LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಇಡಿ ದುರ್ಬಳಕೆ ಮೂಲಕ ದಲಿತ ನಾಯಕರನ್ನು ಹತ್ತಿಕ್ಕುವ ಸಂಚು : ನಾಯ್ಡು ನಾಯಕ

Advertisement

ಮಾನ್ವಿ: ಕೇಂದ್ರ ಸರ್ಕಾರವು ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಸಚಿವ ಸತೀಶ್ ಜಾರಕಿಹೊಳಿಯವರ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ಮೂಲಕ ದಾಳಿ ನಡೆಸಿ ಅವರನ್ನು ರಾಜಕೀಯವಾಗಿ ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ ಎಂದು ನಾಯ್ಡು  ನಾಯಕ ಆರೋಪಿಸಿದರು.
ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ತಾಲೂಕ ಪ್ರಗತಿಪರ ವಿವಿದ ಸಂಘಟನೆಗಳ ಒಕ್ಕೂಟ ಮಾನ್ವಿ ವತಿಯಿಂದ 
ಸತೀಶ್ ಜಾರಕಿಹೊಳಿಯವರ ಅವರ ಮೇಲಿನ ರಾಜಕೀಯ ಪ್ರೇರಿತ ಇಡಿ ದಾಳಿಯನ್ನು ಖಂಡಿಸಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.ನಂತರ ಮಾತನಾಡಿ ಸತೀಶ್ ಜಾರಕಿಹೊಳಿಯವರು ಬುದ್ಧ, ಬಸವಣ್ಣ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ತತ್ವ-ಸಿದ್ಧಾಂತಗಳನ್ನು ಅನುಸರಿಸಿಕೊಂಡು ಸಾಮಾಜಿಕ ನ್ಯಾಯಕ್ಕಾಗಿ ನಿರಂತರವಾಗಿ ಹೋರಾಡುತ್ತಿರುವ ನಾಯಕರಾಗಿರುವ ಸತೀಶ್ ಜಾರಕಿಹೊಳಿಯವರ ಬೆಳವಣಿಗೆಯನ್ನು ಸಹಿಸಲಾಗದೆ ಪಕ್ಕದಲ್ಲಿ ಇರುವವರು ಇಂತಹ ಪಿತೂರಿ ನಡೆಸುತ್ತಿದ್ದಾರೆ ಎಂದು ದೂರಿದರು.
ಸಾಮಾನ್ಯ ಕ್ಷೇತ್ರದಿಂದ ಗೆದ್ದು ಜನಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿರುವ ದಲಿತ ಸಮುದಾಯದ ಪ್ರಮುಖ ನಾಯಕರಲ್ಲಿ ಸತೀಶ್ ಜಾರಕಿಹೊಳಿಯವರು ಒಬ್ಬರಾಗಿದ್ದು, ಅವರಂತಹ ನಾಯಕರನ್ನು ಗುರಿಯಾಗಿಸಿಕೊಂಡು ಹತ್ತಿಕ್ಕುವ ಪ್ರಯತ್ನ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಹೇಳಿದರು.
ಇಂತಹ ಕ್ರಮಗಳನ್ನು ದಲಿತ ಸಮುದಾಯ ಖಂಡಿಸುತ್ತಿದ್ದು, ಮುಂದಿನ ದಿನಗಳಲ್ಲಿ ಪ್ರಜಾಪ್ರಭುತ್ವದ ಮಾರ್ಗದಲ್ಲಿ ತಕ್ಕ ಉತ್ತರ ನೀಡಲಿದೆ ಎಂದು ತಿಪ್ಪಣ್ಣ ಬಾಗಲವಾಡ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ .
ಪ್ರತಿಭಟನೆಯಲ್ಲಿ ರಾಮಣ್ಣ ನಾಯಕ ಬಾಲಸ್ವಾಮಿ ಕೊಡ್ಲಿ,ಬಿ ಕೆ ಅಮರೇಶಪ್ಪ ವಕೀಲರು ಬುಡ್ಡಪ್ಪ ನಾಯಕ,ಜಿಶಾನ ಅಖಿಲ್ ಸಿದ್ದಿಕಿ, ಹನುಮೇಶ ನಾಯಕಅಯ್ಯಪ ನಾಯಕ ಮ್ಯಾಕಲ್ ಖಾಲಿದ್ ಖಾದ್ರಿ ಸಿದ್ದಲಿಂಗಪ್ಪ ವಕೀಲರು,ಸೇರಿದಂತೆ ಇನ್ನಿತರರು ಮಾತನಾಡಿ ಸತೀಶ್‌ ಜಾರಕಿಹೊಳಿ ಅವರು ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿಯಾಗಿದ್ದು, ಇಂತಹ ಬೆದರಿಕೆಗಳಿಗೆ ಅಥವಾ ಇ.ಡಿ ದಾಳಿಗಳಿಗೆ ಹೆದರುವ ಪ್ರಶ್ನೆಯೇ ಇಲ್ಲ. ಕಾನೂನಾತ್ಮಕ ಹೋರಾಟದ ಮೂಲಕ ಸತ್ಯವು ಶೀಘ್ರದಲ್ಲೇ ಹೊರಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕಾಂಗ್ರೆಸ್ ನಾಯಕರ ವಿರುದ್ಧ ಇಂತಹ ರಾಜಕೀಯ ಪಿತೂರಿಗಳು ಮತ್ತು ಸೇಡಿನ ರಾಜಕಾರಣ ಮುಂದುವರಿದರೆ, ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಈ ಪ್ರತಿಭಟನೆಯಲ್ಲಿ ಗುರುನಾಥ ನಾಯಕ, ಶಿವರಾಜ ನಾಯಕ ಸಾಹುಕಾರ್,ಸಿದ್ರಾಮಪ್ಪ ನೀರಮಾನ್ವಿ,  ನರಸಿಂಹ ನಾಯಕ ಕರಡಿಗುಡ್ಡ, ಹನುಮಂತಪ್ಪ ವಕೀಲರು ದೇವಿಪುರ ಅಂಬಣ್ಣ ನಾಯಕ ಗುಜ್ಜಲ್, ರಾಮಣ್ಣ ನಾಯಕ, ಅರುಣ್ ಕುಮಾರ್ ಬಲ್ಲಟಗಿ , ಜೆಲ್ಲಿ ಆಂಜನೇಯ ನಾಯಕ, ,ನೀರಮಾನ್ವಿ ,ಅಯ್ಯಪ್ಪ ಮ್ಯಾಕಲ್ ಜಯಕುಮಾರ,ಕರಡಿಗುಡ್ಡ ವೆಂಕಟೇಶ್ ನಾಯಕ ಮಾನ್ವಿ,ಕೊಂಡಯ್ಯ ನಾಯಕ, ಅಮರೇಶ ನಾಯಕ ಜಾನೇಕಲ್, ಮಹಾಂತೇಶ್ ನಾಯಕ ತಡಕಲ್,ಗಂಗಯ್ಯ ನಾಯಕ, ನರಸಯ್ಯ ನಾಯಕ ಮ್ಯಾಕಲ್, ವಿನೋದ್ ನಾಯಕ, ಅಮರೇಶ ನಂದಿಹಾಳ ಮುದಿರೆಡ್ಡಿ ನಾಯಕ ಬಸವನಗೌಡ ಉಟಕನೂರ, , ಅಂಬಣ್ಣ ನಾಯಕ ಉಮಳಿ ಹೊಸೂರು ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಹಾಗೂ ನೂರಾರು ಅಭಿಮಾನಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು.
ವರದಿ : ಆಂಜನೇಯ ನಸಲಾಪುರ

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರೈತರಿಗೆ ಕೇಂದ್ರದ ಗಿಫ್ಟ್: 6 ಬೆಳೆಗಳಿಗೆ ಬೆಂಬಲ ಬೆಲೆ ಹೆಚ್ಚಳಕ್ಕೆ ಕೇಂದ್ರ ಸಂಪುಟ ಅಸ್ತು ಭಾರತಕ್ಕೆ 406 ರನ್ ಗಳ ದೊಡ್ಡ ಮೊತ್ತದ ಗೆಲುವಿನ ಗುರಿ ಇಡಿ ದುರ್ಬಳಕೆ ಮೂಲಕ ದಲಿತ ನಾಯಕರನ್ನು ಹತ್ತಿಕ್ಕುವ ಸಂಚು : ನಾಯ್ಡು ನಾಯಕಭಾಗ್ಯ ಶ್ರೀ ಹುಟ್ಟುಹಬ್ಬದ ಅಂಗವಾಗಿ ರಕ್ತದಾನ ಮಾಡಿ ಸಮಾಜ ಸೇವೆಗೆ ಯುವಕರ ಬೆಂಬಲಸ್ವಂತ ಮೊಮ್ಮಗಳ ಮೇಲೆಯೇ ಅತ್ಯಾ*ಚಾರಕ್ಕೆ ಯತ್ನಿಸಿದ ಅಜ್ಜ! ಅಂಗನವಾಡಿ ಕೇಂದ್ರಕ್ಕೆ ಸ್ವಂತ ಕಟ್ಟಡ ಕಲ್ಪಿಸಲು ಮನವಿಬಿಜೆಪಿ ಅವಧಿಯ ಅನಾಹುತದಿಂದಲೇ ನಮಗೆ ಆರ್ಥಿಕ ಇಲಾಖೆ ಪತ್ರ ಬರೆದಿದೆ : ಡಿ.ಕೆ.ಶಿವಕುಮಾರ್ನೂತನ ಡಿವೈಎಸ್ಪಿ ಅಧಿಕಾರ ಸ್ವೀಕಾರ  ಸನ್ಮಾನಶೀಘ್ರದಲ್ಲೇ ಸಾರಿಗೆ ಬಸ್ ಟಿಕೆಟ್ ದರ ಹೆಚ್ಚಳಕ್ಕೆ ನಿರ್ಧಾರ: ಬೈರತಿ ಸುರೇಶ್ದ. ಅಪ್ರಿಕಾ- ಆಸ್ಟ್ರೇಲಿಯಾ ಪಂದ್ಯಕ್ಕೆ ಮಳೆ ಅಡ್ಡಿ