ಬೆಂಗಳೂರು: ಎಸೆಸೆಲ್ಸಿ ಪರೀಕ್ಷೆ-1 ಮತ್ತು 2ರಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಅಂಕಪಟ್ಟಿಗಳಲ್ಲಿ ಹೆಸರು, ತಂದೆ-ತಾಯಿ ಹೆಸರು, ಜನ್ಮ ದಿನಾಂಕ ಅಥವಾ ಲಿಂಗ ಹಾಗೂ ಮಾಧ್ಯಮದಂತಹ ಪ್ರಮುಖ ಮಾಹಿತಿಗಳಲ್ಲಿ ದೋಷಗಳಿದ್ದರೆ ಶಾಲಾ ಮುಖ್ಯ ಶಿಕ್ಷಕರೇ ನೇರ ಹೊಣೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಹೇಳಿದೆ.
ಇಂತಹ ದೋಷಯುಕ್ತ ಅಂಕಪಟ್ಟಿಗಳನ್ನು ತಿದ್ದುಪಡಿ ಮಾಡಲು ಶಾಲಾ ಮುಖ್ಯ ಶಿಕ್ಷಕರೇ ಮಂಡಳಿಗೆ ಭೌತಿಕ ಅರ್ಜಿ ಸಲ್ಲಿಸಬೇಕು.
ವಿದ್ಯಾರ್ಥಿಗಳು ನೇರವಾಗಿ ಮಂಡಳಿಗೆ ಅರ್ಜಿ ಸಲ್ಲಿಸುವಂತಿಲ್ಲ. ತಿದ್ದುಪಡಿಗೆ ಅ.15ರವರೆಗೆ ಮಾತ್ರ ಶಾಲಾ ಮುಖ್ಯ ಶಿಕ್ಷಕರು ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ.
ದಂಡ ಶುಲ್ಕ ಒಂದು ಸಾವಿರ ರೂ.ಗಳನ್ನು ಕಡ್ಡಾಯವಾಗಿ ಶಾಲಾ ಮುಖ್ಯ ಶಿಕ್ಷಕರೆ ಎನ್‌ಇಎಫ್ ಟಿ ಚಲನ್ ಮೂಲಕ ಮಂಡಳಿಗೆ ಪಾವತಿಸಬೇಕು ಎಂದು ಮಂಡಳಿ ತಿಳಿಸಿದೆ.


