LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಕಟ್ಟಡ ನಿರ್ಮಾಣದ ಸಮಗ್ರ ಮಾಹಿತಿ ಒಂದೇ ಸೂರಿನಡಿ 

Advertisement

ಹುಬ್ಬಳ್ಳಿ : ಇಂಡಿಯನ್ ಕಾಂಕ್ರೀಟ್ ಇನ್‌ಸ್ಟಿಟ್ಯೂಟ್ (ಐಸಿಐ) ಹುಬ್ಬಳ್ಳಿ-ಧಾರವಾಡ ಸೆಂಟರ್ ಹಾಗೂ ಯುಎಸ್ ಸಂವಹನದ ಆಶ್ರಯದಲ್ಲಿ ಆಧುನಿಕ ಕಟ್ಟಡ ತಂತ್ರಜ್ಞಾನ ಮತ್ತು ಗೃಹಾಲಂಕಾರಕ್ಕೆ ಸಂಬoಧಿಸಿದ ‘ಬಿಲ್ಡ್ ಟೆಕ್-೨೦೨೬’ ವಸ್ತು ಪ್ರದರ್ಶನ ಅಕ್ಟೋಬರ್ ೨, ೩ ಮತ್ತು ೪ರಂದು ನಗರದ ಇಂದಿರಾ ಗ್ಲಾಸ್ ಹೌಸ್‌ನಲ್ಲಿ ನಡೆಯಲಿದೆ ಎಂದು ಐಸಿಐ ಅಧ್ಯಕ್ಷ ಸುರೇಶ ಎಂ. ಕಿರೇಸೂರ ತಿಳಿಸಿದರು.

ನಗರದಲ್ಲಿ ಮಾಹಿತಿ ನೀಡಿದ ಅವರು, ಕಳೆದ ೨೦ ವರ್ಷಗಳಿಂದ ‘ಬಿಲ್ಡ್ ಟೆಕ್’ ವಸ್ತು ಪ್ರದರ್ಶನವನ್ನು ಆಯೋಜಿಸಲಾಗುತ್ತಿದ್ದು, ಆಧುನಿಕ ಕಟ್ಟಡ ತಂತ್ರಜ್ಞಾನ, ತಾಂತ್ರಿಕ ಶಿಕ್ಷಣ, ನವೀನ ವಿನ್ಯಾಸದ ನಕ್ಷೆಗಳು ಹಾಗೂ ವಿವಿಧ ಕಟ್ಟಡ ಸಾಮಗ್ರಿಗಳನ್ನು ಸಾರ್ವಜನಿಕರಿಗೆ ಪರಿಚಯಿಸುವುದು ಪ್ರದರ್ಶನದ ಉದ್ದೇಶವಾಗಿದೆ ಎಂದರು.

ಅ.೨ರoದು ಮಧ್ಯಾಹ್ನ ೧೨ ಗಂಟೆಗೆ ಪ್ರದರ್ಶನವನ್ನು ಮೂರುಸಾವಿರಮಠದ ಜಗದ್ಗುರುಡಾ.ಗುರುಸಿದ್ಧರಾಜಯೋಗೀಂದ್ರ ಮಹಾಸ್ವಾಮೀಜಿ ಉದ್ಘಾಟಿಸುವರು. ಕರ್ನಾಟಕ ಸರ್ಕಾರದ ಪಿಡಬ್ಲೂö್ಯಡಿಯ ಮುಖ್ಯ ಇಂಜನಿಯರ್ ಶಂಕರಗೌಡ ಪಾಟೀಲ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದು, ವಿಶೇಷ ಅತಿಥಿಗಳಾಗಿ ನ್ಯೂಕ್ಲಿಯರ್ ಪವರ್ ಕಾರ್ಪೋರೇಶನ್‌ನ ಯೋಜನಾ ನಿರ್ದೇಶಕ ಸುರೇಶ ಕುಲಕರ್ಣಿ, ಐಸಿಐ ಆಡಳಿತ ಮಂಡಳಿ ಸದಸ್ಯ ಸಂಜಯ ಆಲಮೇಲಕರ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ಆರ್ಕಿಟೆಕ್ಟ್ಗಳು, ಸಿವಿಲ್ ಎಂಜಿನಿಯರ್‌ಗಳು, ತಂತ್ರಜ್ಞರು, ಗುತ್ತಿಗೆದಾರರು ಹಾಗೂ ಸಾರ್ವಜನಿಕರಿಗೆ ಕಡಿಮೆ ವೆಚ್ಚದಲ್ಲಿ ಮನೆ ಮತ್ತು ಕಟ್ಟಡ ನಿರ್ಮಾಣಕ್ಕೆ ಅಗತ್ಯವಾದ ಮಾಹಿತಿಯನ್ನು ಒಂದೇ ವೇದಿಕೆಯಲ್ಲಿ ಒದಗಿಸಲಾಗುವುದು. ಪ್ರದರ್ಶನಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿರಲಿದೆ ಎಂದು ತಿಳಿಸಿದರು.

ಪ್ರದರ್ಶನದಲ್ಲಿ ವಿವಿಧ ಬಗೆಯ ಕಟ್ಟಡ ಮತ್ತು ಗೃಹಾಲಂಕಾರ ಸಾಮಗ್ರಿಗಳು, ನೈಸರ್ಗಿಕ ಕಲ್ಲುಗಳು, ಟೈಲ್ಸ್, ಗ್ಲಾಸ್, ಇಟ್ಟಿಗೆ, ಗ್ರಾನೈಟ್, ಮಾರ್ಬಲ್, ಗೋಡೆ ಬಣ್ಣಗಳು, ಸ್ಟೀಲ್ ಬಾಗಿಲು-ಕಿಟಕಿಗಳು, ವಿವಿಧ ಬಗೆಯ ಪ್ಲೈವುಡ್‌ಗಳು, ವಿದ್ಯುತ್ ಉಪಕರಣಗಳು, ಸಿಮೆಂಟ್, ಫರ್ನಿಚರ್, ಮಾಡ್ಯುಲರ್ ಕಿಚನ್, ಅಲ್ಯೂಮಿನಿಯಂ ಉತ್ಪನ್ನಗಳು, ವಾಲ್‌ಪೇಪರ್, ಸಿಮೆಂಟ್ ಬ್ಲಾಕ್ಸ್, ಗ್ಲಾಸ್ ಉತ್ಪನ್ನಗಳು, ಮಳೆನೀರು ಸಂರಕ್ಷಣಾ ವ್ಯವಸ್ಥೆ, ಸೆಕ್ಯುರಿಟಿ ಸೇಫ್ಟಿ ಲಾಕ್ಸ್, ಸೌರ ಉಪಕರಣಗಳು ಹಾಗೂ ವಿವಿಧ ಬಾತ್‌ರೂಂ ಫಿಟ್ಟಿಂಗ್ಸ್ ಮತ್ತು ನಲ್ಲಿಗಳನ್ನು ಪ್ರದರ್ಶಿಸ ಲಾಗುವುದು. ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಕಟ್ಟಡ ನಿರ್ಮಿಸಲು ಅಗತ್ಯವಿರುವ ಸಾಮಗ್ರಿಗಳು ಮತ್ತು ತಂತ್ರಜ್ಞಾನಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲಾಗುವುದು ಎಂದು ವಿವರಿಸಿದರು.

ಮನೆ ಹಾಗೂ ಕಟ್ಟಡ ನಿರ್ಮಾಣಕ್ಕಾಗಿ ಸಾಲ ಪಡೆಯಲು ಅನುಕೂಲವಾಗುವಂತೆ ವಿವಿಧ ಬ್ಯಾಂಕ್‌ಗಳ ಪ್ರತಿನಿಧಿಗಳು ಪ್ರದರ್ಶನದಲ್ಲಿ ಭಾಗವಹಿಸಿ ಸಾಲ ಸೌಲಭ್ಯಗಳ ಕುರಿತು ಮಾಹಿತಿ ನೀಡಲಿದ್ದಾರೆ. ಹುಬ್ಬಳ್ಳಿ-ಧಾರವಾಡ, ಗದಗ, ಹಾವೇರಿ, ದಾವಣಗೆರೆ, ಬೆಳಗಾವಿ ಸೇರಿದಂತೆ ವಿವಿಧ ಜಿಲ್ಲೆಗಳ ಕಟ್ಟಡ ಸಾಮಗ್ರಿ ತಯಾರಕರು ಭಾಗವಹಿಸಲಿದ್ದಾರೆ. ಅಲ್ಲದೆ ಕರ್ನಾಟಕದ ಆರ್ಕಿಟೆಕ್ಟ್ಗಳು, ಅನುಭವಿ ಎಂಜಿನಿಯರ್‌ಗಳು, ತಂತ್ರಜ್ಞರು, ಶಿಲ್ಪಿಗಳು ಹಾಗೂ ಗುತ್ತಿಗೆದಾರರು ಪ್ರದರ್ಶನದಲ್ಲಿ ಭಗವಹಿಸುವರು ಎಂದರು. 

ಪತ್ರಿಕಾಗೋಷ್ಠಿಯಲ್ಲಿ ಐಸಿಐ ಕಾರ್ಯದರ್ಶಿ ಡಾ.ಆನಂದ ಹುಣಶ್ಯಾಳ, ಆಡಳಿತ ಮಂಡಳಿಯ ಎಂ.ಆರ್. ಪಾಟೀಲ, ಸುರೇಶ ಪಾಟೀಲ, ಸಂತೋಷ ಅಂಚಟಗೇರಿ, ಎ.ಸಿ. ತಹಶೀಲ್ದಾರ, ವಿಜಯ ತೋಟಗೇರ, ಯುಎಸ್ ಸಂವಹನದ ಉಮಾಪತಿ ಉಪಸ್ಥಿತರಿದ್ದರು.

ವರದಿ : ಸುಧೀರ್ ಕುಲಕರ್ಣಿ 

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಹುಟ್ಟುಹಬ್ಬದ ಸಂಭ್ರಮದಲ್ಲೂ ಮಾನವೀಯತೆಯ ಸೇವೆಗೆ ಮುನ್ನುಡಿ ಬರೆದ ಜೀನೂರಿನ ಭಾಗ್ಯಶ್ರೀರಷ್ಯಾದಲ್ಲಿ ಯುದ್ಧ ವಿಮಾನ ಪತನ : ಆರು ಮಂದಿ ದಾರುಣ ಸಾವುಶಾಲಾ ವಾಹನ ಹರಿದು ಒಂದೂವರೆ ವರ್ಷದ ಮಗು ದಾರುಣ ಸಾವು ಕೊಕಟನೂರಿನ ಹೆಮ್ಮೆಗೆ ಮತ್ತೊಂದು ಗರಿವಾಲ್ಮೀಕಿ ನಿಗಮ ತಾಲೂಕ ಅಧಿಕಾರಿ ಗಜೇಂದ್ರ ಸಾರ್ವಜನಿಕರ ಜೊತೆ ದುರವರ್ತನೆ             ವಾಲ್ಮೀಕಿ ನಿಗಮ ತಾಲೂಕ ಅಧಿಕಾರಿ ಗಜೇಂದ್ರ ಸಾರ್ವಜನಿಕರ ಜೊತೆ ದುರವರ್ತನೆ             ಗೃಹಲಕ್ಷ್ಮಿ ಹಣ ಸಾಲಕ್ಕೆ ಕಡಿತಗೊಳಿಸಿದರೆ ಹುಷಾರ್: ಡಿ.ಕೆ ಶಿವಕುಮಾರ್ ಖಡಕ್ ಆದೇಶ444 ಕೋಟಿ ಟೆಂಡರ್ ಗೋಲ್‌ಮಾಲ್ ಆರೋಪ : ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು 3 ಲಕ್ಷ ಕೋಟಿಗಿಂತ ಹೆಚ್ಚು ಅವ್ಯವಹಾರ, ಅಶೋಕ್ ಖೇಣಿಗೆ ಒದ್ದು ಒಳಗೆ ಹಾಕಿ:ಕುಮಾರಸ್ವಾಮಿ ಬೈಲಹೊಂಗಲ : ವಿಚ್ಛೇದನ ಕೇಳಿದ್ದ ಪತ್ನಿಯನ್ನ ಬರ್ಬರವಾಗಿ ಹತ್ಯೆಗೈದ ಪಾಪಿ ಪತಿ