LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
International News

ಸುದೀರ್ಘ ಕಾಲದ ಗೆಳತಿ ಜಾರ್ಜಿನಾ ರೋಡ್ರಿಗಸ್ ಕೈ ಹಿಡಿದ ರೋನಾಲ್ಡೋ: ಫೋಟೋ ವೈರಲ್

Advertisement

ಪೊರ್ಚುಗಲ್ ಫುಟ್ಬಾಲ್ ಲೋಕದ ದಿಗ್ಗಜ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ತಮ್ಮ ಸುದೀರ್ಘ ಕಾಲದ ಗೆಳತಿ ಜಾರ್ಜಿನಾ ರೋಡ್ರಿಗಸ್ ಅವರೊಂದಿಗೆ ವಿವಾಹವಾಗಿದ್ದಾರೆ.

ಈ ವಿಷಯವನ್ನು ರೊನಾಲ್ಡೋ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಪ್ರಕಟಿಸುವ ಮೂಲಕ ಅಧಿಕೃತವಾಗಿ ದೃಢಪಡಿಸಿದ್ದಾರೆ.

ಜಾರ್ಜಿನಾ ಅವರ ಕೈ ಹಿಡಿದು ಮದುವೆಯ ಉಂಗುರ ಧರಿಸಿರುವ ಸುಂದರವಾದ ಚಿತ್ರವನ್ನು ಹಂಚಿಕೊಂಡಿರುವ ಅವರು, ತಮ್ಮಿಬ್ಬರ ಹೆಸರಿನ ಮೊದಲ ಅಕ್ಷರಗಳನ್ನು ಸೇರಿಸಿ ಪ್ರೀತಿಯ ಸಂಕೇತದೊಂದಿಗೆ ಪೋಸ್ಟ್ ಮಾಡಿದ್ದಾರೆ.

ಇನ್ನೊಂದೆಡೆ, ಇತ್ತೀಚೆಗೆ ಮುಕ್ತಾಯಗೊಂಡ 2026ರ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ರೊನಾಲ್ಡೋ ಪೋರ್ಚುಗಲ್ ತಂಡವನ್ನು ಮುನ್ನಡೆಸಿದ್ದರು. ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿದ್ದ ಪೋರ್ಚುಗಲ್, ಪ್ರಿ-ಕ್ವಾರ್ಟರ್ ಫೈನಲ್ ಹಂತದಲ್ಲಿ ಸ್ಪೇನ್ ವಿರುದ್ಧ ಮುಖಾಮುಖಿಯಾಗಿತ್ತು. 

ತೀವ್ರ ಕುತೂಹಲ ಕೆರಳಿಸಿದ್ದ ಈ ಪಂದ್ಯದ ಕೊನೆಯ ಹಂತದಲ್ಲಿ ಸ್ಪೇನ್ ತಂಡದ ಮೈಕೆಲ್ ಮೆರಿನೋ ಬಾರಿಸಿದ ನಿರ್ಣಾಯಕ ಗೋಲಿನಿಂದಾಗಿ ಪೋರ್ಚುಗಲ್ 1-0 ಅಂತರದಲ್ಲಿ ಸೋಲನುಭವಿಸಿ ಟೂರ್ನಿಯಿಂದ ಹೊರಬಿದ್ದಿತು.

ಬ್ರೂನೋ ಫೆರ್ನಾಂಡಿಸ್ ಮತ್ತು ರೊನಾಲ್ಡೋ ಅವರಿಗೆ ಸಿಕ್ಕ ಉತ್ತಮ ಅವಕಾಶಗಳು ಗೋಲಾಗಿ ಪರಿವರ್ತನೆಯಾಗದಿದ್ದುದು ತಂಡದ ಹಿನ್ನಡೆಗೆ ಕಾರಣವಾಯಿತು.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕರ್ನಾಟಕದಲ್ಲಿ ತಂಬಾಕು, ಪಾನ್ ಮಸಾಲಾ ಒಂದು ವರ್ಷದ ಅವಧಿಗೆ ನಿಷೇಧ : ರಾಜ್ಯ ಸರ್ಕಾರ ಆದೇಶನಾಳೆಯಿಂದ ಮುಂಗಾರು ಅಧಿವೇಶನ : ಡಿ.ಕೆ.ಶಿವಕುಮಾರ್ ಗೆ ಅಗ್ನಿಪರೀಕ್ಷೆ ಗಿಲ್ಲೆಸುಗೂರು ಕ್ಯಾಂಪ್‌ನಲ್ಲಿ ದೇವಸ್ಥಾನ ಹಾಗೂ ಚರ್ಚ್ ವಿಚಾರವಾಗಿ ಎರಡು ಗುಂಪುಗಳ ನಡುವೆ ಗಲಾಟೆ  ಕಾಳಗಿ ಪಟ್ಟಣದಲ್ಲಿ ರೈತರ ರಸ್ತೆ ತಡೆದು ಬೃಹತ್ ಪ್ರತಿಭಟನೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೊಬೈಲ್, ಪೆನ್ ಡ್ರೈವ್ ಪತ್ತೆ : ಪ್ರಜ್ವಲ್ ರೇವಣ್ಣ ಎಫ್‌ಐಆರ್ ದಾಖಲುರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಆತ್ಮಕಥನ ಬಿಡುಗಡೆ ಸುದೀರ್ಘ ಕಾಲದ ಗೆಳತಿ ಜಾರ್ಜಿನಾ ರೋಡ್ರಿಗಸ್ ಕೈ ಹಿಡಿದ ರೋನಾಲ್ಡೋ: ಫೋಟೋ ವೈರಲ್10, 20, 100 ಪ್ಲಾಸ್ಟಿಕ್ ನೋಟುಗಳ ಬಳಕೆಗೆ ಕೇಂದ್ರ ಸರ್ಕಾರ ಅನುಮೋದನೆಎಲೆಕ್ಟ್ರಿಕ್ ಬೈಕ್ ಶೋರೂಂನಲ್ಲಿ ಭೀಕರ ಅಗ್ನಿ ಅವಘಡ : 100ಕ್ಕೂ ಹೆಚ್ಚು ಬೈಕ್‌ಗಳು ಬೆಂಕಿಗೆ ಆಹುತಿಭೀಕರ ಅಪಘಾತ : ಕೂಲಿ ಕೆಲಸಕ್ಕೆ ಹೋಗಿದ್ದ 7 ಜನ ಸ್ಥಳದಲ್ಲೇ ಸಾವು