ಬೆಂಗಳೂರು: ಕೇಂದ್ರ ಸಚಿವರಾದ ಹೆಚ್‌ಡಿ ಕುಮಾರಸ್ವಾಮಿ ಅವರು ಮಣಿಕಂಠನ ದರ್ಶನಕ್ಕಾಗಿ ಶಬರಿಮಲೆಗೆ ಹೊರಟಿದ್ದಾರೆ. ಇಂದು ಬೆಳಗ್ಗೆ ಕುಮಾರಸ್ವಾಮಿಯವರು ಪಡಿಪೂಜೆ, ಪುಷ್ಪಾಭಿಷೇಕ ಪೂಜೆ ಮಾಡಿಸಿದ್ದಾರೆ.
ಪೂಜೆ ಬಳಿಕ ಅಯ್ಯಪ್ಪ ಮಾಲೆ ಹಾಕಿಕೊಂಡು, ಇರಿಮುಡಿ ಹೊತ್ತು ಕುಮಾರಸ್ವಾಮಿ ಶಬರಿಮಲೆ ಯಾತ್ರೆ ಕೈಗೊಳ್ಳಲಿದ್ದಾರೆ. ಕೇಂದ್ರ ಸಚಿವ ಕುಮಾರಸ್ವಾಮಿ ಜೊತೆಯಲ್ಲಿ ಜೆಡಿಎಸ್ ನಾಯಕರು ಸಹ ಮಾಲೆ ಹಾಕಿ ಅಯ್ಯಪ್ಪ ದರ್ಶನಕ್ಕೆ ತೆರಳುತ್ತಿದ್ದಾರೆ.
ಸುರೇಶ್ ಬಾಬು, ಬೋಜೇಗೌಡ, ಸಾ ರಾ ಮಹೇಶ್, ಎ ಮಂಜು ಸೇರಿದಂತೆ ಹಲವು ಜೆಡಿಎಸ್ ನಾಯಕರು ಕುಮಾರಸ್ವಾಮಿ ಜೊತೆಯಲ್ಲಿ ಶಬರಿಮಲೆಗೆ ಹೊರಟಿದ್ದಾರೆ.


