LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ರಾಜನಾಥ್ ಸಿಂಗ್ ಭೇಟಿಯಾದ ಡಿ.ಕೆ ಶಿವಕುಮಾರ್ : ಪ್ರಮುಖ ಬೇಡಿಕೆಗಳ ಕುರಿತು ಮನವಿ 

Advertisement

ನವದೆಹಲಿ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಂದು ನವದೆಹಲಿಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಅಧಿಕೃತ ನಿವಾಸದಲ್ಲಿ ಭೇಟಿಯಾಗಿ, ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಬೇಡಿಕೆಗಳ ಬಗ್ಗೆ ಮನವಿ ಸಲ್ಲಿಸಿದ್ದಾರೆ.

ಬೆಂಗಳೂರಿನ ಮೂಲಸೌಕರ್ಯ ಹಾಗೂ ಭವಿಷ್ಯದ ಅಭಿವೃದ್ಧಿಗೆ ಸಂಬಂಧಿಸಿದಂತೆ ರಕ್ಷಣಾ ಇಲಾಖೆಯ ಭೂಮಿಗೆ ಒಳಪಟ್ಟ ಹಲವು ಪ್ರಮುಖ ಬೇಡಿಕೆಗಳ ಕುರಿತು ಮನವಿ ಸಲ್ಲಿಸಿದರು. 

ಜಾಗತಿಕ ಮಟ್ಟದಲ್ಲಿ ಭಾರತವನ್ನು ಬೆಂಗಳೂರಿನ ಮೂಲಕವೇ ಗುರುತಿಸಲಾಗುತ್ತಿದ್ದು, ನಗರದ ಸಂಚಾರ ದಟ್ಟಣೆ ನಿವಾರಣೆ ಹಾಗೂ ಸುಸ್ಥಿರ ಬೆಳವಣಿಗೆಗೆ ರಕ್ಷಣಾ ಇಲಾಖೆಯ ಸಹಕಾರ ಅತ್ಯಗತ್ಯ ಎಂದು ಅವರು ಕೇಂದ್ರ ಸಚಿವರ ಗಮನಕ್ಕೆ ತಂದರು.

ಇಬ್ಲೂರು ಜಾಗದಲ್ಲಿ ಬೃಹತ್ ಉದ್ಯಾನವನ ಹಾಗೂ ಕೊಳೆಗೇರಿಗಳ ಪುನರ್ವಸತಿ

ಇಬ್ಲೂರು ಫೈರಿಂಗ್ ರೇಂಜ್ ಬಳಿ ಬಳಕೆಯಾಗದೆ ಉಳಿದಿರುವ ಅಂದಾಜು 730 ಎಕರೆ ರಕ್ಷಣಾ ಭೂಮಿಯನ್ನು ಬೆಂಗಳೂರಿಗೆ ಶಾಶ್ವತ ಸಾರ್ವಜನಿಕ ಉದ್ಯಾನವನ ಮತ್ತು ಹಸಿರು ಪರಿಸರವಾಗಿ ಅಭಿವೃದ್ಧಿಪಡಿಸಲು ಅನುಮತಿ ನೀಡಬೇಕೆಂದು ಡಿಸಿಎಂ ಮನವಿ ಮಾಡಿದರು. 

ಇದರೊಂದಿಗೆ, ರಕ್ಷಣಾ ಇಲಾಖೆಯ ಸುಮಾರು 43.83 ಎಕರೆ ಜಮೀನಿನಲ್ಲಿರುವ 10 ಅಧಿಸೂಚಿತ ಕೊಳೆಗೇರಿಗಳ ಅಭಿವೃದ್ಧಿ ಮತ್ತು ದುರಸ್ತಿ ಕಾರ್ಯಕ್ಕೆ ತುರ್ತು ಅನುಮತಿ ಕಲ್ಪಿಸಿ, ಅಲ್ಲಿನ ನಿವಾಸಿಗಳಿಗೆ ಶಾಶ್ವತ ಪರಿಹಾರ ಒದಗಿಸುವಂತೆ ಕೋರಿದರು.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂಗ್ಲೆಂಡ್ ಗೆ 223 ರನ್ ಗಳ ಸುಲಭ ಗೆಲುವು ರೈತರ ಪಂಪ್‌ಸೆಟ್‌ಗಳಿಗೆ ನಿರಂತರ 10 ಗಂಟೆ ವಿದ್ಯುತ್ ನೀಡಬೇಕು: ರೈತರ ಮನವಿಮಾನ್ವಿಯಲ್ಲಿ ಭವ್ಯ ಶ್ರೀ ಜಗಜ್ಯೋತಿ ಬಸವೇಶ್ವರ ವೃತ್ತ ನಿರ್ಮಾಣಕ್ಕೆ ಶೀಘ್ರ ಕ್ರಮ: ಎನ್.ಎಸ್ ಬೋಸರಾಜುಪ್ರದೋಷ್ ಮಾಫಿ ಸಾಕ್ಷಿ ವಿಚಾರಣೆ ವೇಳೆ ತಲೆ ಮೇಲೆ ಕೈ ಇಟ್ಟು ಕುಳಿತ ದರ್ಶನ್ಸಚಿವ ಲಕ್ಷ್ಮಣ ಸವದಿಗೆ ಸಮನ್ಸ್‌ ಜಾರಿ : ಖುದ್ದು ಹಾಜರಾಗಲು ಕೋರ್ಟ್​​​​​ಗೆ ಆದೇಶ ವಿಜಯೇಂದ್ರ ಕ್ಷೇತ್ರದಿಂದಲೇ ಭಾರತ್ ಜೋಡೋ-2 ಪಾದಯಾತ್ರೆ: ಬಿ.ಕೆ.ಹರಿಪ್ರಸಾದ್ ಘೋಷಣೆ ರಾಜನಾಥ್ ಸಿಂಗ್ ಭೇಟಿಯಾದ ಡಿ.ಕೆ ಶಿವಕುಮಾರ್ : ಪ್ರಮುಖ ಬೇಡಿಕೆಗಳ ಕುರಿತು ಮನವಿ ಡಿವೋರ್ಸ್ ಗೆ ವಿರೋಧ : ಪತಿ ಮನೆ ಮುಂದೆ ನಾಲ್ಕು ದಿನಗಳಿಂದ ಧರಣಿ ಕುಳಿತ ಪತ್ನಿರೈತರ ಪಂಪ್‌ಸೆಟ್‌ಗಳಿಗೆ ನಿರಂತರ 10 ಗಂಟೆ ವಿದ್ಯುತ್ ನೀಡಬೇಕು:ನೀರಮಾನ್ವಿ ಗ್ರಾಮದ ರೈತರ ಮನವಿಕಿತ್ತೂರ ಉತ್ಸವದ ಯಶಸ್ವಿಗೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯ : ಸಚಿವ ಸತೀಶ ಜಾರಕಿಹೊಳಿ