ಚನ್ನಮ್ಮನ ಕಿತ್ತೂರು : ಹಿರೇಬಾಗೇವಾಡಿ ರೈತರಿಂದ ಹುಬ್ಬಳ್ಳಿ ಚಲೋ ಪ್ರತಿಭಟನೆಯಲ್ಲಿ ನೂರಾರು ರೈತರು ಪಾಲ್ಗೊಂಡಿದ್ದಾರೆ. ಸಚಿವ ಜೋಶಿ ಅವರ ಕಚೇರಿ, ಮನೆ ಮುಂದೆ ಹೆಚ್ಚಿನ ಬಂದೋಬಸ್ತ್ ಹುಬ್ಬಳ್ಳಿ: ರೈತರಿಗೆ ವೈಜ್ಞಾನಿಕ ಹಾಗೂ ಯೋಗ್ಯ ಬೆಲೆಯನ್ನು ನೀಡಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳಿಗಾಗಿ ಮಂಗಳವಾರ ಹಮ್ಮಿಕೊಂಡಿರುವ ಬೃಹತ್ ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಕಚೇರಿ ಹಾಗೂ ಅವರ ಮನೆ ಮುಂದೆ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದ್ದು, ಬ್ಯಾರಿಕೇಡ್ ಹಾಕಲಾಗಿದೆ. ನೆಹರು ಮೈದಾನದ ಸುತ್ತಮುತ್ತ ಕಾರ್ಯಕ್ರಮದ ಸ್ಥಳದ ಹತ್ತಿರ ಹೆಚ್ಚಿನ ಬಂದೋಬಸ್ತ್ ಮಾಡಲಾಗಿದ್ದು, ಪೊಲೀಸರನ್ನು ಹಾಕಲಾಗಿದೆ. ಪ್ರಮುಖ ರಸ್ತೆಗಳಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ.

ರೈತರು ಕಿತ್ತೂರು ಚನ್ನಮ್ಮ ವೃತ್ತ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ನೆಹರು ಮೈದಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದಾರೆ. ಕೇಂದ್ರ ಸರಕಾರಕ್ಕೆ ಹಲವಾರು ಬಾರಿ ವೈಜ್ಞಾನಿಕ ಬೆಲೆಗಾಗಿ ಒತ್ತಾಯ ಮಾಡಲಾಗಿದೆ. ಆದರೆ ಇದುವರೆಗೂ ರೈತರ ಬೇಡಿಕೆ ಈಡೇರಿಲ್ಲ. ಈ ನಿಟ್ಟಿನಲ್ಲಿ ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಹಾಗೂ ಯೋಗ್ಯ ಬೆಲೆಯನ್ನು ನೀಡುವುದರೊಂದಿಗೆ ಈ ಹಂಗಾಮಿಗೆ ಕಬ್ಬಿನ ಬೆಳೆಗೆ ಪ್ರತಿ ಟನ್ ಗೆ ಕನಿಷ್ಠ 5500ರೂ. ನೀಡುವುದರೊಂದಿಗೆ ಕಾರ್ಖಾನೆ ಪ್ರಾರಂಭ ಮಾಡಬೇಕು, 2016 ರಿಂದ ಸಕ್ಕರೆಯ ಕನಿಷ್ಠ ಬೆಂಬಲ ಬೆಲೆ 31 ರೂ. ಇದ್ದು, ಕಬ್ಬು ಬೆಳೆಯಲು 2019 ರಿಂದ 26 ರವರೆಗೆ ಖರ್ಚು ಮೂರು ಪಟ್ಟು ಹೆಚ್ಚಾಗಿದೆ. ಸಿಎಸಿಪಿ ಖರ್ಚು ವರದಿ ಆಧಾರಿತ ಕನಿಷ್ಠ ಬೆಂಬಲ ಬೆಲೆ 60 ರೂ. ನಿರ್ಧರಿಸಬೇಕು, ಸಕ್ಕರೆಯನ್ನು ಗೃಹೋಪಯೋಗದ ದರ 100 ರೂ. ನಿರ್ಧರಿಸಬೇಕು, ಸಕ್ಕರೆ ಬೆಲೆ ಹೆಚ್ಚುತ್ತಿರುವುದರಿಂದ 2025-26 ನೇ ಸಾಲಿನ ಕಬ್ಬು ಪೂರೈಸಿದ ರೈತರಿಗೆ 300 ನೀಡಬೇಕು, ಕರ್ನಾಟಕದ ಮಹಾದಾಯಿ ನೀರಾವರಿ ಯೋಜನೆಯನ್ನು ತ್ವರಿತಗತಿಯಲ್ಲಿ ಎಲ್ಲಾ ಇಲಾಖೆಗಳ ಪರವಾನಿಗೆಯನ್ನು ನೀಡಿ ಕಾಮಗಾರಿ ಆರಂಭಿಸಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ರೈತರು ಆಗ್ರಹಿಸಿದರು.
ಎಫ್‌ಆರ್‌ಪಿ (FRP) ಬೆಲೆಯನ್ನು ಹೆಚ್ಚಿಸಬೇಕೆಂದು ಆಗ್ರಹಿಸಿದ್ದಾರೆ. ಹಿರೇಬಾಗೇವಾಡಿ ಯಿಂದ ನೂರಾರು ರೈತರು ಹುಬ್ಬಳ್ಳಿ ಚಲೋ ಕೈಗೊಂಡಿದ್ದಾರೆ.
ವರದಿ : ಬಸವರಾಜ ಭೀಮರಾಣಿ


