ಚೆನ್ನೈ: ಸರ್ಕಾರಿ ಆಸ್ಪತ್ರೆಗಳಲ್ಲಿ ಹೆರಿಗೆಯಾಗುವ ನವಜಾತ ಶಿಶುಗಳಿಗೆ ಉಚಿತವಾಗಿ ಚಿನ್ನದ ಉಂಗುರ ನೀಡುವ ಬಹುನಿರೀಕ್ಷಿತ 'ತಾಯ್ ಮಾಮನ್ ತಂಗ ಮೋದಿರಂ' (ತಾಯಿಯ ಸಹೋದರನ ಚಿನ್ನದುಂಗುರ) ಜನಪ್ರಿಯ ಯೋಜನೆಗೆ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅಧಿಕೃತವಾಗಿ ಚಾಲನೆ ನೀಡಿದ್ದಾರೆ.
ಮಧುರೈನ ಸರ್ಕಾರಿ ರಾಜಾಜಿ ಆಸ್ಪತ್ರೆಯ ಹೆರಿಗೆ ವಾರ್ಡ್‌ಗೆ ಖುದ್ದು ಭೇಟಿ ನೀಡಿದ ಮುಖ್ಯಮಂತ್ರಿಗಳು, ಅಲ್ಲಿ ಜನಿಸಿದ ಮಗುವಿನ ಪುಟ್ಟ ಬೆರಳಿಗೆ 1 ಗ್ರಾಂ ತೂಕದ ಚಿನ್ನದ ಉಂಗುರ ತೊಡಿಸುವ ಮೂಲಕ ಈ ಯೋಜನೆಗೆ ಮುನ್ನುಡಿ ಬರೆದರು.
ಬಳಿಕ ಆಸ್ಪತ್ರೆಯಲ್ಲಿದ್ದ ಬಾಣಂತಿಯರು ಹಾಗೂ ಶಿಶುಗಳ ಯೋಗಕ್ಷೇಮ ವಿಚಾರಿಸಿ, ಪೋಷಕರಿಗೆ ಉಂಗುರಗಳನ್ನು ವಿತರಿಸಿ ಹರಸಿದರು.


