LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಕೂಡಲಸಂಗಮದಲ್ಲಿ ನಾನ್ ವೆಜ್ ಸೇವನೆ : ವಿಡಿಯೋ ಹಂಚಿ ಬಿಜೆಪಿ ಆಕ್ರೋಶ 

Advertisement

ಬಾಗಲಕೋಟೆ : ವಿಶ್ವಗುರು ಬಸವಣ್ಣನವರ ಪವಿತ್ರ ಐಕ್ಯಸ್ಥಳವಾದ ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮ ಕ್ಷೇತ್ರ ಆವರಣದಲ್ಲಿ ಅನ್ಯಕೋಮಿನ ಮಹಿಳೆಯರು ಮತ್ತು ಮಕ್ಕಳು ಮಾಂಸಾಹಾರ (ನಾನ್‌ವೆಜ್) ಸೇವಿಸಿದ್ದಾರೆ ಎನ್ನಲಾದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದೆ.

ಈ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ರಾಜ್ಯ ಬಿಜೆಪಿ, ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಹಾಗೂ ಸ್ಥಳೀಯ ನಾಯಕರ ವಿರುದ್ಧ ಕಿಡಿಕಾರಿದೆ.

ಬಿಜೆಪಿಯ ಎಕ್ಸ್ (ಟ್ವಿಟರ್) ಪೋಸ್ಟ್ ಮತ್ತು ಆಕ್ರೋಶ

ಘಟನೆಗೆ ಸಂಬಂಧಿಸಿದಂತೆ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಬಿಜೆಪಿ ಕರ್ನಾಟಕ, 'ಕಾಂಗ್ರೆಸ್ ಬಂದಿದೆ - ಕೂಡಲಸಂಗಮದಲ್ಲಿ ನಾನ್‌ವೆಜ್‌ಗೆ ಅನುಮತಿ ನೀಡಿದೆ' ಎಂದು ವ್ಯಂಗ್ಯವಾಡಿದೆ.

ಬಸವಣ್ಣನವರ ಪವಿತ್ರ ಕ್ಷೇತ್ರವಾದ ಕೂಡಲಸಂಗಮದಲ್ಲಿ ಮಾಂಸಾಹಾರ ಸೇವಿಸಿರುವುದು ಅತ್ಯಂತ ಖಂಡನೀಯ ಹಾಗೂ ಭಕ್ತರ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರು ಹಾಗೂ ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರೂ ಆಗಿರುವ ಸ್ಥಳೀಯ ಶಾಸಕ ವಿಜಯಾನಂದ ಕಾಶಪ್ಪನವರ್ ಅವರನ್ನು ನೇರವಾಗಿ ಪ್ರಶ್ನಿಸಿರುವ ಬಿಜೆಪಿ, "ಬಸವಣ್ಣನವರಿಗೆ ಹಾಗೂ ಅವರ ಕೋಟ್ಯಂತರ ಭಕ್ತರಿಗೆ ಇನ್ನೆಷ್ಟು ಅವಮಾನ ಮಾಡಬೇಕೆಂದುಕೊಂಡಿದ್ದೀರಿ?" ಎಂದು ತೀವ್ರ ತರಾಟೆಗೆ ತೆಗೆದುಕೊಂಡಿದೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST