LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
National News

ಹಿರಿಯ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಆಸ್ಪತ್ರೆಗೆ ದಾಖಲು

Advertisement

ಮುಂಬೈ: ಹಿರಿಯ ಸಮಾಜ ಸೇವಕ ಅಣ್ಣಾ ಹಜಾರೆ ಅವರು ವೈರಲ್‌ ಸೋಂಕು, ತೀವ್ರ ನಿರ್ಜಲೀಕರಣ ಹಾಗೂ ಮೂತ್ರಪಿಂಡದ ಸಮಸ್ಯೆಯಿಂದಾಗಿ ಸೋಮವಾರ ಮುಂಬೈನ ಆಸ್ಪತ್ರೆಗೆ ದಾಖಲಾಗಿದ್ದಾರೆ.

89 ವರ್ಷದ ಹಜಾರೆ ಅವರಿಗೆ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ನೀಡಲಾಗುತ್ತಿದೆ.ವೈದ್ಯ ಗೌತಮ್‌ ಭನ್ಸಾಲಿ ಅವರ ನೇತೃತ್ವದಲ್ಲಿ ಚಿಕಿತ್ಸೆ ಮುಂದುವರಿದಿದೆ.

ಅಣ್ಣಾ ಹಜಾರೆ ಅವರನ್ನು ಅವರ ಗ್ರಾಮದ ಆರೈಕೆದಾರರೊಂದಿಗೆ ಹೃದಯ ಸಂಬಂಧಿತ ತುರ್ತು ಚಿಕಿತ್ಸಾ ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆತರಲಾಗಿದೆ. ಹಜಾರೆ ಅವರ ವಿವಿಧ ವೈದ್ಯಕೀಯ ಪರೀಕ್ಷೆಗಳು ನಡೆಯುತ್ತಿದ್ದು, ವರದಿಗಳ ಆಧಾರದ ಮೇಲೆ ಮುಂದಿನ ಚಿಕಿತ್ಸೆಯನ್ನು ನಿರ್ಧರಿಸಲಾಗುವುದು ಎಂದು ಡಾ. ಗೌತಮ್‌ ಭನ್ಸಾಲಿ ತಿಳಿಸಿದ್ದಾರೆ.

2011ರಲ್ಲಿ ನಡೆದ 'ಇಂಡಿಯಾ ಎಗೇನ್ಸ್ಟ್‌ ಕರಪ್ಷನ್‌' (ಭ್ರಷ್ಟಾಚಾರದ ವಿರುದ್ಧ ಭಾರತ) ಆಂದೋಲನದ ಮೂಲಕ ಅಣ್ಣಾ ಹಜಾರೆ ಅವರು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದರು.

ಅದಕ್ಕೂ ಮುನ್ನ ಮಹಾರಾಷ್ಟ್ರದಲ್ಲಿ ಸಾಮಾಜಿಕ ಸೇವೆ ಹಾಗೂ ಭ್ರಷ್ಟಾಚಾರ ವಿರೋಧಿ ಹೋರಾಟದ ಮೂಲಕ ಅವರು ಜನಪ್ರಿಯರಾಗಿದ್ದರು. ಇತ್ತೀಚಿನ ಸಿಜೆಪಿ ಹೋರಾಟದ ವೇಳೆಯೂ ಸಾಂಕೇತಿಕ ಧರಣಿ ನಡೆಸಿದ್ದರು.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಐವಿಎಫ್ ಮೂಲಕ ಜನ್ಮ ನೀಡಿದ ಅವಳಿ ಶಿಶು ಕೊಂದು ತಾಯಿ ಆತ್ಮಹತ್ಯೆಗೆ ಯತ್ನಬೆಂಗಳೂರಿನಲ್ಲಿ 31 ಬಾಂಗ್ಲಾ ಪ್ರಜೆಗಳು ಗಡಿಪಾರುಎಸ್ಸೆಸ್ಸೆಲ್ಸಿ ಯಲ್ಲಿ ಗರಿಷ್ಠ ಅಂಕ ಪಡೆದ ವಿದ್ಯಾರ್ಥಿಗಳಿಗೆ 50 ಸಾವಿರ ರೂ. ನಗದು ಬಹುಮಾನ : ಮಧು ಬಂಗಾರಪ್ಪ ದಕ್ಷಿಣ ಆಪ್ರಿಕಾಗೆ 43 ರನ್ ಗಳ ಸುಲಭ ಜಯಉತ್ತರ ವಲಯ ತಂಡಕ್ಕೆ 139 ರನ್ ಗಳ ಲೀಡ್ಶಿವಾನಂದ ತಗಡೂರು ರಾಜಿನಾಮೆ, ಸಮಗ್ರ ತನಿಗೆ ಒತ್ತಾಯ ಮುಂಬೈ ಇಂಡಿಯನ್ಸ್ ತರಬೇತುದರರಾಗಿ ಜಯವರ್ಧನೆ ಮುಂದುವರಿಕೆ ತಂಡಕ್ಕೆ ಮರಳಿದ ಬುಮ್ರಾ: ನಾಯಕನಾಗಿ ಅಯ್ಯರ ಮುಂದುವರಿಕೆ ಅಂಗವಿಕಲರ ವೇತನಕ್ಕೆ ಲಂಚಕ್ಕೆ ಬೇಡಿಕೆ : ಉಪ ತಹಶೀಲ್ದಾರ್‌ಗೆ 4 ವರ್ಷ ಜೈಲು ಶಿಕ್ಷೆ, ₹40 ಸಾವಿರ ದಂಡಒಕ್ಕಲಿಗ ವಿದ್ಯಾರ್ಥಿಗಳಿಗೆ ಪುರಸ್ಕಾರ / ಮಠದ ಮೆಡಿಕಲ್ ಕಾಲೇಜಿನಲ್ಲಿ “ಭಕ್ತ, ಜಾತಿ, ಅಭಿಮಾನಿ" ಕೋಟಾ ಇಲ್ಲ:   ಪ್ರಸನ್ನನಾಥ ಶ್ರೀಗಳು