LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಫ್ಯಾಸಿಸ್ಟ್ ಶಕ್ತಿಗಳ ದಬ್ಬಾಳಿಕೆ : ಅ .4ರಂದು ಪ್ರತಿರೋಧ ಸಮಾವೇಶ

Advertisement

ಹುಬ್ಬಳ್ಳಿ : ಜನಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಪ್ಯಾಸಿಸ್ಟ್ ಶಕ್ತಿಗಳ ದಬ್ಬಾಳಿಕೆಯ ವಿರುದ್ಧ ಅ. ೪ ರಂದು ರಾಜ್ಯ ಮಟ್ಟದ ಪ್ರತಿರೋಧ ಸಮಾವೇಶ ಮತ್ತು ರ‍್ಯಾಲಿಯನ್ನು ಧಾರವಾಡದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟ ತಿಳಿಸಿದೆ.

ನಗರದಲ್ಲಿ  ಜಂಟಿ ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಗುರುನಾಥ ಉಳ್ಳಿಕಾಶಿ, ಮಹೇಶ ಪತ್ತಾರ ಹಾಗೂ ಬಸವರಾಜ ಸುಳಿಭಾವಿ ಅವರುಗಳು ಮಾತನಾಡಿ, ಅಂದು ಬೆಳಿಗ್ಗೆ ೧೦ ಗಂಟೆಗೆ ಕಲ್ಯಾಣನಗರ ದಲ್ಲಿರುವ ಹುತಾತ್ಮ ಡಾ. ಎಂ.ಎA. ಕಲಬುರ್ಗಿ ಅವರ ಮನೆಯಿಂದ ಆರಂಭವಾಗುವ ಬೈಕ್ ರ‍್ಯಾಲಿ ಜಯನಗರ ಕೊನೆ ಸರ್ಕಲ್ ಹಾಗೂ ಕೆಸಿಡಿ ಸರ್ಕಲ್ ಮೂಲಕ ಆರ್.ಎನ್. ಶೆಟ್ಟಿ ಕ್ರೀಡಾಂಗಣ ತಲುಪಲಿದೆ ಎಂದರು.\

ಬೆಳಿಗ್ಗೆ ೧೧ ಗಂಟೆಗೆ ಆರ್.ಎನ್. ಶೆಟ್ಟಿ ಕ್ರೀಡಾಂಗಣದ ಮುಖ್ಯದ್ವಾರದಿಂದ ಪ್ರತಿರೋಧದ ನಡಿಗೆ ಆರಂಭವಾಗಲಿದ್ದು, ಜ್ಯೂಬ್ಲಿ ಸರ್ಕಲ್, ಜಿಲ್ಲಾ ನ್ಯಾಯಾಲಯ ಹಾಗೂ ಹಳೇ ಎಸ್.ಪಿ. ಸರ್ಕಲ್ ಮೂಲಕ ಬುದ್ಧ ರಕ್ಷಿತ ಶಾಲಾ ಆವರಣ ತಲುಪಲಿದೆ. ಮಧ್ಯಾಹ್ನ ೧೨ ಗಂಟೆಗೆ ಸವದತ್ತಿ ರಸ್ತೆಯ ಡಾ.ಬಿ.ಆರ್.ಅಂಬೇಡ್ಕರ್ ಎಜ್ಯುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಶಾಲಾ ಆವರಣದಲ್ಲಿ ಪ್ರತಿರೋಧ ಸಮಾವೇಶ ನಡೆಯಲಿದ್ದು, ಸುಮಾರು ಐದು ಸಾವಿರ ಜನ ಪ್ರಮುಖರು ಸೇರಲಿದ್ದಾರೆ ಎಂದು ಹೇಳಿದರು.

ಸಮಾವೇಶದಲ್ಲಿ ಕುಂ. ವೀರಭದ್ರಪ್ಪ, ಬಿ.ಕೆ. ಹರಿಪ್ರಸಾದ್, ಪ್ರಕಾಶ ರಾಜ್, ಎಸ್.ಆರ್. ಹಿರೇಮಠ, ದಿನೇಶ ಅಮಿನ್ ಮಟ್ಟು, ಬಿ.ಸುರೇಶ್, ಕೆ.ಪ್ರಕಾಶ, ಶಿವಸುಂದರ್, ಮಾವಳ್ಳಿ ಶಂಕರ್, ರಹಮತ್ ತರಿಕೇರಿ, ನೂರ್ ಶ್ರೀಧರ್, ಕೆ.ನೀಲಾ, ಸಬಿತಾ ಬನ್ನಾಡಿ ಸೇರಿದಂತೆ ಹಲವಾರು ಪ್ರಮುಖರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜೇಶ್ವರಿ ಕಟ್ಟಿಮನಿ, ಕುಮಾರಣ್ಣ ಪಾಟೀಲ, ರಮೇಶ ಬೋಸ್ಲೆ ಸೇರಿದಂತೆ ಅನೇಕರು ಪಾಲ್ಗೊಂಡಿದ್ರು.

ವರದಿ : ಸುಧೀರ್ ಕುಲಕರ್ಣಿ 

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST