LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
National News

ತ್ರೇತಾಯುಗದಲ್ಲಿ ಕನ್ನಡಕ :'ರಾಮಾಯಣ' ಪೋಸ್ಟರ್ ನೋಡಿ ಟ್ರೋಲ್ 

Advertisement

ರಾಮಾಯಣ ಹಾಗೂ ಮಹಾಭಾರತ ಭಾರತೀಯರ ಪಾಲಿಗೆ ಎಂದಿಗೂ ವಿಶೇಷ. ಈಗಾಗಲೇ ಹತ್ತಾರು ಸಿನಿಮಾ, ಧಾರಾವಾಹಿಗಳ ರೂಪದಲ್ಲಿ ರಾಮಾಯಣ-ಮಹಾಭಾರತ ಬಂದಿದೆ. 

ಇದೀಗ ನಿತೀಶ್ ತಿವಾರಿ ನಿರ್ದೇಶನದ 'ರಾಮಾಯಣ' ಸಿನಿಮಾ ರಿಲೀಸ್‌ಗೆ ಸಜ್ಜಾಗುತ್ತಿದ್ದರೆ, ಇನ್ನೊಂದೆಡೆ 'ಮಹಾಕಾವ್ಯ ಶ್ರೀ ರಾಮಾಯಣ ಕಥಾ' ಎಂಬ ಮತ್ತೊಂದು ಚಿತ್ರ ಚಿತ್ರಮಂದಿರಗಳಿಗೆ ಲಗ್ಗೆ ಇಟ್ಟಿದೆ.

ಆದರೆ, ಈ ಸಿನಿಮಾ ತನ್ನ ಕಥೆಗಿಂತಲೂ ಹೆಚ್ಚಾಗಿ ಕಳಪೆ ವಿಎಫ್‌ಎಕ್ಸ್, ಪಾತ್ರವರ್ಗ ಹಾಗೂ ಎಡವಟ್ಟುಗಳ ಕಾರಣಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಸಕತ್ ಸದ್ದು ಮಾಡುತ್ತಿದೆ.

ಪೋಸ್ಟರ್‌ನಲ್ಲಿ ಕನ್ನಡಕ ಧರಿಸಿದ ವಾನರ

ಸೆಪ್ಟೆಂಬರ್ 25ರಂದು 'ಮಹಾಕಾವ್ಯ ಶ್ರೀ ರಾಮಾಯಣ ಕಥಾ' ತೆರೆಗೆ ಬಂದಿದೆ. ಇತ್ತೀಚೆಗೆ ರಿಲೀಸ್ ಆದ ಈ ಚಿತ್ರದ ಪೋಸ್ಟರ್‌ ಒಂದನ್ನು ನೋಡಿ ನೆಟ್ಟಿಗರು ಅಚ್ಚರಿಗೊಂಡಿದ್ದಾರೆ.

 ಸುಗ್ರೀವನ ಪಾತ್ರವಿರುವ ಪೋಸ್ಟರ್‌ನಲ್ಲಿ, ಮಾನವ ರೂಪದಲ್ಲಿರುವ ವಾನರ ಸೈನಿಕನೊಬ್ಬ ಕಣ್ಣಿಗೆ ಕನ್ನಡಕ ಧರಿಸಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ತ್ರೇತಾಯುಗದಲ್ಲೂ ಸ್ಪೆಕ್ಸ್‌ ಇತ್ತಾ ಎಂದು ಸೋಶಿಯಲ್ ಮೀಡಿಯಾದಲ್ಲಿ ಜನ ಎದ್ನೋ ಬಿದ್ನೋ ಅಂತ ಟ್ರೋಲ್ ಮಾಡುತ್ತಿದ್ದಾರೆ.

'ತ್ರೇತಾಯುಗದಲ್ಲೂ ಕಣ್ಣಿಗೆ ಕನ್ನಡಕ ಹಾಕ್ತಿದ್ರಾ? ಇವನ್ಯಾರೋ ಟೈಮ್ ಟ್ರಾವೆಲರ್ ಇರಬೇಕು. ವಾನರ ಸೇನೆಗೆಲ್ಲಾ ಕನ್ನಡಕ ಹಾಕಿ ಎಂಥಾ ಸಿನಿಮಾ ಮಾಡಿದ್ದೀರಪ್ಪ' ಎಂದೆಲ್ಲಾ ನೆಟ್ಟಿಗರು ಕಾಲೆಳೆಯುತ್ತಿದ್ದಾರೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮೊದಲ ಹಂತದ ಬರ ಪರಿಹಾರ ಕಾರ್ಯ ತಕ್ಷಣದಿಂದಲೇ ಆರಂಭ: ಡಾ.ಜಿ.ಪರಮೇಶ್ವರ್ನಂದಿನಿ ಹಾಲಿನ ದರ ಏರಿಕೆ ಪ್ರಸ್ತಾವನೆ: ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನಕ್ಕೆ ಸಿಎಂ ಭರವಸೆಡಾ.ಬಿ. ಆರ್. ಅಂಬೇಡ್ಕರ್‌ರ ಆದರ್ಶಕ್ಕೆ ತಕ್ಕಂತೆ ಸುಸಜ್ಜಿತ ವೃತ್ತ ನಿರ್ಮಿಸಿ: ಎನ್.ಎಸ್. ಬೋಸರಾಜುಚುನಾವಣಾ ಆಯೋಗ ಮತಗಳ್ಳತನದ ಪಾಲುದಾರ: ಡಿ ಕೆ ಶಿವಕುಮಾರ್‌ ತ್ರೇತಾಯುಗದಲ್ಲಿ ಕನ್ನಡಕ :'ರಾಮಾಯಣ' ಪೋಸ್ಟರ್ ನೋಡಿ ಟ್ರೋಲ್ 2 ಚಿನ್ನ ಸೇರಿ 23 ಪದಕ ಗೆದ್ದ ಭಾರತ ಜ್ಞಾನಶ್ರೀ ಫುಡ್ಸ್ ಗೆ ಮುರಳೀಧರ ಹಾಲಪ್ಪ ಭೇಟಿ : ಮಹಿಳಾ ಸಬಲೀಕರಣದ ದಿಟ್ಟ ಹೆಜ್ಜೆ ಪ್ರಶಂಸೆ ಜಿಲ್ಲಾ ಮಟ್ಟದ ರಿಂಗ್ ಬಾಲ್‌ನಲ್ಲಿ ಸಿದ್ಧಾರ್ಥ ಪಿಯು ಕಾಲೇಜಿಗೆ ಸಾಧನೆ: ಇಬ್ಬರು ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಭಾರತ ಮಹಿಳಾ ಕಬಡ್ಡಿ ತಂಡಕ್ಕೆ ಚಿನ್ನ 2 ಲಕ್ಷ  ಕೊಟ್ಟರೆ ಅಗ್ನಿವೀರ್ ಹುದ್ದೆ ಹೆಸರಲ್ಲಿ ವಂಚನೆಗೆ ಯತ್ನ : ಇಬ್ಬರ ಬಂಧನ.