ತುರುವೇಕೆರೆ: ತಾಲ್ಲೂಕಿನ ಕಸಬಾ ಹೋಬಳಿ ಮುನಿಯೂರು ಬಳಿಯ ಅತ್ತಿಕುಳ್ಳೆಪಾಳ್ಯ ಗ್ರಾಮದಲ್ಲಿನ ವಿಶೇಷಚೇತನ ಮಧು (14 ವರ್ಷ) ಅವರಿಗೆ ಶ್ರೀ ಕ್ಷೇತ್ರ ಧರ್ಮದ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಜನಮಂಗಲ ಕಾರ್ಯಕ್ರಮದಡಿ ಕಮೋಡ್ ವ್ಹೀಲ್ ಛೇರನ್ನು ವಿತರಿಸಲಾಯಿತು.
ಅತ್ತಿಕುಳ್ಳೆಪಾಳ್ಯದ ಚಂದ್ರಶೇಖರ್, ರೇಣುಕಮ್ಮ ಪುತ್ರನಾ ಮಧು ಹುಟ್ಟಿನಿಂದಲೇ ವಿಶೇಷಚೇತನರಾಗಿದ್ದು, ಅವರಿಗೆ ಯಾರ ಸಹಕಾರ ಇಲ್ಲದೆ ಸಂಚರಿಸಲು ಅನುಕೂಲವಾಗುವಂತೆ ಕಮೋಡ್ ವ್ಹೀಲ್ ಛೇರನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಯೋಜನಾಧಿಕಾರಿ ಕುಸುಮಾಧರ್, ಮೇಲ್ವಿಚಾರಕಿ ಜಯಲಕ್ಷ್ಮಿ, ಸೇವಾ ಪ್ರತಿನಿಧಿ ದ್ರಾಕ್ಷಾಯಿಣಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್


