಹಿಳೆಯರು, ಮಕ್ಕಳ ಆರೋಗ್ಯ ಸೇರಿದಂತೆ ಸರ್ಕಾರದ ಆರೋಗ್ಯ ಇಲಾಖೆಯ ವಿವಿಧ ಯೋಜನೆಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಅವಿರತವಾಗಿ ಶ್ರಮಿಸಿದ್ದಾರೆ. ಕೊರೋನಾ ಸಮಯದಲ್ಲಿ ಆಶಾ ಕಾರ್ಯಕರ್ತೆಯರ ಸೇವೆ ಶ್ಲಾಘನೀಯವಾದುದು. ಗ್ರಾಮೀಣ ಆರೋಗ್ಯ ವ್ಯವಸ್ಥೆಯ ನಿಜವಾದ ಆಧಾರ ಸ್ತಂಭ ಆಶಾ ಕಾರ್ಯಕರ್ತರಾಗಿದ್ದಾರೆ. ಅವರ ಸೇವೆಗೆ ತಕ್ಕ ಗೌರವಧನ, ಆರ್ಥಿಕ ಭದ್ರತೆ ಹಾಗೂ ಸೂಕ್ತ ಸೌಲಭ್ಯಗಳನ್ನು ಒದಗಿಸಬೇಕಾದುದು ಸರ್ಕಾರದ ಜವಾಬ್ದಾರಿಯಾಗಿದೆ. ಸರ್ಕಾರ ಈಗ ನೀಡುತ್ತಿರುವ ಕನಿಷ್ಠ ಗೌರವಧನ ಇಂದಿನ ದುಬಾರಿ ದುನಿಯಾದಲ್ಲಿ ಜೀವನ ನಡೆಸಲು ಸಾಧ್ಯವಾಗುವುದಿಲ್ಲ. ಬೆಲೆ ಏರಿಕೆ ಮಾಡುವ ಸರ್ಕಾರ ಅದಕ್ಕೆ ತಕ್ಕಂತೆ ಗೌರವಧನವನ್ನೂ ಹೆಚ್ಚಿಸಬೇಕೆಂಬ ಕನಿಷ್ಠ ಸಾಮಾನ್ಯ ಸರ್ಕಾರಕ್ಕಿಲ್ಲದಿರುವುದು ಶೋಚನೀಯ ಸಂಗತಿಯಾಗಿದೆ. ಸರ್ಕಾರ ಆಶಾ ಕಾರ್ಯಕರ್ತೆಯರ ನ್ಯಾಯಯುತ ಬೇಡಿಕೆಯಾದ ಕನಿಷ್ಠ 15 ಸಾವಿರ ಗೌರವಧನ ನೀಡಲೇಬೇಕು. ಫ್ರೀಡಂ ಪಾರ್ಕಿಗೆ ಭೇಟಿ ನೀಡಿ ಅವರ ಹೋರಾಟಕ್ಕೆ ಅಗತ್ಯ ಬೆಂಬಲ ನೀಡುತ್ತೇನೆ ಎಂದರು.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಆಶಾಕಾರ್ಯಕರ್ತರನ್ನು ಅಂಗನವಾಡಿ ಕಾರ್ಯಕರ್ತರೆಂದು ಸಂಭೋದಿಸಿದ್ದಾರೆ. ಅಂಗನವಾಡಿ ಕಾರ್ಯಕರ್ತರಾರು? ಆಶಾ ಕಾರ್ಯಕರ್ತರಾರು? ಎಂಬುದರ ಅರಿವು ಇಲ್ಲದ ಮುಖ್ಯಮಂತ್ರಿಗಳನ್ನು ನಮ್ಮ ರಾಜ್ಯ ಹೊಂದಿದೆ. ಗ್ಯಾರಂಟಿಗೆ 52ಸಾವಿರ ಕೋಟಿ ಖರ್ಚು ಮಾಡಲಾಗುತ್ತಿದೆ. ಮುಖ್ಯಮಂತ್ರಿಗಳ ಮನೆ ನವೀಕರಣಕ್ಕೆ ನೂರಾರು ಕೋಟಿ ವ್ಯಯಿಸಲಾಗಿದೆ. ಆದರೆ ಆಶಾ ಕಾರ್ಯಕರ್ತರು ನೆಮ್ಮದಿಯ ಜೀವನ ಸಾಗಿಸಲು 15 ಸಾವಿರ ರೂ ಗೌರವಧನ ಕೇಳಿದರೆ ಸರ್ಕಾರಕ್ಕೆ ನೀಡಲಾಗುತ್ತಿಲ್ಲವೆಂದರೆ ಸರ್ಕಾರದ ಖಜಾನೆ ಬರಿದಾಗಿದೆಯೇ? ಅಥವಾ ಆಶಾ ಕಾರ್ಯಕರ್ತರ ಬಗ್ಗೆ ನಿರ್ಲಕ್ಷ್ಯವೇ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕಿದೆ ಎಂದ ಅವರು, ಸರ್ಕಾರ ಕೂಡಲೇ ಬಿಸಿಲಿನಲ್ಲಿ ಮನೆ, ಕುಟುಂಬವನ್ನು ಬಿಟ್ಟು ಬೀದಿಗಿಳಿದು ಹೋರಾಟ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಸಬೇಕು. ಇಲ್ಲವಾದಲ್ಲಿ ತಾಯಂದಿರ ಶಾಪಕ್ಕೆ ಈ ಸರ್ಕಾರ ಗುರಿಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ವರದಿ: ಗಿರೀಶ್ ಕೆ ಭಟ್,

Advertisement

Author
bharathvaibhavx
📰 BV News 5 | Kannada | English
Voice of the People
📲 Breaking News,
📡 Latest Updates,
🎥 Exclusive Stories,
🌍 Stay informed, stay ahead.
✅ Follow us here 👇🏻
@bv_news_5
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮುಂಬೈ ಇಂಡಿಯನ್ಸ ಉಪನಾಯಕನ ಆಫರ್ ನಿರಾಕರಿಸಿದ ಬುಮ್ರಾ ಕ್ಷೇತ್ರ ಪುನರ್ವಿಂಗಡಣೆಯು ಮತ ಕದಿಯಲು ಹೊಸ ಆಲೋಚನೆ: ರಾಹುಲ್ ಗಾಂಧಿ ವಾಗ್ದಾಳಿ ಸಿಎಂ ಆಶ್ವಾಸನೆಗೆ ಒಪ್ಪಿದ ಆಶಾ ಕಾರ್ಯಕರ್ತೆಯರು : ಸಂಧಾನ ಸಭೆ ಸಕ್ಸಸ್ಅಧಿವೇಶನ ಮುಕ್ತಾಯದ ಒಳಗೆ ಬರ ಪರಿಹಾರ ಸಿಗದಿದ್ರೆ ದೆಹಲಿ ಚಲೋ : ಸಿಎಂ ಎಚ್ಚರಿಕೆ13,000 ವರ್ಷಗಳಷ್ಟು ಹಳೆಯದಾದ ಪುರಾತನ ಮಾನವನ ಅಸ್ಥಿಪಂಜರ ಪತ್ತೆಪ್ರತ್ಯೇಕ ಧರ್ಮ ಬೇಡ ಎಂದ ವಿಜಯೇಂದ್ರ : ಭುಗಿಲೆದ್ದ ಆಕ್ರೋಶ, ಗೋ ಬ್ಯಾಕ್​ ಘೋಷಣೆ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಗೆ ಸೌರಭ ಕಾನ್ವೆಂಟಿನ ಮೊಹಮದ್ ಮಾಜ್ ಆಯ್ಕೆಶಿಕ್ಷಣ ಸಾಮಗ್ರಿ ವಿತರಿಸುವ ಮೂಲಕ ಅರ್ಥಪೂರ್ಣವಾಗಿ ಸಂವಿಧಾನ ದಿನ ಆಚರಣೆಮುಖ್ಯಮಂತ್ರಿಗಳೇ ಖಜಾನೆ ಬರಿದಾಗಿದೆಯೇ? “ಆಶಾ” ಬಗ್ಗೆ ನಿರ್ಲಕ್ಷ್ಯವೇ? ಸ್ಪಷ್ಪಪಡಿಸಿ ಜೋಶಿ ಅವರು ಬಡವರ ಅಭಿವೃದ್ಧಿಯ ಹರಿಕಾರ: ನಾಗರಾಜ ಛಬ್ಬಿ