LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
National News

ಆ ಒಂದು ದೃಶ್ಯ ಬೇಕಿತ್ತಾ..?! : ಟಾಕ್ಸಿಕ್ ವಿರುದ್ಧ ಫ್ಯಾಮಿಲಿ ಆಡಿಯನ್ಸ್ ಅಸಮಾಧಾನ

Advertisement
ಕೆಜಿಎಫ್ ಚಿತ್ರ ಸರಣಿಯ ಮೂಲಕ ವಿಶ್ವವ್ಯಾಪಿ ಹೆಸರು ಮಾಡಿದ ಕನ್ನಡದ ನಟ ರಾಕಿಂಗ್ ಸ್ಟಾರ್ ಯಶ್‌ಗೆ ಇಂದು ( ಜನವರಿ ೮ ) ಹುಟ್ಟುಹಬ್ಬದ ಸಂಭ್ರಮ. ಈ ಸಲುವಾಗಿ ಇಂದು ಯಶ್ ನಟನೆಯ ಮುಂದಿನ ಚಿತ್ರ ಟಾಕ್ಸಿಕ್ ಚಿತ್ರತಂಡ ವಿಶೇಷ ಟೀಸರ್ ಒಂದನ್ನು ಬಿಡುಗಡೆ ಮಾಡಿದೆ.

ಚಿತ್ರದಲ್ಲಿ ನಟಿಸುತ್ತಿರುವ ಎಲ್ಲ ನಟಿಯರ ಪಾತ್ರ ಪರಿಚಯವನ್ನು ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಘೋಷಿಸಿದ್ದ ಟಾಕ್ಸಿಕ್ ಚಿತ್ರತಂಡ ಯಶ್ ಪಾತ್ರವನ್ನು ಹುಟ್ಟುಹಬ್ಬದ ದಿನದಂದು ಬಿಡುಗಡೆಯಾದ ಈ ಟೀಸರ್ ಮೂಲಕ ಹೊರಹಾಕಿದೆ.

ಚಿತ್ರದಲ್ಲಿ ಯಶ್ ರಾಯ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಇಲ್ಲೂ ಸಹ ಯಶ್ ರಗಡ್ ಆಗಿದ್ದಾರೆ. ಕ್ವಾಲಿಟಿ, ಮೇಕಿಂಗ್ ವಿಷಯದಲ್ಲಿ ಕೆಮ್ಮಲೂ ಸಹ ಆಗದ ಮಟ್ಟಕ್ಕೆ ಟೀಸರ್ ಮೂಡಿಬಂದಿದ್ದು, ಈ ವಿಷಯವಾಗಿ ಟೀಸರ್‌ಗೆ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ.

ಆದರೆ ಟೀಸರ್‌ನ ಆ ತುಣುಕು ಮಾತ್ರ ಟೀಕೆಗೆ ಗುರಿಯಾಗಿದೆ. ಹೌದು, ಯಶ್ ಟೀಸರ್‌ನಲ್ಲಿ ಎಂಟ್ರಿ ಕೊಡುವುದಕ್ಕೂ ಮುನ್ನ ಯುವತಿ ಜತೆ ಕಾರಿನಲ್ಲಿ ಇರುವ ದೃಶ್ಯದ ಕುರಿತು ನೆಗೆಟಿವ್ ಕಾಮೆಂಟ್‌ಗಳು ಜೋರಾಗಿ ಕೇಳಿಬರುತ್ತಿವೆ. ಚಿತ್ರದಲ್ಲಿ ಯಶ್ ಪ್ಲೇ ಬಾಯ್ ಆಗಿ ಕಾಣಿಸಿಕೊಂಡಿದ್ದು, ಇದನ್ನು ಪ್ರೇಕ್ಷಕರಿಗೆ ತಿಳಿಸಲು ಯತ್ನಿಸಿರುವ ದೃಶ್ಯ ಫ್ಯಾಮಿಲಿ ಆಡಿಯನ್ಸ್ ವಿರೋಧಕ್ಕೆ ಕಾರಣವಾಗಿದೆ.

ಚಿತ್ರದ ಟೀಸರ್ ನೋಡಿದ ಬಹುತೇಕರು ಅದ್ಬುತ ಟೀಸರ್‌ನಲ್ಲಿ ಆ ಒಂದು ಸೀನ್ ಬೇಕಿತ್ತಾ ಎಂದು ಪ್ರಶ್ನಿಸತೊಡಗಿದ್ದಾರೆ. ಇನ್ನು ನೆಟ್ಟಿಗರು ಆ ದೃಶ್ಯಕ್ಕೆ ಯಶ್ ಹಿಂದಿನ ಚಿತ್ರಗಳ ದೃಶ್ಯಗಳನ್ನು ಹೋಲಿಸಿ ಕಾಮೆಂಟ್ ಮಾಡಿದ್ದಾರೆ.
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂಗ್ಲೆಂಡ್ - ಶ್ರೀಲಂಕಾ 3 ನೇ ಟಿ-20 ಇಂದು 1 ಕೋಟಿ 10 ಲಕ್ಷ ಅನುದಾನ ವಿವಿಧ ಅಭಿವೃದ್ಧಿ ಕಾಮಗಾರಿಗೆ  ಭೂಮಿ ಪೂಜೆ ಜೆ ಟಿ ಪಾಟೀಲಜಿಂಬಾಬೆ ವಿರುದ್ಧ ಏಕದಿನ ಸರಣಿ ಗೆದ್ದ ಆಸ್ಟ್ರೇಲಿಯಾ ಅಮಿತ್ ಶಾ ಆರೋಗ್ಯದಲ್ಲಿ ಏರುಪೇರು : ಹುಬ್ಬಳ್ಳಿಯ ಹೋಟೆಲ್‌ನಲ್ಲಿಯೇ ಚಿಕಿತ್ಸೆ, ಕಾರ್ಯಕ್ರಮ ಗೈರುಮಹಿಳೆ ಕೊಂದು ಶವದ ಮೇಲೆ ಮಗು ಮಲಗಿಸಿದ ಪಾಪಿಗಳುನಿಪ್ಪಾಣಿ ನಗರದಲ್ಲಿ ಸಣ್ಣಪುಟ್ಟ ವಿವಾದಕ್ಕೆ ಯುವಕನ ಬರ್ಬರ ವಾಗಿ ಮರ್ಡರ್ಅವರಾದಿ ಗ್ರಾಮ ಪಂಚಾಯ್ತಿಗೆ ನುಗ್ಗಿ ತಂದೆ, ಮಗಳ ಕೊಲೆ ಕೇಸ್ : ಮೂವರು ಹಂತಕರು ಅರೆಸ್ಟ್ನಿರಂತರ ವಿದ್ಯುತ ಸರಬರಾಜುಗೆ ಆಗ್ರಹಿಸಿ ಹೆಸ್ಕಾಂ ಚಿಕ್ಕೊಡಿ ಕಚೇರಿಗೆ ಮುತ್ತಿಗೆ ಹಾಕಲು ಕರವೇ ಹಾಗೂ ರೈತರ ನಿರ್ಧಾರಕಾಲೇಜು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸಕ್ಕೆ ಹೊಸ ರೂಲ್ಸ್ : ಸೆಲ್ಫಿ, ರೀಲ್ಸ್‌ಗೆ ಬ್ರೇಕ್ಗಣೇಶ ವಿಸರ್ಜನೆ ವೇಳೆ ಟ್ರ್ಯಾಕ್ಟರ್ ಹರಿದು ಇಬ್ಬರು ಬಾಲಕರು ಸಾವು