ಮಾನ್ವಿ : ಕೇಂದ್ರ ಸರ್ಕಾರವು ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಸಚಿವ ಸತೀಶ್ ಜಾರಕಿಹೊಳಿಯವರ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ಮೂಲಕ ದಾಳಿ ನಡೆಸಿ ಅವರನ್ನು ರಾಜಕೀಯವಾಗಿ ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ ಎಂದು ತಿಪ್ಪಣ್ಣ ಬಾಗಲವಾಡ ಆರೋಪಿಸಿದರು.
ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ತಾಲೂಕ ಪ್ರಗತಿಪರ ವಿವಿದ ಸಂಘಟನೆಗಳ ಒಕ್ಕೂಟ ಮಾನ್ವಿ ವತಿಯಿಂದ ಸತೀಶ್ ಜಾರಕಿಹೊಳಿಯವರ ಅವರ ಮೇಲಿನ ರಾಜಕೀಯ ಪ್ರೇರಿತ ಇಡಿ ದಾಳಿಯನ್ನು ಖಂಡಿಸಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.ನಂತರ ಮಾತನಾಡಿ ಸತೀಶ್ ಜಾರಕಿಹೊಳಿಯವರು ಬುದ್ಧ, ಬಸವಣ್ಣ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ತತ್ವ-ಸಿದ್ಧಾಂತಗಳನ್ನು ಅನುಸರಿಸಿಕೊಂಡು ಸಾಮಾಜಿಕ ನ್ಯಾಯಕ್ಕಾಗಿ ನಿರಂತರವಾಗಿ ಹೋರಾಡುತ್ತಿರುವ ನಾಯಕರಾಗಿರುವ ಸತೀಶ್ ಜಾರಕಿಹೊಳಿಯವರ ಬೆಳವಣಿಗೆಯನ್ನು ಸಹಿಸಲಾಗದೆ ಕೇಂದ್ರ ಸರ್ಕಾರ ಇಂತಹ ಪಿತೂರಿ ನಡೆಸುತ್ತಿದೆ ಎಂದು ದೂರಿದರು.
ಸಾಮಾನ್ಯ ಕ್ಷೇತ್ರದಿಂದ ಗೆದ್ದು ಜನಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿರುವ ದಲಿತ ಸಮುದಾಯದ ಪ್ರಮುಖ ನಾಯಕರಲ್ಲಿ ಸತೀಶ್ ಜಾರಕಿಹೊಳಿಯವರು ಒಬ್ಬರಾಗಿದ್ದು, ಅವರಂತಹ ನಾಯಕರನ್ನು ಗುರಿಯಾಗಿಸಿಕೊಂಡು ಹತ್ತಿಕ್ಕುವ ಪ್ರಯತ್ನ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಹೇಳಿದರು.
ಇಂತಹ ಕ್ರಮಗಳನ್ನು ದಲಿತ ಸಮುದಾಯ ಖಂಡಿಸುತ್ತಿದ್ದು, ಮುಂದಿನ ದಿನಗಳಲ್ಲಿ ಪ್ರಜಾಪ್ರಭುತ್ವದ ಮಾರ್ಗದಲ್ಲಿ ತಕ್ಕ ಉತ್ತರ ನೀಡಲಿದೆ ಎಂದು ತಿಪ್ಪಣ್ಣ ಬಾಗಲವಾಡ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಜನವಿರೋಧಿ ಧೋರಣೆ ಹಾಗೂ ತನಿಖಾ ಸಂಸ್ಥೆಗಳ ದುರ್ಬಳಕೆ ಖಂಡಿಸಿ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಪ್ರತಿಭಟನೆಯಲ್ಲಿ ಬಾಲಸ್ವಾಮಿ ಕೊಡ್ಲಿ,ಬಿ ಕೆ ಅಮರೇಶಪ್ಪ ವಕೀಲರು ಬುಡ್ಡಪ್ಪ ನಾಯಕ,ಜಿಶಾನ ಅಖಿಲ್ ಸಿದ್ದಿಕಿ, ಹನುಮೇಶ ನಾಯಕಅಯ್ಯಪ ನಾಯಕ ಮ್ಯಾಕಲ್ ಖಾಲಿದ್ ಖಾದ್ರಿ ಸಿದ್ದಲಿಂಗಪ್ಪ ವಕೀಲರು,ಸೇರಿದಂತೆ ಇನ್ನಿತರರು ಮಾತನಾಡಿ ಸತೀಶ್ ಜಾರಕಿಹೊಳಿ ಅವರು ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿಯಾಗಿದ್ದು, ಇಂತಹ ಬೆದರಿಕೆಗಳಿಗೆ ಅಥವಾ ಇ.ಡಿ ದಾಳಿಗಳಿಗೆ ಹೆದರುವ ಪ್ರಶ್ನೆಯೇ ಇಲ್ಲ. ಕಾನೂನಾತ್ಮಕ ಹೋರಾಟದ ಮೂಲಕ ಸತ್ಯವು ಶೀಘ್ರದಲ್ಲೇ ಹೊರಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕಾಂಗ್ರೆಸ್ ನಾಯಕರ ವಿರುದ್ಧ ಇಂತಹ ರಾಜಕೀಯ ಪಿತೂರಿಗಳು ಮತ್ತು ಸೇಡಿನ ರಾಜಕಾರಣ ಮುಂದುವರಿದರೆ, ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಈ ಪ್ರತಿಭಟನೆಯಲ್ಲಿ ಗುರುನಾಥ ನಾಯಕ, ಶಿವರಾಜ ನಾಯಕ ಸಾಹುಕಾರ್,ಸಿದ್ರಾಮಪ್ಪ ನೀರಮಾನ್ವಿ, ಚಂದ್ರಶೇಖರ ಕುರ್ಡಿ, ನರಸಿಂಹ ನಾಯಕ ಕರಡಿಗುಡ್ಡ, ಹನುಮಂತಪ್ಪ ವಕೀಲರು ದೇವಿಪುರ ಅಂಬಣ್ಣ ನಾಯಕ, ರಾಮಣ್ಣ ನಾಯಕ, ಅರುಣ್ ಕುಮಾರ್ ಬಲ್ಲಟಗಿ,ನಾಯ್ಡು ನಾಯಕ, ಲಿಂಗಯ್ಯ ನಾಯಕ,ಶರಣಬಸವ ನಾಯಕ, ಜಲ್ಲಿ ಆಂಜನೇಯ ನಾಯಕ, ಚನ್ನಬಸವ ನಾಯಕ ವಕೀಲರು,ನೀರಮಾನ್ವಿ ಜಾನೇಕಲ್,ಅಯ್ಯಪ್ಪ ನಾಯಕ, ಜಯಕುಮಾರ ನಾಯಕ,ಬಸವರಾಜ್ ಬಾಗಲವಾಡ, ಮಂಜುನಾಥ ಜಾನೇಕಲ್, ವೆಂಕಟೇಶ್ ನಾಯಕ ಮಾನ್ವಿ, ವಿಶ್ವನಾಥ ಮುಷ್ಟೂರ್, ನಾಗರೆಡ್ಡಿ ಸಿಕಲ್, ರಮೇಶ ನಾಯಕ ಊಟಕನೂರ್,ಕೊಂಡಯ್ಯ ನಾಯಕ, ಅಮರೇಶ ನಾಯಕ ಜಾನೇಕಲ್, ಮಹಾಂತೇಶ್ ನಾಯಕ ತಡಕಲ್,ಗಂಗಯ್ಯ ನಾಯಕ, ನರಸಯ್ಯ ನಾಯಕ ಮ್ಯಾಕಲ್, ವಿನೋದ್ ನಾಯಕ, ಅಮರೇಶ ನಂದಿಹಾಳ ಮುದಿರೆಡ್ಡಿ ನಾಯಕ ಬಸವನಗೌಡ ಊಟಕನೂರ, ಮಲ್ಲು ನಾಯಕ ತಡಕಲ್, ಬಾಲಯ್ಯ ನಾಯಕ ದೇವಿಪುರ, ತಾಯಣ್ಣ ನಾಯಕ, ಅಂಬಣ್ಣ ನಾಯಕ ಉಮಳಿ ಹೊಸೂರು ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಹಾಗೂ ನೂರಾರು ಅಭಿಮಾನಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು.


