ತುರುವೇಕೆರೆ: ಜಿಲ್ಲಾ ಮಟ್ಟದಲ್ಲಿ ನಡೆದ ದೇಶಭಕ್ತಿ ಗೀತೆ ಗಾಯನ ಸ್ಪರ್ಧೆಯಲ್ಲಿ ತಾಲ್ಲೂಕಿನ ಸೌರಭ ಕಾನ್ವೆಂಟಿನ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದಿದ್ದಾರೆ.
ತುಮಕೂರಿನ ಆರ್ಯನ್ ಪ್ರೌಢಶಾಲೆಯಲ್ಲಿ ನಡೆದ ತುಮಕೂರು ಜಿಲ್ಲಾಮಟ್ಟದ ದೇಶಭಕ್ತಿ ಗೀತೆ ಗಾಯನ ಸ್ಪರ್ಧೆಯಲ್ಲಿ ಸೌರಭ ಕಾನ್ವೆಂಟಿನ ಸ್ಕೌಟ್, ಕಬ್ ಹಾಗೂ ಬುಲ್ ಬುಲ್ ತಂಡಗಳ ವಿದ್ಯಾರ್ಥಿಗಳು ಭಾಗವಹಿಸಿ ಉತ್ತಮ ಸಾಧನೆ ಮಾಡಿದ್ದಾರೆ. ಸ್ಕೌಟ್ ವಿಭಾಗದಲ್ಲಿ ಜಯಚಂದ್ರ ಟಿ.ಡಿ., ನೂತನ್ ಕೆ.ವೈ. ಪರಿಣಯ್ ಸಿ.ಎಸ್., ಶಶಾಂಕ್ ಸಿ.ಎಂ., ಕೆಂಪೇಗೌಡ, ರೋಹಿತ್, ಆರ್ಯ, ಚಿರಾಗ್ ಅವರ ತಂಡ ದ್ವಿತೀಯ ಸ್ಥಾನ ಗಳಿಸಿದೆ. ಕಬ್ ವಿಭಾಗದಲ್ಲಿ ಮೊಹಮ್ಮದ್ ಇಹಷಾಕ್, ಲೋಹಿತ್ ಯಾದವ್, ಮೋಹನ್ ಯಾದವ್, ಚೇತನ್, ಸಫೀರ್, ಹರಿ, ರಿಷಿ ಅವರನ್ನು ಒಳಗೊಂಡ ತಂಡ ದ್ವಿತೀಯ ಸ್ಥಾನ ಗಳಿಸಿದೆ. 
ಬುಲ್ ಬುಲ್ ವಿಭಾಗದಲ್ಲಿ ಧನಲಕ್ಷ್ಮಿ, ನಿದಾ ಹರ್ಮೈನ್, ಮರಿಯ, ಫಾತಿಮಾ, ಅಲಿಯಾ ಫಾತಿಮಾ, ವರ್ಷಿಣಿ ಆರ್., ಮನಸ್ವಿನಿ ಯು. ತಂಡ ತೃತೀಯ ಸ್ಥಾನ ಗಳಿಸಿ ಶಾಲೆಗೆ ಕೀರ್ತಿ ತಂದಿಸೆ.
ದೇಶಭಕ್ತಿ ಗೀತೆ ಗಾಯನದಲ್ಲಿ ಉತ್ತಮ ಸ್ಥಾನ ಪಡೆದು ತುರುವೇಕೆರೆ ತಾಲೂಕಿಗೆ ಕೀರ್ತಿಯನ್ನು ತಂದ ಎಲ್ಲ ವಿದ್ಯಾರ್ಥಿಗಳನ್ನು ಸಂಸ್ಥೆಯ ಆಡಳಿತ ಮಂಡಳಿ ಕಾರ್ಯದರ್ಶಿ ಕಲ್ಪನಾ ಮುನಿರಾಜು, ಮುಖ್ಯ ಶಿಕ್ಷಕ ಮುನಿರಾಜು ಹಾಗೂ ಎಲ್ಲಾ ಶಿಕ್ಷಕ ವೃಂದದವರು ಅಭಿನಂದಿಸಿದ್ದಾರೆ.
ವರದಿ: ಗಿರೀಶ್ ಕೆ ಭಟ್


