LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಮೆಹಬೂಬ ಸುಭಾನಿ ದರ್ಗಾದ ಗಂಧ–ಉರುಸ್‌ನಲ್ಲಿ ಸೌಹಾರ್ದದ ಸಂದೇಶ

Advertisement

ಬೈಲಹೊಂಗಲ: ನಗರದ ಬಸವೇಶ್ವರ ಆಶ್ರಯ ನಗರದ ಹಜರತ್ ಪೀರ್ ಸೈಯ್ಯದ ಮೆಹಬೂಬ ಸುಭಾನಿ ದರ್ಗಾದ ಗಂಧ ಹಾಗೂ ಉರುಸ್ ಕಾರ್ಯಕ್ರಮವು ಭಕ್ತಿ, ಶ್ರದ್ಧೆ ಮತ್ತು ಸೌಹಾರ್ದದ ವಾತಾವರಣದಲ್ಲಿ ವಿಜೃಂಭಣೆಯಿಂದ ಜರುಗಿತು.

ದರ್ಗಾದ ಗುರುಗಳಾದ ನ್ಯಾಮತಾಲಿ ಮಕಾನದಾರ ಅವರ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಧರ್ಮಗಳ ಮುಖಂಡರು, ಗಣ್ಯರು ಹಾಗೂ ಭಕ್ತರು ಪಾಲ್ಗೊಂಡಿದ್ದರು. ಉರುಸ್ ಅಂಗವಾಗಿ ದರ್ಗಾಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು. ಭಕ್ತರು ದರ್ಗಾಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿ, ಗಂಧ ಸಮರ್ಪಿಸಿ ಆಶೀರ್ವಾದ ಪಡೆದರು.

ಕಾರ್ಯಕ್ರಮದ ಅಂಗವಾಗಿ ಟಿವಿ ಸ್ಟಾರ್ ಚಾರ್ಲಿ ಜನಾಬ್ ಹಾಗೂ ತಂಡದವರಿಂದ ಕವ್ವಾಲಿ ಕಾರ್ಯಕ್ರಮ ನಡೆಯಿತು. ಕಲಾವಿದರ ಗಾಯನಕ್ಕೆ ಭಕ್ತರು ಮೆಚ್ಚುಗೆ ವ್ಯಕ್ತಪಡಿಸಿದರು. ಫಕೀರರಿಂದ ವಿವಿಧ ಪವಾಡ ಪ್ರದರ್ಶನಗಳು ನಡೆದವು. ರಾತ್ರಿ ನಡೆದ ಕವ್ವಾಲಿ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದರು.
news_1791263666_0_153.webp

 

ದರ್ಗಾದ ಗುರುಗಳಾದ ನ್ಯಾಮತಾಲಿ ಮಕಾನದಾರ ಮಾತನಾಡಿ, “ಧರ್ಮ ಯಾವುದೇ ಆಗಿರಲಿ, ಮಾನವೀಯತೆ ಮತ್ತು ಪರಸ್ಪರ ಗೌರವಕ್ಕೆ ಹೆಚ್ಚಿನ ಮಹತ್ವವಿದೆ. ಇಂತಹ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಸಮಾಜದಲ್ಲಿ ಸಹಬಾಳ್ವೆ, ಶಾಂತಿ ಮತ್ತು ಸೌಹಾರ್ದದ ಸಂದೇಶ ಸಾರುತ್ತವೆ. ಎಲ್ಲ ಸಮುದಾಯದವರು ಒಗ್ಗೂಡಿ ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿರುವುದು ಬೈಲಹೊಂಗಲದ ಸೌಹಾರ್ದ ಪರಂಪರೆಗೆ ಸಾಕ್ಷಿಯಾಗಿದೆ” ಎಂದು ಹೇಳಿದರು.

ಉರುಸ್ ಅಂಗವಾಗಿ ಭಕ್ತರಿಗೆ ಪ್ರಸಾದ ವಿತರಣೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಕಾರ್ಯಕ್ರಮದ ಯಶಸ್ಸಿಗೆ ದರ್ಗಾ ಆಡಳಿತ ಮಂಡಳಿ, ಭಕ್ತರು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸಹಕರಿಸಿದರು.

ಯಕ್ಕುಂಡಿಯ ಸುಲ್ತಾನ ಗುರು, ರೇವಣಸಿದ್ದೇಶ್ವರ ಮಂದಿರದ ಅರ್ಚಕ ಉಮೇಶ ಬಾಗೋಜಿ, ಹುಬ್ಬಳ್ಳಿಯ ಯಾಕೂದ್ ಅಲಿ ಷಾ ಸೇರಿದಂತೆ ಅನೇಕ ಧರ್ಮಗುರುಗಳು ಸಾನ್ನಿಧ್ಯ ವಹಿಸಿದ್ದರು.

ಈ ಸಂದರ್ಭದಲ್ಲಿ ಪುಂಡಲೀಕ ತಿಮ್ಮಾಪೂರ, ಬಾಲಚಂದ್ರ ತಳವಾರ, ಕುಮಾರ ತುರಮರಿ, ಬಸವರಾಜ ತುಬಾಕಿ, ನಿವೃತ್ತ ಪೊಲೀಸ್ ಅಧಿಕಾರಿ ಆರ್.ಎಲ್. ಸಾಲೂಟಗಿಕರ್ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.

ಉರುಸ್ ಕಾರ್ಯಕ್ರಮದ ಉಸ್ತುವಾರಿ ರಾಘವೇಂದ್ರ ಗುಂಡ್ಲೂರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ವರದಿ: ಸಮೀರ್ ಮುಲ್ಲಾನವರ

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಾಯುಪಡೆ ನೂತನ ಮುಖ್ಯಸ್ಥರಾಗಿ ಏರ್ ಮಾರ್ಷಲ್ ಅಶುತೋಷ್ ದೀಕ್ಷಿತ್ ನೇಮಕ ಹಾಲಿನ ದರ ಏರಿಕೆ ಫಿಕ್ಸ್ : ಲೀಟರ್‌ಗೆ ₹8 ಹೆಚ್ಚಳಕ್ಕೆ ಸರ್ಕಾರ ಒಪ್ಪಿಗೆ ಸೌರವ್ ಗಂಗೂಲಿ ದೆಹಲಿ ಕ್ಯಾಪಿಟಲ್ಸ್ ಮುಖ್ಯ ಕೋಚ್ ರಾಜ್ಯದಲ್ಲಿ ಪೊಲೀಸ್‌ ಠಾಣೆಗಳು ಕಾಂಗ್ರೆಸ್‌ ಕಚೇರಿಗಳಾಗಿವೆ: ಆರ್.ಅಶೋಕ್ ಕಿಡಿಅಯ್ಯೋ ಸಿಎಂ ತುಂಬಾ ಬ್ಯೂಸಿ, ನನ್ನ ಫೋನ್​​ಗೂ ಸಿಗಲ್ಲ : ಲಕ್ಷ್ಮಿ ಹೆಬ್ಬಾಳ್ಕರ್ ಏಷ್ಯನ್ ಗೇಮ್ಸ್ ನಲ್ಲಿ ಪದಕ ವಿಜೇತರಿಗೆ ಗ್ರೂಪ್ ಬಿ ಹುದ್ದೆ : ಜಿ. ಪರಮೇಶ್ವರ್ ಘೋಷಣೆಏಷ್ಯನ್ ಗೇಮ್ಸ್ ನಲ್ಲಿ ಚಿನ್ನ ಗೆದ್ದವರಿಗೆ 1 ಕೋಟಿ, ಬೆಳ್ಳಿ ಗೆದ್ದವರಿಗೆ ₹75 ಲಕ್ಷ ನಗದು : ಸಿಎಂ ಘೋಷಣೆ ನಾಯಕತ್ವ ಸ್ಥಾನದಿಂದ ಹಿಂದೆ ಸರಿದ ಹರಮನ್ ಪ್ರೀತ್ ಕೌರ್ ಪಾವಗಡದಲ್ಲಿ 'ದಳ-ಕಮಲ' ಜಂಟಿ ರಣಕಹಳೆ:ತಹಶೀಲ್ದಾರ್ ಕಚೇರಿಗೆ ಮನವಿ ಪತ್ರ ಕೊಡುವುದಕ್ಕೆ  ಜನಸಾಗರ!ನೈಜೀರಿಯಾದಲ್ಲಿ ಸೇನಾ ವಿಮಾನ ಪತನ : 32 ಮಂದಿ ಸಾವು