LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಶಹಪುರ ನಗರಸಭೆಯಲ್ಲಿ ಮಹಾತ್ಮರ ಜಯಂತಿ ಆಚರಣೆ

Advertisement

ಶಹಾಪುರ : ಮಹಾತ್ಮ ಗಾಂಧೀಜಿಯವರ 157ನೇ ಮತ್ತು ದೇಶದ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿಯನ್ನು ಆಚರಿಸಲಾಯಿತು ಈ ಸಂದರ್ಭದಲ್ಲಿ ಜಯಂತಿಯನ್ನು ಉದ್ದೇಶಿಸಿ ಮಾತನಾಡಿದ ಪೌರಾಯುಕ್ತರಾದ ಜೀವನ್ ಕಟ್ಟಿಮನಿ ಅವರು ಮಹಾತ್ಮ ಗಾಂಧೀಜಿ ಅವರು ಈ ದೇಶದ ಸ್ವತಂತ್ರಕ್ಕಾಗಿ ತಮ್ಮ ಜೀವನವನ್ನೇ ತ್ಯಾಗ ಮಾಡಿ ತತ್ವ ವಿಚಾರ ಮತ್ತು ಸತ್ಯ ಅಹಿಂಸೆ ಸರಳತೆಯ ಮಾರ್ಗ ಸದಾ ದಾರಿದೀಪವಾಗಲಿ ದೇಶ ಭಕ್ತಿಯ ಮೌಲೆಗಳನ್ನು ತಮ್ಮ ಬದುಕಿನ ಮೂಲಕ ಸಾರಿದ ರಾಷ್ಟ್ರ ಪಿತ ಮಹಾತ್ಮ ಗಾಂಧೀಜಿಯವರು ಅದೇ ರೀತಿ ದೇಶದ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಸರಳತೆ ಸತ್ಯನಿಷ್ಠೆ ಪ್ರಾಮಾಣಿಕತೆ ಮತ್ತು ದೇಶಭಕ್ತಿಯ ಪ್ರತಿಕವಾಗಿದ್ದರು ಮಾಜಿ ಪ್ರಧಾನಿ ಭಾರತ ರತ್ನ ಎಂದೇ ಹೆಸರುವಾಸಿಯಾಗಿದ್ದರು ಅವರು ಜೈ ಜವಾನ್ ಜೈ ಕಿಸಾನ್ ಎಂಬ ಘೋಷಣೆ ಮೂಲಕ ದೇಶದ ಸೈನಿಕರು ಮತ್ತು ರೈತರು ಮೋತ್ವವನ್ನು ಸಾರಿದರು ಅವರು ಆದರ್ಶಗಳು ಸದಾ ಸ್ಮರಣೀಯ ಈ ಇಬ್ಬರ ಮಹಾತ್ಮರ ಅಕ್ಟೋಬರ್ ಎರಡರಂದು ಇಡೀ ದೇಶಾದ್ಯಂತ ಜನ್ಮದಿನಾಚರಣೆಯನ್ನು ಆಚರಿಸುತ್ತೇವೆ.

ಇವರು ಕೊಟ್ಟಂತ ಕೊಡುಗೆ, ದೇಶಕ್ಕಾಗಿ ಅಪಾರವಾದದ್ದು ಇವತ್ತು ಅವರು ನೆನಪುಗಳು ಅವರು ನಡೆದು ಬಂದ ದಾರಿ ಸ್ಮರಣೆಯಾವಾಗಿದ್ದು ಮತ್ತು ಹರೀಶ್ ಸಜ್ಜನ್ ಪರಿಸರ ಇಂಜಿನಿಯರ್ ಅವರು ಮಾತನಾಡಿ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಮಹಾತ್ಮ ಗಾಂಧೀಜಿಯವರು ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಸಾಕಷ್ಟು ಹೋರಾಟಗಳನ್ನು ಉಪಾಸ ಸತ್ಯಾಗ್ರಳನ್ನು ಮಾಡಿದರು ದೇಶ ಸ್ವಚ್ಛತೆಯಂದಿರಬೇಕು ಸ್ವಚ್ಛತೆಯನ್ನು ಕಾಪಾಡಬೇಕು ದೇಶದ ಸ್ವಚ್ಛತೆಗೆ ಮೊದಲನೇ ಆದ್ಯತೆ ಕೊಟ್ಟಿದ್ದರು ಅದೇ ರೀತಿ ಮುಂದುವರಿದು ಮಾತನಾಡಿದ ಸಜ್ಜನವರು ಭಾರತ ಸ್ವತಂತ್ರ ಸಂಗ್ರಾಮದಲ್ಲಿ ಸತ್ಯ ಮತ್ತು ಅಹಿಂಸೆ  ಮಾರ್ಗದ ಮೂಲಕ ಅನೇಕ ಪ್ರಮುಖ ಚಳುವಳಿಗಳನ್ನು ನೇತೃತ್ವ ವಹಿಸಿ ಯಶಸ್ಸು ತಂದು ಕೊಟ್ಟರು 1917ರಲ್ಲಿ ಬಿಹಾರದ ಚಂಪರಣದಲ್ಲಿ ನೀಲಿ ಬೆಳೆಗಾರರ ವಿರುದ್ಧ ರೈತರಿಗೆ ನ್ಯಾಯ ಕೊಡಿಸಲು ಗಾಂಧೀಜಿ ನಡೆಸಿದ ಭಾರತದ ಮೊದಲ ಯಶಸ್ವಿ ಸತ್ಯಗ್ರಹವಾಗಿತ್ತು.

1918ರಲ್ಲಿ ಗುಜರಾತಿನ ಖೆಡಾದಲ್ಲಿ ಬೆಳೆ ಆನಿಯಾದಾಗ ರೈತರಿಗೆ ಕಂದಾಯ ನೀಡುವಂತೆ ಬ್ರಿಟಿಷರ ವಿರುದ್ಧ  ಹೋರಾಟ ಮಾಡಿದರು 1920 ಮತ್ತು 1922 ರಲ್ಲಿ ಜಿಲಿಯನ್ ವಾಲ್ಬಾಗ್ ಹತ್ಯಾಕಾಂಡ ಹಾಗೂ ರೌಟ್ ಕಾಯ್ದೆಯ ವಿರುದ್ಧವಾಗಿ ಬ್ರಿಟಿಷರ ಸರ್ಕಾರದೊಂದಿಗೆ ಸಂಪೂರ್ಣ ಅಸಹಕಾರ ತೋರುವ ದೊಡ್ಡ ಮಟ್ಟದ ಜನ ಚಳವಳಿ ನಡೆಸಿದರು ಸವಿನಯ ಕಾನೂನು ಭಂಗ ಚಳುವಳಿ ಉಪ್ಪಿನ ಸತ್ಯಾಗ್ರ 1920 -1934 ರಲ್ಲಿ ದಂಡಿ ಯಾತ್ರೆಯ ಮೂಲಕ ಉಪ್ಪಿನ ಯನ್ನು ಮುರಿದು ಬ್ರಿಟಿಷರ ಕಾನೂನುಗಳನ್ನು ಸೌಮ್ಯವಾಗಿ ಉಲ್ಲಂಘಿಸಿದ ಐತಿಹಾಸಿಕ ಚಳವಳಿಯಾಗಿತ್ತು ಕ್ವೆಟ್   ಇಂಡಿಯಾ ಚಳವಳಿ 1942 ಮಾಡು ಇಲ್ಲವೇ ಮಡಿ (do or die) ಎಂಬ ಘೋಷಣೆಯೊಂದಿಗೆ ಬ್ರಿಟಿಷರು ಭಾರತವನ್ನು ಬಿಟ್ಟು ತೊಲಗಬೇಕು ಎಂದು ಆಗ್ರಹಿಸಿ ಮುಂಬೈನಲ್ಲಿ ಆರಂಭದ ಅಂತಿಮ ರಾಷ್ಟ್ರೀಯ ಚಳುವಳಿಯಾಗಿತ್ತು ಎಂದು ಮಾತನಾಡಿದರು.

ಇದೇ ಸಂದರ್ಭದಲ್ಲಿ ಮಾನ್ಯ ಮುಖ್ಯಮಂತ್ರಿಗಳಿಂದ ಯಾದಗಿರಿ ಜಿಲ್ಲೆಯಿಂದ ಜಿಲ್ಲಾ ಆಡಳಿತ ಘೋಷಿಸಿದ ಪೌರಕಾರ್ಮಿಕ ಪ್ಯಾಟೆಪ್ಪ ತಂದೆ ಭೀಮರಾಯ ಇವರ ಸನ್ಮಾನಿಸಿ ಗೌರವಿಸಿದ್ದಕ್ಕಾಗಿ ಮಹಾತ್ಮರ ಜಯಂತಿಯ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಕಾರ್ಮಿಕ ಹಿತ ರಕ್ಷಣಾ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಮೌನೇಶ್ ಸುರಪುರ್ ಅವರು ಸನ್ಮಾನಿಸಿ ಪೌರಕಾರ್ಮಿಕರು ಈ ದೇಶದ ಸ್ವಚ್ಛತೆ ಕಾಪಾಡಲು ತಮ್ಮ ಜೀವನವನ್ನೇ ತ್ಯಾಗ ಮಾಡಿ ಯಾವುದನ್ನು ಲೆಕ್ಕಿಸದೆ ಎಂತದೇ ಕೆಲಸ ಇದ್ದರೂ ಕೂಡ ಅದನ್ನು ಪೂರ್ಣಗೊಳಿಸುವುದು ಸ್ವಚ್ಛತೆ ಕಾಪಡುವುದು ಅವರ ದಿನನಿತ್ಯದ ಕೆಲಸವಾಗಿರುತ್ತದೆ ಮಾನ್ಯ ಮುಖ್ಯಮಂತ್ರಿಗಳು ಮುಂದಿನ ದಿನಗಳಲ್ಲಿ ಕರ್ನಾಟಕ ಸರಕಾರ ಬೇರೆ ಬೀರೇ ಇಲಾಖೆಯ ಅಧಿಕಾರಿಗಳಿಗೆ ನೀಡತಕ್ಕಂಥ ಮುಖ್ಯಮಂತ್ರಿ ಪದಕಗಳನ್ನು ಈ ದೇಶದ ಈ ರಾಜ್ಯದ ಸ್ವಚ್ಛತೆಯನ್ನು ಕಾಪಾಡ್ತಕ್ಕಂತ ಪೌರಕಾರ್ಮಿಕರು ಕೂಡ ಮುಖ್ಯಮಂತ್ರಿ ಪದಕಗಳನ್ನು ನೀಡಿ ಗೌರವಿಸಬೇಕೆಂದು   ಮಾತನಾಡಿದರು ಈ ಸಂದರ್ಭದಲ್ಲಿ ವೆಂಕಟೇಶ ಆಲೂರು ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಹೋರಾಟ ಸಮಿತಿಯ ರಾಜ್ಯ ಉಪಾಧ್ಯಕ್ಷರು ನಗರ ಸಭೆಯ  ಸಿಬ್ಬಂದಿ ವರ್ಗ ಮತ್ತು ಪೌರಕಾರ್ಮಿಕರು ರಾಷ್ಟ್ರೀಯ ಮಹಾನ್ ನಾಯಕರ ಜಯಂತಿಯನ್ನು ಆಚರಿಸಿದರು.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST