LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಜೋಶಿ ಅವರು ಬಡವರ ಅಭಿವೃದ್ಧಿಯ ಹರಿಕಾರ: ನಾಗರಾಜ ಛಬ್ಬಿ

Advertisement


ಕಲಘಟಗಿ : ನಮ್ಮ ನೆಚ್ಚಿನ ನಾಯಕ ಸಂಸತ್ ಸದಸ್ಯ ಮಾನ್ಯ ಪ್ರಲ್ಹಾದ ಜೋಶಿ ಅವರು ಬಡವರ ಹಾಗೂ ದೇಶದ ಅಭಿವೃದ್ಧಿಯ ಹರಿಕಾರ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಹಾಗೂ ಬಿ.ಜೆಪಿ ಮುಖಂಡ ನಾಗರಾಜ ಛಬ್ಬಿ ಹೇಳಿದರು.

ತಾಲೂಕಿನ ಸಂಗಮೇಶ್ವರ  ಗ್ರಾಮದ ಶಾಲಾ ಆವರಣದಲ್ಲಿ ಭಕ್ತ ಕನಕದಾಸರ ಜಯಂತಿ ಮತ್ತು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಹುಟ್ಟುಹಬ್ಬದ ನಿಮಿತ್ತ ಕೆ ಎಲ್ ಇ ಸಂಸ್ಥೆಯ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮನುಷ್ಯನಿಗೆ ಸಮಸ್ಯೆ ಇದ್ದರೂ ಆರೋಗ್ಯ ಸಮಸ್ಯೆ ಇರಬಾರದು, ಆದ್ದರಿಂದ ಮಾನ್ಯರು ತಮ್ಮ ಹುಟ್ಟು ಹಬ್ಬವನ್ನು ಇಂತಹ ಹಳ್ಳಿಗಳಲ್ಲಿ ಆಚರಿಸುತ್ತಿದ್ದಾರೆ ನಿಮ್ಮೆಲ್ಲರ ಮೂಲಕ ಧನ್ಯವಾದಗಳು ಎಂದರು ಹಾಲಿ ವಿಧಾನ ಪರಿಷತ್ ಸದಸ್ಯ ಲಿಂಗರಾಜ ಪಾಟೀಲ ಹಾಗೂ ಕೆ ಎಲ್ ಇ ಸಂಸ್ಥೆಯಡಾ /ವೈ ಎಫ್ ಹಂಚಿ ಮಾತನಾಡಿದರು.ಹಳ್ಳಿಯ ನಿತ್ಯಾನಂದ ಆಶ್ರಮದ ಸಾನಿಧ್ಯ ವಹಿಸಿದ್ದ ಕೆ ಕೆ ಹಳ್ಳಿಯ ಶ್ರೀ ಶ್ರೀ ಸುಬ್ರಹ್ಮಣ್ಯ ಸ್ವಾಮೀಜಿ ಮಾತನಾಡಿ ಕನಕದಾಸರ ಜೀವನ ನಮ್ಮೆಲ್ಲರಿಗೂ ದಾರಿ ದೀಪ ಎಂದರು.ಇದೇ ರೀತಿ ನೆಲಿಹರವಿ ಗ್ರಾಮದಲ್ಲಿಯು ಸಹ ಉಚಿತ ಆರೋಗ್ಯ ಶಿಬಿರ ಹಾಗೂ ಕಲಘಟಗಿಯ ಸಾರ್ವಜನಿಕ ಆಸ್ಪತ್ರೆಗೆ ಉಚಿತವಾಗಿ ಬೆಡ್ ಶಿಟಗಳನ್ನು ನೀಡಿದರು.

ಈ ಸಂಧರ್ಭದಲ್ಲಿ ಕೆ ಎಲ್ ಇ ಸಂಸ್ಥೆಯ ನಿರ್ದೇಶಕ ಮಂಜುನಾಥ್ ಮುನವಳ್ಳಿ,ಮಾಜಿ ಜಿ ಪಂ ಸದಸ್ಯ ಐ ಸಿ ಗೋಕುಲ,ಹಾಗೂ ಬಸವರಾಜ ಕರಡಿಕೊಪ್ಪ, ಡಾ. ಮಹೇಶ ತಿಪ್ಪಣ್ಣವರ ಕೆ ಬಿ ಪಾಟೀಲ,ಅಣ್ಣಪ್ಪ ಓಲೇಕಾರ,ಸೋಮು ಕೊಪ್ಪದ,ಕಲ್ಲಪ್ಪ ಪುಟ್ಟಪ್ಪನವರ, ಸದಾನಂದ ಚಿಂತಾಮಣಿ, ನಿಂಗಪ್ಪಣ್ಣ ಸುತಗಟ್ಟಿ, ಯಲ್ಲಾರಿ ಶಿಂಧೆ,ಫಕ್ಕಿರೇಶ್ ನೇಸರೆಕರ ವಿರೂಪಾಕ್ಷ ನೂಲ್ವಿ,ಅರ್ಜುನ ಲಮಾಣಿ,ವಿಜಯ ಲಕ್ಶ್ಮೀ ಆಡಿನವರ, ಶಿವಲಿಂಗಪ್ಪ ಯಲವಾಳ ,ಪರಶುರಾಮ ದುಂಡಿ,ಯಲ್ಲಪ್ಪ  ಬೋವಿ, ನಾರಾಯಣ ಸಂಗಮೇಶ್ವರ,  ಶ್ರೀಕಾಂತ ಪಾಟೀಲ, ಆನಂದ ಕಡ್ಲಾಸ್ಕರ, ಬಸವರಾಜ್ ಹೊನ್ನಳ್ಳಿ,ಮಲ್ಲಯ್ಯಸ್ವಾಮಿ ಗೋಡಿಮನಿ,ಪರಶುರಾಮ ಹುಲಿಹೊಂಡ ಮುಂತಾದವರು ಉಪಸ್ಥಿತರಿದ್ದರು. ಶಿಕ್ಷಕ ನಾಗರಾಜ್ ನಾಯಕ ನಿರೂಪಿಸಿದರು, ಬಸವರಾಜ್ ಶೆರೆವಾಡ ಸ್ವಾಗತಿಸಿದರು.

Advertisement

Author
bharathvaibhavx
📰 BV News 5 | Kannada | English
Voice of the People
📲 Breaking News,
📡 Latest Updates,
🎥 Exclusive Stories,
🌍 Stay informed, stay ahead.
✅ Follow us here 👇🏻
@bv_news_5
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮುಂಬೈ ಇಂಡಿಯನ್ಸ ಉಪನಾಯಕನ ಆಫರ್ ನಿರಾಕರಿಸಿದ ಬುಮ್ರಾ ಕ್ಷೇತ್ರ ಪುನರ್ವಿಂಗಡಣೆಯು ಮತ ಕದಿಯಲು ಹೊಸ ಆಲೋಚನೆ: ರಾಹುಲ್ ಗಾಂಧಿ ವಾಗ್ದಾಳಿ ಸಿಎಂ ಆಶ್ವಾಸನೆಗೆ ಒಪ್ಪಿದ ಆಶಾ ಕಾರ್ಯಕರ್ತೆಯರು : ಸಂಧಾನ ಸಭೆ ಸಕ್ಸಸ್ಅಧಿವೇಶನ ಮುಕ್ತಾಯದ ಒಳಗೆ ಬರ ಪರಿಹಾರ ಸಿಗದಿದ್ರೆ ದೆಹಲಿ ಚಲೋ : ಸಿಎಂ ಎಚ್ಚರಿಕೆ13,000 ವರ್ಷಗಳಷ್ಟು ಹಳೆಯದಾದ ಪುರಾತನ ಮಾನವನ ಅಸ್ಥಿಪಂಜರ ಪತ್ತೆಪ್ರತ್ಯೇಕ ಧರ್ಮ ಬೇಡ ಎಂದ ವಿಜಯೇಂದ್ರ : ಭುಗಿಲೆದ್ದ ಆಕ್ರೋಶ, ಗೋ ಬ್ಯಾಕ್​ ಘೋಷಣೆ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಗೆ ಸೌರಭ ಕಾನ್ವೆಂಟಿನ ಮೊಹಮದ್ ಮಾಜ್ ಆಯ್ಕೆಶಿಕ್ಷಣ ಸಾಮಗ್ರಿ ವಿತರಿಸುವ ಮೂಲಕ ಅರ್ಥಪೂರ್ಣವಾಗಿ ಸಂವಿಧಾನ ದಿನ ಆಚರಣೆಮುಖ್ಯಮಂತ್ರಿಗಳೇ ಖಜಾನೆ ಬರಿದಾಗಿದೆಯೇ? “ಆಶಾ” ಬಗ್ಗೆ ನಿರ್ಲಕ್ಷ್ಯವೇ? ಸ್ಪಷ್ಪಪಡಿಸಿ ಜೋಶಿ ಅವರು ಬಡವರ ಅಭಿವೃದ್ಧಿಯ ಹರಿಕಾರ: ನಾಗರಾಜ ಛಬ್ಬಿ