LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಅನುದಾನ ಬಿಡುಗಡೆಯಾಗದೆ ಸಂಕಷ್ಟ: ಡೆತ್‌ನೋಟ್‌ ಬರೆದಿಟ್ಟು, ಅಧಿಕಾರಿ ನಾಪತ್ತೆ

Advertisement

ಗದಗ: ರಾಜ್ಯ ಸರ್ಕಾರದಿಂದ ಕೋಟ್ಯಂತರ ರೂಪಾಯಿ ಅನುದಾನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ತೀವ್ರ ಆರ್ಥಿಕ ಸಂಕಷ್ಟಕ್ಕೀಡಾಗಿದ್ದ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತದ (KRIDL) ಸಹಾಯಕ ಕಾರ್ಯಪಾಲಕ ಎಂಜಿನಿಯರ್ (AEE) ಫರ್ವೀಜ್ ಎಂಬುವರು ನಾಪತ್ತೆಯಾಗಿರುವ ಆಘಾತಕಾರಿ ಘಟನೆ ಗದಗ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಮೇಲಾಧಿಕಾರಿಗಳಿಗೆ ಕಾರುಣಿಕ ಪತ್ರ ಬರೆದಿಟ್ಟು ಅವರು ದಿಢೀರ್ ನಾಪತ್ತೆಯಾಗಿದ್ದು, ಇಡೀ ಸರ್ಕಾರಿ ವಲಯ ಹಾಗೂ ಅವರ ಕುಟುಂಬಸ್ಥರಲ್ಲಿ ತೀವ್ರ ಆತಂಕ ವಾತಾವರಣ ನಿರ್ಮಾಣವಾಗಿದೆ.

ಸಬ್‌-ಗುತ್ತಿಗೆದಾರರಿಗೆ ನೀಡಬೇಕಾದ ಹಣ ಸರ್ಕಾರದಿಂದ ತಲುಪದ ಕಾರಣ, ದಿನನಿತ್ಯ ಗುತ್ತಿಗೆದಾರರು ಫರ್ವೀಜ್ ಅವರ ಮನೆ ಮುಂದೆ ಬಂದು ಗಲಾಟೆ ಮಾಡುತ್ತಿದ್ದರೆ ಎನ್ನಲಾಗಿದೆ.

 ಅಷ್ಟೇ ಅಲ್ಲದೆ, ಗುತ್ತಿಗೆದಾರರು ನಿರಂತರವಾಗಿ ಕರೆ ಮಾಡಿ ಬೆದರಿಕೆ ಹಾಗೂ ಕಿರುಕುಳ ನೀಡುತ್ತಿದ್ದುದರಿಂದ ಅವರ ಮಾನಸಿಕ ಆರೋಗ್ಯ ತೀವ್ರವಾಗಿ ಹದಗೆಟ್ಟಿತ್ತು. ಈ ಎಲ್ಲಾ ಬೆಳವಣಿಗೆಗಳಿಂದ ತೀವ್ರ ನಿರಾಶೆಗೊಂಡಿದ್ದ ಅವರು, ಬೆಂಗಳೂರಿನ KRIDL ಎಕ್ಸಿಕ್ಯೂಟಿವ್ ಎಂಜಿನಿಯರ್‌ಗೆ (EE) ಸುದೀರ್ಘ ಪತ್ರ ಬರೆದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಅವರು ಬರೆದಿರುವ ಪತ್ರದಲ್ಲಿ, "ಸರ್ಕಾರದಿಂದ ಅನುದಾನ ಬಿಡುಗಡೆಯಾಗದೆ ಆರ್ಥಿಕ ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವಾಗದೆ ನಾನು ಸೋತಿದ್ದೇನೆ.

ನನ್ನ ಜೀವನವನ್ನೇ ಕೊನೆಗಾಣಿಸುತ್ತಿದ್ದು, ನನ್ನ ಸಾವಿಗೆ ನಾನೇ ಕಾರಣ. ಗದಗ ಉಪವಿಭಾಗಕ್ಕೆ ತಕ್ಷಣವೇ ಅನುದಾನ ಬಿಡುಗಡೆ ಮಾಡಿ ಸಮಸ್ಯೆಯನ್ನು ಬಗೆಹರಿಸಿ, ಬೇರೊಬ್ಬ ಎಇಇ ಅಧಿಕಾರಿಯನ್ನು ನಿಯೋಜಿಸಿ. ದಯವಿಟ್ಟು ನನ್ನ ಕುಟುಂಬದವರಿಗೆ ಯಾರೂ ಕಿರುಕುಳ ನೀಡಬೇಡಿ" ಎಂದು ಮನಕಲಕುವ ರೀತಿಯಲ್ಲಿ ವಿನಂತಿಸಿಕೊಂಡಿದ್ದಾರೆ.

ಘಟನೆಯ ಹಿನ್ನೆಲೆಯನ್ನು ಗಮನಿಸುವುದಾದರೆ, ಸೆಪ್ಟೆಂಬರ್ 12ರಂದು ಇಇ ಅವರಿಗೆ ಪತ್ರ ಬರೆದಿದ್ದ ಫರ್ವೀಜ್, ಸೆಪ್ಟೆಂಬರ್ 13ರಂದು ಬೆಂಗಳೂರಿನಲ್ಲಿ ಮುಖ್ಯ ಸಭೆಯಿದೆ ಎಂದು ಹೇಳಿ ಮನೆಯಿಂದ ತೆರಳಿದ್ದರು.

ಆದರೆ, ಸೆಪ್ಟೆಂಬರ್ 16ರ ನಂತರ ಅವರ ಯಾವುದೇ ಸುಳಿವು ಸಿಗದೇ ನಾಪತ್ತೆಯಾಗಿದ್ದಾರೆ. ಪತ್ನಿ, ಮಗಳು, ವೃದ್ಧ ತಂದೆ-ತಾಯಿ ಹಾಗೂ ಸಹೋದರರನ್ನು ಅಗಲಿರುವ ಅಧಿಕಾರಿಯ ದಿಢೀರ್ ನಾಪತ್ತೆಯಿಂದ ಕುಟುಂಬಸ್ಥರು ಸಂಪೂರ್ಣ ಕಂಗಾಲಾಗಿದ್ದು, ಅವರನ್ನು ಆದಷ್ಟು ಬೇಗ ಸುರಕ್ಷಿತವಾಗಿ ಪತ್ತೆಹಚ್ಚಿಕೊಡುವಂತೆ ಕಣ್ಣೀರಿಡುತ್ತಾ ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದಾರೆ.

 

 

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮೊದಲ ಹಂತದ ಬರ ಪರಿಹಾರ ಕಾರ್ಯ ತಕ್ಷಣದಿಂದಲೇ ಆರಂಭ: ಡಾ.ಜಿ.ಪರಮೇಶ್ವರ್ನಂದಿನಿ ಹಾಲಿನ ದರ ಏರಿಕೆ ಪ್ರಸ್ತಾವನೆ: ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನಕ್ಕೆ ಸಿಎಂ ಭರವಸೆಡಾ.ಬಿ. ಆರ್. ಅಂಬೇಡ್ಕರ್‌ರ ಆದರ್ಶಕ್ಕೆ ತಕ್ಕಂತೆ ಸುಸಜ್ಜಿತ ವೃತ್ತ ನಿರ್ಮಿಸಿ: ಎನ್.ಎಸ್. ಬೋಸರಾಜುಚುನಾವಣಾ ಆಯೋಗ ಮತಗಳ್ಳತನದ ಪಾಲುದಾರ: ಡಿ ಕೆ ಶಿವಕುಮಾರ್‌ ತ್ರೇತಾಯುಗದಲ್ಲಿ ಕನ್ನಡಕ :'ರಾಮಾಯಣ' ಪೋಸ್ಟರ್ ನೋಡಿ ಟ್ರೋಲ್ 2 ಚಿನ್ನ ಸೇರಿ 23 ಪದಕ ಗೆದ್ದ ಭಾರತ ಜ್ಞಾನಶ್ರೀ ಫುಡ್ಸ್ ಗೆ ಮುರಳೀಧರ ಹಾಲಪ್ಪ ಭೇಟಿ : ಮಹಿಳಾ ಸಬಲೀಕರಣದ ದಿಟ್ಟ ಹೆಜ್ಜೆ ಪ್ರಶಂಸೆ ಜಿಲ್ಲಾ ಮಟ್ಟದ ರಿಂಗ್ ಬಾಲ್‌ನಲ್ಲಿ ಸಿದ್ಧಾರ್ಥ ಪಿಯು ಕಾಲೇಜಿಗೆ ಸಾಧನೆ: ಇಬ್ಬರು ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಭಾರತ ಮಹಿಳಾ ಕಬಡ್ಡಿ ತಂಡಕ್ಕೆ ಚಿನ್ನ 2 ಲಕ್ಷ  ಕೊಟ್ಟರೆ ಅಗ್ನಿವೀರ್ ಹುದ್ದೆ ಹೆಸರಲ್ಲಿ ವಂಚನೆಗೆ ಯತ್ನ : ಇಬ್ಬರ ಬಂಧನ.