Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಖಾನಾಪುರದಲ್ಲಿ ಕಂಟ್ರಿ ಪಿಸ್ತೂಲ್ ತಯಾರಿಕೆ : 13 ಆರೋಪಿಗಳು ಅರೆಸ್ಟ್ 

Advertisement

ಬೆಳಗಾವಿ: ಕಂಟ್ರಿ ಪಿಸ್ತೂಲ್ ತಯಾರಿಸಿ ಮಾರಾಟ ಮಾಡುತ್ತಿದ್ದ ಬೃಹತ್ ಜಾಲವನ್ನು ಬೆಳಗಾವಿ ಜಿಲ್ಲೆಯ ಖಾನಾಪುರ ಠಾಣೆ ಪೊಲಿಸರು ಬೇಧಿಸಿದ್ದಾರೆ. 13 ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳಾದ ಮಾರುತಿ ಸುತಾರ, ಸೋಮನಾಥ ಚೌಗಲೆ, ಸಂತೋಷ ನಾಯಕ, ಮಾರುತಿ ಗುಡದ್ಯಾಗೋಳ, ಬಾಳು ನಾಯಕ, ಲಕ್ಷ್ಮಣ ಗುಜನಾಳ, ಬಸವರಾಜ ಸಾಲೋಟಗಿ, ಬಸವಂತ ಯರಮಾಳಕರ, ಲಕ್ಷ್ಮಣ ಗುರವ, ಮರಿಯಪ್ಪ ನಾಯಕ, ವಿಶ್ವನಾಥ ದೇಸಾಯಿ ಬಂಧಿತರು.

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನಲ್ಲಿ ನಡೆದಿದ್ದ ಕೊಲೆ ಪ್ರಕರಣದ ತನಿಖೆ ವೇಳೆ ಪೊಲೀಸರಿಗೆ ಕಂಟ್ರಿ ಪಿಸ್ತೂಲ್‌ನಿಂದ ಕೊಲೆ ಮಾಡಿರುವುದು ಗೊತ್ತಾಗಿತ್ತು.

ಬಳಿಕ ಕಂಟ್ರಿ ಪಿಸ್ತೂಲ್ ಮೂಲ ಬೆನ್ನು ಹತ್ತಿದ ಪೊಲೀಸರಿಗೆ ಖಾನಾಪುರದ ಕಾಟಗಾಳಿ ಗ್ರಾಮದಲ್ಲಿ ಆರೋಪಿಗಳು 2024ರಿಂದ ಅಕ್ರಮವಾಗಿ ಕಂಟ್ರಿ ಪಿಸ್ತೂಲ್ ತಯಾರಿಸುತ್ತಿರುವ ಅಂಶ ಬೆಳಕಿಗೆ ಬಂದಿತ್ತು.

ಆರೋಪಿ ಮಾರುತಿ ಸಿಂಗಲ್ ಲೋಡೆಡ್, ಡಬಲ್ ಲೋಡೆಡ್ ಕಂಟ್ರಿ ಪಿಸ್ತೂಲ್ ತಯಾರಿಸುತ್ತಿದ್ದು, ಇವುಗಳ ತಯಾರಿಕೆಗೆ ಆರೋಪಿ ಮರಿಯಪ್ಪ ನಾಯಕ ಹಣ ಕೊಡುತ್ತಿದ್ದ. ಇನ್ನೋರ್ವ ಆರೋಪಿ ವಿಶ್ವನಾಥ ದೇಸಾಯಿ ಬಂದೂಕಿನ ಬಿಡಿಭಾಗಗಳನ್ನ ಪೂರೈಸುತ್ತಿದ್ದ. ಜೊತೆಗೆ ಬುಕ್ ಸ್ಟಾಲ್‌ನಲ್ಲಿ ಬಂದೂಕಿನ ಬಿಡಿಭಾಗಗಳು ಮತ್ತು ಮದ್ದುಗುಂಡುಗಳನ್ನು ಮಾರಾಟ ಮಾಡಿದ್ದ.

ಈತನಿಂದ ಬಂದೂಕಿನ 21 ಟ್ರೀಗರಗಳು, 5 ಹೆಡ್‌ಗಳು, 15 ನಿಪ್ಪಲಗಳು, 1 ಸಿಲಿಂಗ್ ಬೆಲ್ಟ್, 34 ಮದ್ದು ತುಂಬಿದ ಪ್ಯಾಕೇಟ್, 499 ಸೀಸಿನ ಗೋಲಿಗಳು, 420 ಕೇಪಗಳು, 48 ಜೀವಂತ ಕಾಡತೂಸುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಸದ್ಯ ಪೊಲೀಸರು 13 ಆರೋಪಿಗಳನ್ನು ಬಂಧಿಸಿದ್ದು, ಬೆಳಗಾವಿ, ಉತ್ತರ ಕನ್ನಡ ಜಿಲ್ಲೆಯ ವ್ಯಕ್ತಿಗಳಿಗೆ ಮಾರಾಟ ಮಾಡಿದ್ದ 8 ಕಂಟ್ರಿ ಪಿಸ್ತೂಲ್ ಸೇರಿ ಒಟ್ಟು 9 ಕಂಟ್ರಿ ಪಿಸ್ತೂಲ್ ಜಪ್ತಿ ಮಾಡಿದ್ದಾರೆ.

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಖಾನಾಪುರದಲ್ಲಿ ಕಂಟ್ರಿ ಪಿಸ್ತೂಲ್ ತಯಾರಿಕೆ : 13 ಆರೋಪಿಗಳು ಅರೆಸ್ಟ್ BIG NEWS : ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ಅಣ್ಣಾಮಲೈ ರಾಜೀನಾಮೆ ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಮಿಡ್ ಟೌನ್ ಹಾಗೂ ಮಹಾರಾಷ್ಟ್ರ ಮಂಡಲ ವತಿಯಿಂದ ಟೇಬಲ್ ಟೆನಿಸ್ಬೂದಿಹಾಳ ಸರಕಾರಿ ಪ್ರೌಢಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಹಳೆಯ ವಿದ್ಯಾರ್ಥಿಗಳ  ಗುರುವಂದನಾ ಸಮಾರಂಭ ಕೈಕಾಲು ಕತ್ತರಿಸುವ ಶಿಕ್ಷೆ ಇದ್ದರಷ್ಟೇ ಜನರು ಕಾನೂನು ಪಾಲಿಸುತ್ತಾರೆನೋ : ಹೈಕೋರ್ಟ್ ನ್ಯಾಯಮೂರ್ತಿ ನಟಿ ರುಕ್ಮಿಣಿ ವಸಂತ್‌ ವಿರುದ್ಧ ನಕಲಿ ವಿಡಿಯೋ : 29 ಸಮಾಜಿಕ ಜಾಲತಾಣದ ಖಾತೆಗಳ ವಿರುದ್ಧ ಎಫ್‌ಐಆರ್ಭೀಕರ ರಸ್ತೆ ಅಪಘಾತ : ಎರಡು ಕಾರುಗಳ ಮಧ್ಯೆ ಮುಖಾಮುಖಿ ಡಿಕ್ಕಿಸಂತೋಷ್ ಲಾಡ್ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು : ದಾದಾ ಮಹಾರಾಜ್ ನಗರಕರ್ಆದರ್ಶ ಶಿಕ್ಷಣ ಸಂಸ್ಥೆಯಲ್ಲಿ ರಾವಸಾಬ ಐಹೊಳೆ ದಂಪತಿ ಜನ್ಮದಿನಾಚರಣೆ