ಐಪಿಎಲ್ ೨೦೨೬ ರ ೧೯ ನೇ ಏಡಿಷನ್ ಪಂದ್ಯಾವಳಿಯಲ್ಲಿ ಇನ್ನು ಏಳು ಪಂದ್ಯಗಳು ಮುಗಿದರೆ ೨೦೨೬ ರ ಪಂದ್ಯಾವಳಿ ಇತಿಹಾಸ ಪುಟ ಸೇರುತ್ತದೆ.
ಈ ಹಂತದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಗುಜರಾತ್ ಟೈಟನ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಈಗಾಗಲೇ ಪ್ಲೇ ಆಪ್ ಹಂತ ತಲುಪಿವೆಯಲ್ಲದೇ ಮೊದಲ ಮೂರು ಕ್ವಾಲಿಫಾಯರ್ ಸ್ಥಾನಗಳನ್ನು ಕೂಡ ಖಚಿತ ಪಡಿಸಿಕೊಂಡಿವೆ.
ಈಗ ಕುತೂಹಲ ಉಳಿದಿರುವುದು ನಾಲ್ಕನೇ ಸ್ಥಾನದ ಪ್ಲೇ ಆಪ್ ತಂಡ ಯಾವುದು ಎನ್ನುವುದು ಮಾತ್ರ. ನಾಲ್ಕನೇ ಸ್ಥಾನಕ್ಕೆ ಈಗಲೂ ರಾಜಸ್ತಾನ್ ರಾಯಲ್ಸ್, ಪಂಜಾಬ್ ಕಿಂಗ್ಸ್, ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ದೆಹಲಿ ಕ್ಯಾಪಟಲ್ಸ್ ನಡುವೆ ಪೈಪೋಟಿ ಏರ್ಪಟ್ಟಿದೆ. ಇದರಲ್ಲಿ ಹೆಚ್ಚು ಅವಕಾಶ ಇರುವುದು ಹಾಗೂ ನೇರ ಅವಕಾಶ ಇರುವುದು ರಾಜಸ್ತಾನ್ ರಾಯಲ್ಸ್ಗೆ ಮಾತ್ರ. ರಾಜಸ್ತಾನ್ ರಾಯಲ್ಸ್ ನಾಳೆ ನಡೆಯುವ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಗೆದ್ದರೆ ಅದು ನೇರವಾಗಿ ನಾಲ್ಕನೇ ತಂಡವಾಗಿ ಪ್ಲೇ ಆಪ್‌ಗೆ ಪ್ರವೇಶ ಪಡೆಯುತ್ತದೆ.
ಪಂಜಾಬ್ ಕಿಂಗ್ಸ್ಗೂ ಅವಕಾಶ ಇದೆ. ಪಂಜಾಬ್ ಕಿಂಗ್ಸ್ ತಂಡವು ಲಕ್ನೋ ಸೂಪರ್ ಜೇಂಟ್ಸ್ ವಿರುದ್ಧದ ಇಂದಿನ ಪಂದ್ಯವನ್ನು ಗೆದ್ದರೆ, ರಾಜಸ್ತಾನ್ ರಾಯಲ್ಸ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯ ಸೋತರೆ ಹಾಗೂ ಕೆಕೆಆರ್ ಕೂಡ ದೆಹಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯವನ್ನು ಸೋತರೇ ಪಂಜಾಬ್ ಕಿಂಗ್ಸ್ ನಾಲ್ಕನೇ ತಂಡವಾಗಿ ಅರ್ಹತೆ ಗಳಿಸುತ್ತದೆ.
ಇನ್ನು ಕೆಕೆಆರ್‌ಗೆ ಕೂಡ ಪ್ಲೇ ಆಪ್ ಹಂತ ತಲುಪುವ ಅವಕಾಶ ಇದೆ. ರಾಜಸ್ತಾನ್ ರಾಯಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ತಮ್ಮ ಪಂದ್ಯಗಳನ್ನು ಸೋತರೆ ೧೫ ಅಂಕಗಳನ್ನು ಗಳಿಸುವ ಕೆಕೆಆರ್ ಪ್ಲೇ ಆಪ್‌ಗೆ ತಲುಪುತ್ತದೆ.
ಲೆಕ್ಕಾಚಾರದಲ್ಲಿ ದೆಹಲಿ ಕ್ಯಾಪಿಟಲ್ಸ್ ಕೂಡ ಅಧಿಕೃತವಾಗಿ ಪಂದ್ಯಾವಳಿಯಿAದ ಹೊರ ಬಿದ್ದಿಲ್ಲ. ಆದರೆ ಆ ತಂಡದ ಹಾದಿ ತುಂಬಾ ಕಠಿಣವಾಗಿದೆ.
ದೆಹಲಿ ಕ್ಯಾಪಿಟಲ್ಸ್ ಈಗ ೧೩ ಪಂದ್ಯಗಳಿAದ ೧೨ ಅಂಕಗಳನ್ನು ಗಳಿಸಿದ್ದು, ಕೆಕೆಆರ್ ವಿರುದ್ಧದ ತನ್ನ ಕಡೆಯ ಪಂದ್ಯವನ್ನು ತನ್ನ ಅರ್ಹತೆ ಬೇಕಾದಷ್ಟು ರನ್ ಸರಾಸರಿ ಹೆಚ್ಚಿಸಿ ಗೆದ್ದರೆ ಅದು ೧೪ ಅಂಕಗಳನ್ನು ಗಳಿಸುವುದು. ಆಗ ರಾಜಸ್ತಾನ್ ರಾಯಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಮ್ಮ ತಮ್ಮ ಪಂದ್ಯಗಳನ್ನು ಸೋತರೇ ಆರ್‌ಆರ್ ಹಾಗೂ ಪಿಬಿಕೆಎಸ್ ತಂಡಗಳ ಅಂಕಗಳು ಕ್ರಮವಾಗಿ ೧೪ ಹಾಗೂ ೧೩ ರಲ್ಲಿ ಉಳಿದರೆ ನೆಟ್ ರನ್‌ರೇಟ್‌ನಲ್ಲಿ ದೆಹಲಿ ಕ್ಯಾಪಿಟಲ್ಸ್ ತಂಡ ಮುನ್ನಡೆ ಸಾಧಿಸಿದರೆ ದೆಹಲಿ ಕ್ಯಾಪಿಟಲ್ಸ್ ಕೂಡ ಪ್ಲೇ ಆಪ್‌ಗೆ ಅರ್ಹತೆ ಗಳಿಸುವ ಸಾಧ್ಯತೆ ಇದೆ. ಆದರೆ ಈ ಅವಕಾಶ ತುಂಬಾ ಕ್ಷೀಣ. ಇದಕ್ಕೆ ಪವಾಡ ನಡೆಯಬೇಕು.

