ತುರುವೇಕೆರೆ : ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಮಾಯಸಂದ್ರದ ಸೌರಭ ಕಾನ್ವೆಂಟಿನ ವಿದ್ಯಾರ್ಥಿ ಮೊಹಮದ್ ಮಾಜ್ ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಅರೇಬಿಕ್ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ.
ಸೌರಭ ಕಾನ್ವೆಂಟಿನ ವಿದ್ಯಾರ್ಥಿಗಳು ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಈ ಪೈಕಿ ಶಾಲೆಯ 7ನೇ ತರಗತಿ ವಿದ್ಯಾರ್ಥಿ ಮೊಹಮ್ಮದ್ ಮಾಜ್ ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಅರೇಬಿಕ್ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ಉಳಿದಂತೆ ಹಿಂದಿ ಕಂಠಪಾಠ ಸ್ಪರ್ಧೆಯಲ್ಲಿ ಮೊಹಮದ್ ಕೈಫ್ ದ್ವಿತೀಯ, ಚಿತ್ರಕಲಾ ಸ್ಪರ್ಧೆಯಲ್ಲಿ ಉಮ್ಮೆ ಕಲ್ಸುಮ್ ತೃತೀಯ, ಕಿರಿಯರ ವಿಭಾಗದಲ್ಲಿ ಧಾರ್ಮಿಕ ಪಠಣದಲ್ಲಿ ಅಬ್ದುಲ್ ವಹಾಬ್ ದ್ವಿತೀಯ, ಕಂಠಪಾಠ ಸ್ಪರ್ಧೆಯಲ್ಲಿ ಮದಿಹಾ ಬಾನು ದ್ವಿತೀಯ ಸ್ಥಾನ ಪಡೆದಿದ್ದಾರೆ. ವರ್ಷಿಣಿ, ಧನಲಕ್ಷ್ಮೀ, ರೋಹಿತ್, ನೂರ್ ಸುಲ್ತಾನ, ನೂತನ್, ಚಿರಾಗ್ ಸೇರಿದಂತೆ ಶಾಲೆಯ ಹಲವು ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಉತ್ತಮ ಪೈಪೋಟಿ ನೀಡಿದ್ದಾರೆ.
ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಹಾಗೂ ಸ್ಪರ್ಧೆಯಲ್ಲಿ ಉತ್ತಮ ಸಾಧನೆ ಮಾಡಿದ ಎಲ್ಲಾ ವಿದ್ಯಾರ್ಥಿಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರ್, ಸಂಸ್ಥೆಯ ಕಾರ್ಯದರ್ಶಿ ಕಲ್ಪನಾ ಮುನಿರಾಜು, ಮುಖ್ಯ ಶಿಕ್ಷಕ ಮುನಿರಾಜು, ಶಿಕ್ಷಕರಾದ ನಸುರತ್ ಜಬೀನ್, ಲಲಿತಾ ಭಟ್, ಸೌಮ್ಯಶ್ರೀ, ಹಾಜಿರಾ, ಭಾವನ, ಪ್ರಭಾವತಿ ಅಭಿನಂದಿಸಿದ್ದಾರೆ.
ವರದಿ: ಗಿರೀಶ್ ಕೆ ಭಟ್

