LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಮಾನ್ವಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕರಡು ಮತದಾರರ ಪಟ್ಟಿ ಬಿಡುಗಡೆ

Advertisement

ಮಾನ್ವಿ: ಭಾರತ ಚುನಾವಣೆ ಆಯೋಗದ ಸೂಚನೆಯಂತೆ ಮಾನ್ವಿ ತಾಲೂಕಿನಲ್ಲಿ ಎಸ್.ಐ.ಆರ್. ಪ್ರಕ್ರಿಯೆಯನ್ನು ನಡೆಸಲಾಯಿತು. ಎಸ್.ಐ.ಆರ್‌ಗೆ ಸಾರ್ವಜನಿಕರು ಉತ್ತಮ ಸಹಕಾರವನ್ನು ನೀಡಿದ್ದಾರೆ ಎಂದು ತಹಶೀಲ್ದಾರ್ ಭೀಮರಾಯ ಬಿ.ರಾಮಸಮುದ್ರ ತಿಳಿಸಿದರು.
ಪಟ್ಟಣದ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ 55- ಮಾನ್ವಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕರಡು ಮತದಾರರ ಪಟ್ಟಿಯನ್ನು ಬಿಡುಗಡೆಗೊಳಿಸಿ ಮಾತನಾಡಿ. 55- ಮಾನ್ವಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ 276 ಮತಗಟ್ಟೆಗಳಲ್ಲಿ 2,45,968 ಒಟ್ಟು ಮತದಾರರಿದ್ದು. ಶೇ 100 ರಷ್ಟು ಮ್ಯಾಪಿಂಗ್ ನಡೆಸಲಾಗಿದೆ ,ಮನೆ,ಮನೆ ಭೇಟಿ ಮಾಡಿ 2,45,968 ಶೇ100 ರಷ್ಟು ಗಣತಿ  ನಮೂನೆಗಳನ್ನು ವಿತರಿಸಲಾಗಿದೆ. ಅವುಗಳಲ್ಲಿ 1.99,441 ಶೇ 81.8 ರಷ್ಟು ಗಣಕೀಕರಣ ಮಾಡಲಾಗಿದೆ. ಒಟ್ಟು ಮತದಾರರಲ್ಲಿ 6,522 ಮತದಾರರು ಮೃತಪಟ್ಟಿದು, 3316 ಮತದಾರರು ಪತ್ತೆಯಾಗಿಲ್ಲ ಅಥಾವ ಗೈರಾಗಿದ್ದಾರೆ. 30,256 ಮತದಾರರು ಶಾಶ್ವತವಾಗಿ ಬೇರೆಕಡೆ ಸ್ಥಳಂತರಗೊಂಡಿದ್ದಾರೆ. ಬೇರೆ ಮತಪಟ್ಟಿಯಲ್ಲಿ ಸೇರಿದವರು 6372, ಇತರೆ ಒಟ್ಟು46527 ಶೇ 18 ರಷ್ಟು ಇರುತ್ತಾರೆ. ಎಲ್ಲಾ  ಮತದಾರರು ನಿಮ್ಮಹೆಸರುಗಳು ಕರಡು  ಮತದಾರರ ಪಟ್ಟಿಯಲ್ಲಿ ಎಂದು ಪರಿಶೀಲಿಸಿಕೊಳ್ಳಬೇಕು. ಹಕ್ಕು ಮತ್ತು ಅಕ್ಷೇಪಣೆಗಳಿಗೆ ಅಗಷ್ಟ ಮತ್ತು ಸೆಪ್ಟಂಬರ್ 23 ರವರೆಗೆ ಕಾಲಾವಕಾಶ  ನೀಡಲಾಗಿದೆ ಹೊಸಮತದಾರರ ನೊಂದಣಿಗೆ ನಮೂನೆ 6 ರಲ್ಲಿ  ಅನ್ ಲೈನ್ ಅಥಾವಾ  ಬಿ.ಎಲ್.ಓ.ಗಳ ಮೂಲಕ  ಅರ್ಜಿ ಸಲ್ಲಿಸಬಹುದು. ಅ.27 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಗೊಳ್ಳಲಿದೆ ಎಂದು ತಿಳಿಸಿದರು. ಬಿ.ಎಲ್.ಓ.ಗಳು ಹಾಗೂ ಚುನಾವಣ ಸಿಬ್ಬಂದಿಗಳು ಇದ್ದರು.
ವರದಿ : ಆಂಜನೇಯ ನಸಲಾಪುರ

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST