Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ನೇಪತ್ಯಕ್ಕೆ ಸರಿಯುತ್ತಿದೇಯೇ ಪ್ರಾದೇಶಿಕ ಪಕ್ಷಗಳ ಅಸ್ತಿತ್ವ?

Advertisement


ರಾಜಕಾರಣದಲ್ಲಿ ದಿನ ದಿನಕ್ಕೂ ಪ್ರಾದೇಶಿಕ ಪಕ್ಷಗಳು ಅಸ್ತಿತ್ವ ಕಳೆದುಕೊಳ್ಳುತ್ತಿವೆ ಎಂಬುದನ್ನು ಈ ಬಾರಿಯ ಪಂಚ ರಾಜ್ಯಗಳ ಚುನಾವಣೆ ಮತ್ತೇ ನಿರೂಪಿಸಿದೆ.
ಕೊನೆಯದಾಗಿ ಇದೀಗ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಅಧಿಕಾರ ಕಳೆದುಕೊಳ್ಳುವುದರೊಂದಿಗೆ ಪ್ರಾದೇಶಿಕ ಪಕ್ಷಗಳು ಒಂದೊAದಾಗಿ ರಾಜ್ಯದ ಅಧಿಕಾರವನ್ನು ಕಳೆದುಕೊಳ್ಳುತ್ತಿವೆ. ರಾಜ್ಯದಲ್ಲಿ ಮಾತ್ರವಲ್ಲ. ರಾಷ್ಟç ರಾಜಕಾರಣದಲ್ಲೂ ಇದರ ನೇರ ಪರಿಣಾಮ ಆಯಾ ಪ್ರಾದೇಶಿಕ ಪಕ್ಷಗಳ ಮೇಲೆ ಆಗುತ್ತದೆ.
ಕರ್ನಾಟಕದಲ್ಲಿ ಜೆಡಿಎಸ್, ಪಶ್ಚಿಮ ಬಂಗಾಳದಲ್ಲಿ ಟಿಎಂಸಿ, ಓಡಿಸ್ಸಾದಲ್ಲಿ ಬಿಜು ಜನತಾ ದಳ, ದೆಹಲಿಯಲ್ಲಿ ಕ್ರೇಜಿವಾಲ್ ಅವರ ಆಮ್ ಆದ್ಮಿ ಪಾರ್ಟಿ, ಮಹಾರಾಷ್ಟçದಲ್ಲಿ ಶಿವಸೇನೆ ಹೀಗೆ ಹಲವು ರಾಜ್ಯಗಳಲ್ಲಿ  ಪ್ರಾದೇಶಿಕ ಪಕ್ಷಗಳು ತನ್ನ ಅಸ್ತಿತ್ವಕ್ಕೆ ಪ್ರಶ್ನೆ ತಂದುಕೊಳ್ಳುತ್ತಿವೆ.
ಏತನ್ಮಧ್ಯೆ ತಮಿಳುನಾಡು ಹಾಗೂ ಕೇರಳದಲ್ಲಿ ಮಾತ್ರ ಇದೀಗ  ಪ್ರಾದೇಶಿಕ ಪಕ್ಷಗಳು ಉಳಿದುಕೊಂಡಿವೆ ಎನಿಸಿದರೂ ಆ ಎರಡೂ ರಾಜ್ಯಗಳಲ್ಲಿಯೂ ಆ ಪ್ರಾದೇಶಿಕ ಪಕ್ಷಗಳು ಆಡಳಿತ ನಡೆಸಬೇಕೆಂದರೆ ರಾಷ್ಟಿçÃಯ ಪಕ್ಷದ ಆಸರೆ ಪಡೆದುಕೊಳ್ಳಲೇ ಬೇಕಿದೆ.
ಕೇರಳ ಹಾಗೂ ತಮಿಳುನಾಡಿನಲ್ಲಿ ಕಾಂಗ್ರೆಸ್ ಸಹಾಯವಿಲ್ಲದೇ ಪ್ರಾದೇಶಿಕ ಪಕ್ಷ ಆಡಳಿತ ನಡೆಸುವಂತಿಲ್ಲ ಎನ್ನುವಂತಾಗಿದೆ. ಹೀಗಾಗಿ ಪ್ರಾದೇಶಿಕ ಪಕ್ಷಗಳ ನೆಲೆಗಟ್ಟು ಇದೀಗ ಕಾಲ ಕಳೆದಂತೆ ಕಳೆದು ಹೋಗುತ್ತಿದೆ.
ಪ್ರಾದೇಶಿಕ ಪಕ್ಷಗಳ ಆಡಳಿತಕ್ಕೆ ಸಕಾರಾತ್ಮಕ, ನಕಾರಾತ್ಮಕ ಎರಡೂ ಚಿಂತನೆಗಳು ಇವೆ. ಕೇಂದ್ರ ಸರಕಾರದಲ್ಲಿ ಒಂದು ಪ್ರಾದೇಶಿಕ ಪಕ್ಷ ಅತ್ಯಧಿಕ ಲೋಕ ಸಭೆ ಸ್ಥಾನಗಳನ್ನು ಹೊಂದಿ ದೆಹಲಿಗೆ ಹೋದರೆ ತಮ್ಮ ರಾಜ್ಯಕ್ಕೆ ಏನೆಲ್ಲ ಬೇಡಿಕೆಗಳನ್ನು ಈಡೇರಿಸಿಕೊಳ್ಳಬಹುದೆಂಬುದು ಇತಿಹಾಸದಲ್ಲಿ ಹಲವು ಬಾರಿ ಸಾಬೀತಾಗಿದೆ.
ಈ ಪೈಕಿ ತಮಿಳುನಾಡಿನ ಎಐಎಡಿಎಂಕೆ ಹಾಗೂ ಡಿಎಂಕೆಗಳೇ ಹೆಚ್ಚು ಪ್ರಭಾವ ಶಾಲಿಯಾಗಿ ಕಂಡು ಬಂದರೇ, ಟಿಎಂಸಿ, ಸಿಪಿಐ, ಸಿಪಿಐಎಂ ಹಾಗೂ ಈ ಹಿಂದೆ ಬಿಜು ಜನತಾ ದಳ ಕೂಡ ಹಿಂದೆ ಬಿದ್ದಿಲ್ಲ. ಹೀಗೆ ಪ್ರಭಾವಶಾಲಿಯಾಗಿದ್ದ ಪ್ರಾದೇಶಿಕ ಪಕ್ಷಗಳು ಒಂದೊAದಾಗಿ ಅಸ್ತಿತ್ವ ಕಳೆದುಕೊಳ್ಳುತ್ತಿರುವುದು ಸುಳ್ಳಲ್ಲ. 

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
98ರ ವೃದ್ಧನ ಕಾಲಿಗೆ ಬಿದ್ದ ನರೇಂದ್ರ ಮೋದಿ : ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಪಶ್ಚಿಮ ಬಂಗಾಳ ಪ್ರಿಯತಮನೊಂದಿಗೆ ಓಡಿಹೋಗಲು ಪತಿ ಮನೆಯಲ್ಲಿಯೇ ಕಳ್ಳತನ : ಇಬ್ಬರು ಅರೆಸ್ಟ್ಪಶ್ಚಿಮ ಬಂಗಾಳದ ಮೊದಲ ಬಿಜೆಪಿ ಸಿಎಂ ಆಗಿ ಸುವೇಂದು ಅಧಿಕಾರಿ ಪ್ರಮಾಣವಚನ ಸ್ವೀಕಾರ ಬಾಗಲಕೋಟೆ: ಜಿಲ್ಲಾ ಆಸ್ಪತ್ರೆಯಲ್ಲಿ ಹಿಂದೂ ಯುವತಿ ಮೇಲೆ ದೌರ್ಜನ್ಯ - ಆಕ್ರೋಶಯಾದಗಿರಿ ಲೋಕಾಯುಕ್ತದ 'ಮಿಂಚಿನ ದಾಳಿ': ಲಕ್ಷದ ಲಂಚದೊಂದಿಗೆ ಗುರುಮಠಕಲ್ ಪಿಐ ಅರೆಸ್ಟ್!ಸರ್ಕಾರಿ ಭೂಮಿ ಒತ್ತುವರಿ ತೆರವುಗೊಳಿಸಲು ಸುರೇಶ್ ನಾಯಕ ಒತ್ತಾಯ! ಇಂದು ಸ್ಪಂದನ ಆಸ್ಪತ್ರೆಯಲ್ಲಿ ಡಾ ಸಮಿತ್ ದೇಶಪಾಂಡೆ ಲಭ್ಯಮಹೀಂದ್ರಾ ಥಾರ್ ಹರಿದು ವಿದ್ಯಾರ್ಥಿನಿ ಸ್ಥಳದಲ್ಲೇ ಸಾವು : ಮೂವರು ವಿದ್ಯಾರ್ಥಿನಿ ಗಂಭೀರನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ಇಬ್ಬರು ವಿದ್ಯಾರ್ಥಿನಿಯರು ದಾರುಣ ಸಾವುನೇಪತ್ಯಕ್ಕೆ ಸರಿಯುತ್ತಿದೇಯೇ ಪ್ರಾದೇಶಿಕ ಪಕ್ಷಗಳ ಅಸ್ತಿತ್ವ?