ಕೆಮ್ಮಿನ ಸಿರಪ್ ಸೇರಿದಂತೆ ವಿವಿಧ ಔಷಧೀಯ ಸಿರಪ್‌ಗಳ ಮಾರಾಟದ ಮೇಲಿನ ನಿಯಂತ್ರಣವನ್ನು ಕೇಂದ್ರ ಸರ್ಕಾರ ಮತ್ತಷ್ಟು ಕಠಿಣಗೊಳಿಸಿದೆ.
ಹೊಸ ತಿದ್ದುಪಡಿ ನಿಯಮದ ಪ್ರಕಾರ, ಇನ್ನು ಮುಂದೆ ವೈದ್ಯರ ಪ್ರಿಸ್ಕ್ರಿಪ್ಷನ್ (ಚೀಟಿ) ಇಲ್ಲದೆ ಔಷಧ ಅಂಗಡಿಗಳಿಂದ ಸಿರಪ್‌ಗಳನ್ನು ಖರೀದಿಸಲು ಸಾಧ್ಯವಾಗುವುದಿಲ್ಲ.
ಇತ್ತೀಚೆಗೆ ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಕಲುಷಿತ ಕೆಮ್ಮಿನ ಸಿರಪ್ ಸೇವನೆಯಿಂದ ಮಕ್ಕಳ ಸಾವಿನ ಘಟನೆಗಳು ವರದಿಯಾಗಿದ್ದವು. ಈ ಹಿನ್ನೆಲೆಯಲ್ಲಿ ಸಿರಪ್‌ಗಳ ಉತ್ಪಾದನೆ ಮತ್ತು ಮಾರಾಟದ ಮೇಲಿನ ಮೇಲ್ವಿಚಾರಣೆಯನ್ನು ಬಲಪಡಿಸುವ ಅಗತ್ಯತೆ ವ್ಯಕ್ತವಾಗಿತ್ತು.
ಹೊಸ ನಿಯಮದಲ್ಲಿ ಏನಿದೆ?
ಕೇಂದ್ರ ಸರ್ಕಾರವು ಡ್ರಗ್ಸ್ ಅಂಡ್ ಕಾಸ್ಮೆಟಿಕ್ಸ್ ಕಾಯ್ದೆ, 1940ರ ಅಡಿಯಲ್ಲಿ ನೀಡಲಾದ ಅಧಿಕಾರವನ್ನು ಬಳಸಿಕೊಂಡು ಡ್ರಗ್ಸ್ ರೂಲ್ಸ್, 1945ಗೆ ತಿದ್ದುಪಡಿ ತಂದಿದೆ.
2026ರ ಜೂನ್ 9ರಂದು ಪ್ರಕಟವಾದ ಅಧಿಸೂಚನೆಯ ಪ್ರಕಾರ, “ಡ್ರಗ್ಸ್ (ಐದನೇ ತಿದ್ದುಪಡಿ) ನಿಯಮಗಳು, 2026” ಜಾರಿಗೆ ಬಂದಿವೆ. ಅಧಿಕೃತ ಗಜೆಟ್‌ನಲ್ಲಿ ಪ್ರಕಟವಾದ ದಿನಾಂಕದಿಂದಲೇ ಈ ನಿಯಮಗಳು ಜಾರಿಗೆ ಬಂದಿವೆ.


