ನವದೆಹಲಿ: ಜುಲೈ ೧ ರಿಂದ ಭಾರತ ವಿರುದ್ಧ ಆರಂಭವಾಗುವ ೫ ಪಂದ್ಯಗಳ ಟ್ವೆಂಟಿ-೨೦ ಕ್ರಿಕೆಟ್ ಸರಣಿಗೆ ೧೭ ಆಟಗಾರರ ಇಂಗ್ಲೆAಡ್ ತಂಡವನ್ನು ಪ್ರಕಟಿಸಲಾಗಿದೆ.
ಹೆರಿ ಬ್ರೋಕ್ ತಂಡದ ನಾಯಕತ್ವ ವಹಿಸಲಿದ್ದು, ೨೨ ರ ಹರೆಯದ ಆಲರೌಂಡರ್ ಜೆಮ್ಸ್ ಕೋಲೆಸ್ ಮೊದಲ ಬಾರಿಗೆ ತಂಡಕ್ಕೆ ಆಯ್ಕೆಯಾಗಿದ್ದಾರೆ.
ತಂಡದಿAದ ತಾತ್ಕಾಲಿಕವಾಗಿ ಹೊರಗುಳಿದಿದ್ದ ಜೋರ್ಡಾನ್ ಕುಕ್ಸ್, ಸೋನಿ ಬೇಕರ್ ಹಾಗೂ ಸಾದಿಕ್ ಮೊಹ್ಮದ ತಂಡಕ್ಕೆ ವಾಪಸ್ಸಾಗಿದ್ದಾರೆ. ಬ್ರೇಡನ್ ಕೇರ್ಸ್ ಹಾಗೂ ಜೆಮ್ಮಿ ಓವರಟನ್ ಗಾಯಗೊಂಡಿರುವ ಕಾರಣ ತಂಡಕ್ಕೆ ಅಲಭ್ಯರಾಗಿದ್ದಾರೆ.
ತಂಡ ಇಂತಿದೆ: ಹೆರಿ ಬ್ರೋಕ್ (ನಾಯಕ), ರೆಹಾನ್ ಅಹ್ಮದ, ಜೋಫ್ರಾ ಆರ್ಚರ್, ಸೋನಿ ಬ್ರೇಕರ್, ಟಾಮ್ ಬಾಂಟನ್, ಜಾಕೋಬ್ ಬೆಥೆಲ್, ಜೋಶ್ ಬಟ್ಲರ್, ಜೇಮ್ಸ್ ಕೋಲೆಸ್, ಜೋರ್ಡಾನ್ ಕುಕ್ಸ್, ಶ್ಯಾಮ್ ಕರನ್, ಲಿಯಾನ್ ಡಾವ್ಸನ್, ವಿಲ್ ಜಾಕ್ಸ್, ಸಾದಿಕ್ ಮೊಹ್ಮದ, ಆದಿಲ್ ರಷೀದ, ಫಿಲ್ ಸಾಲ್ಟ್, ಜೋಶ್ ತುಂಗೆ ಹಾಗೂ ಲುಕೆ ವುಡ್.


